ಬದುಕಿನ ಒಳಗೊಂದು ಬದುಕು ಇದೆ ಎಂಬ ಅನುಭವನ್ನು ನೀಡಿದವರು ಜೋರಾಪೂರ: ಟಿ.ಎನ್‌. ಭಾಸ್ಕರ

  ಬದುಕಿನ ಒಳಗೊಂದು ಬದುಕು ಇದೆ ಎಂಬ ಅನುಭವನ್ನು ನೀಡಿದವರು ಜೋರಾಪೂರ: ಟಿ.ಎನ್‌. ಭಾಸ್ಕರ Jorapura is the one who gave the experience that there is a life within life: T.N. Bhaskara

ಲೋಕದರ್ಶನ ವರದಿ 

 ಬೆಳಗಾವಿ 12: ಕವನಗಳನ್ನು ಬರೆಯುವುದು ಸುಲಭ. ಆದರೆ ನಮ್ಮ ಜೋರಾಪೂರ ಅವರು ರಚನೆ ಮಾಡಿರುವ ಗದ್ಯ ಸಾಹಿತ್ಯ ಕೃತಿಗಳಂತ ಕೃತಿಗಳನ್ನು ಬರೆಯುವುದು ತುಂಭಾ ಕಷ್ಟದ ಕೆಲಸ. ಅದರಲ್ಲೂ ಗದ್ಯದಲ್ಲಿ ಪದ್ಯದ ಲಯವನ್ನು ತರುವುದು ಇನ್ನೂ ಕಷ್ಟದ ಕೆಲಸ. ಅಂತಹ ಸಾಹಸಮಯ ಕೆಲಸವನ್ನು ಡಾ. ಜೋರಾಪೂರ ಅವರು ಅತ್ಯಂತ ಪರಿಣಾಮಕಾರಿಯಾಗಿ ಮಾಡಿದ್ದಾರೆ. ಜೋರಾಪೂರ ಅವರು ಗದ್ಯ ಸಾಹಿತ್ಯದ ಶ್ರೇಷ್ಠ ಸಾಧಕ ಎಂದು ಗದುಗಿನ ತೋಂಟದಾರ್ಯ ಡಾ. ಸಿದ್ದರಾಮ ಮಹಾಸ್ವಾಮಿಗಳು ಶ್ಘಾಘಿಸಿದರು. 

ಇದೇ ಸೋಮವಾರ ಕನ್ನಡ ಭವನದಲ್ಲಿ ಡಾ. ಸಿ. ಕೆ. ಜೋರಾಪೂರ ಅವರ ಅಮೃತ ಮಹೋತ್ಸವ ಸಮಾರಂಭ ‘ಅದಮ್ಯ ಚೇತನ’ ಅಭಿನಂದನ ಗ್ರಂಥ ಲೋಕಾರೆ​‍್ಣ ಮತ್ತು ಸನ್ಮಾನ ಕಾರ್ಯಕ್ರಮ ಡಾ. ಶಿವು ನಂದಗಾವಿಯವರ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಸಮಾರಂಭದಲ್ಲಿ ಪೂಜ್ಯಶ್ರೀ ಗುರುಸಿದ್ಧ ಸ್ವಾಮಿಗಳು, ಕಿತ್ತೂರ ಕಲ್ಮಠ ಮಠದ ಮಡಿವಾಳೇಶ್ವರ ಸ್ವಾಮಿಗಳು, ಡಾ. ಸಿದ್ಧರಾಮ ಸ್ವಾಮಿಗಳು ವಹಿಸಿ ಮಾತನಾಡಿ, ಸಾಹಿತಿ ಡಾ. ಸಿ. ಕೆ. ಜೋರಾಪೂರ ಅವರು ನಾಡು-ನುಡಿಗೆ ಸೀಮಿತರಾಗಿರದೆ ಅನೇಕ ಸಾಹಿತ್ಯಕ ಕೃತಿಗಳನ್ನು ರಚಿಸಿ ಒಳ್ಳೆಯ ಹೆಸರು ಪಡೆದು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು. 

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜನಪದ ವಿಶ್ವವಿದ್ಯಾಲಯದ ಕುಲಪತಿ ಟಿ. ಎನ್‌. ಭಾಸ್ಕರ ಅವರು, ಸಾಹಿತಿ ಡಾ. ಸಿ. ಕೆ. ಜೋರಾಪೂರ ಅವರು ದೇಶ ನಾಡು ಸಮಾಜಕ್ಕೆ ಸಂದೇಶ ನೀಡುವ ಹಲವಾರು ಕಥೆ ಕಾದಂಬರಿಗಳನ್ನು ರಚನೆ ಮಾಡಿದ್ದಾರೆ. ಸಂಘ-ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಅವರ ಹೋರಾಟದ ಬದುಕು ಬಹು ವಿಸ್ತಾರವಾಗಿದೆ. ಅಷ್ಟೇ ವಿಶಾಲವಾಗಿದೆ. ಇದರಾಚೆಗೆ ಒಂದು ಬದುಕು ಅಲ್ಲ, ಬದುಕಿನ ಒಳಗೊಂದು ಬದುಕು ಇದೆ ಎಂಬ ಅನುಭವನ್ನು ಅವರು ನೀಡಿದ್ದಾರೆ ಎಂದು ಹೇಳಿದರು. 

ಸಮಾರಂಭದಲ್ಲಿ ಶ್ರೀಗಳು ಗಣ್ಯಮಾನ್ಯರು ಮತ್ತು ಅಭಿಮಾನಿಗಳು ಜೋರಾಪೂರ ದಂಪತಿಗಳನ್ನು ಸನ್ಮಾನಿಸಿದರು.  ಅಧ್ಯಕ್ಷತೆಯನ್ನು ಡಾ. ಹೆಚ್‌. ಬಿ. ರಾಜಶೇಖರ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೋವಿಂದಪ್ಪ ಗೌಡಪ್ಪಗೋಳ, ರಾಘವೇಂದ್ರ ಕಾಗವಾಡ ಉಪಸ್ಥಿತರಿದ್ದರು. ‘ಅದಮ್ಯ ಚೇತನ’ ಅಭಿನಂದನ ಗ್ರಂಥವನ್ನು ಡಾ. ಸಿದ್ಧರಾಮ ಸ್ವಾಮಿಗಳು ಲೋಕಾರೆ​‍್ಣಗೊಳಿಸಿದರೆ, ಪ್ರಭಾಕ ಉಳ್ಳಾಗಡ್ಡಿಯವರು ಗ್ರಂಥದ ಕುರಿತು ಅಭಿನಂದಪರ ನುಡಿಗಳನ್ನಾಡಿದರು.  

ಜೋರಾಪೂರ ಅವರು ತಮ್ಮ ಆತ್ಮೀಯರಾದ ಶಿವಾ ಆಫ್‌ಸೆಟ್ ​‍್ರಿಂಟರ​‍್ಸ‌ ಮಾಲಿಕರಾದ ಶಿವು ನಂದಗಾವಿ ದಂಪತಿಗಳನ್ನು, ಉದಯ ಸಹ ಸಂಪಾದಕರಾದ ರಜನಿಕಾಂತ ಯಾದವಾಡೆಯವರನ್ನು ಹಾಗೂ ಕಸಾಪ ಅಧ್ಯಕ್ಷಿ ಮಂಗಲಾ ಮೆಟಗುಡ, ಶಾಂತಾದೇವಿ ಹುಲೆಪ್ಪನವರಮಠ, ನಿರೂಪಾದಯ್ಯ ಕಲ್ಲೋಳ್ಳಿಮಠ, ವಿಠಲ ಬಡಿಗೇರ, ಬಸವರಾಜ ಗಾರ್ಗಿ ಹೀಗೆ ಅನೇಕ 60 ಜನ ಗಣ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು.