ಅಂತರರಾಷ್ಟ್ರೀಯ

ಅಫ್ಘಾನಿಸ್ತಾನದಿಂದ ಆಗಸ್ಟ್ 31 ರೊಳಗೆ ಸೇನೆ ವಾಪಸ್ಸು : ಜೋ ಬೈಡೆನ್

ಅಫ್ಘಾನಿಸ್ತಾನದಿಂದ ಆಗಸ್ಟ್ 31 ರೊಳಗೆ   ಸೇನೆ ವಾಪಸ್ಸು  : ಜೋ  ಬೈಡೆನ್

ವಾಷಿಂಗ್ಟನ್‌,  ಜುಲೈ 9:  ಅಮೆರಿಕಾ ಅಧ್ಯಕ್ಷ  ಜೋ ಬೈಡನ್ ಅಫ್ಘಾನಿಸ್ತಾನದಿಂದ   ತನ್ನ ದೇಶದ   ಸೇನೆಯನ್ನು  ವಾಪಸ್ಸು ಕರೆಸಿಕೊಳ್ಳುವ    ತಮ್ಮ ನಿರ್ಧಾರವನ್ನು  ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಅಫ್ಘಾನಿಸ್ತಾನದಲ್ಲಿ  ಅಮೆರಿಕಾದ  ಕಾರ್ಯಾಚರಣೆ  ಆಗಸ್ಟ್‌  31ಕ್ಕೆ  ಮುಗಿಯಲಿದೆ  ಎಂದು   ಅವರು ಹೇಳಿದ್ದಾರೆ.

ಅಮೆರಿಕಾ   ಸೇನೆಯನ್ನು  ಅಫ್ಘಾನಿಸ್ತಾನದಿಂದ  ಹಿಂತೆಗೆದುಕೊಳ್ಳುವುದನ್ನು  ಬೈಡನ್ ಸಮರ್ಥಿಸಿಕೊಂಡರು.  ಅಮೆರಿಕಾ    ಸೇನಾ    ಕ್ರಮಗಳು    ಜನರ ಜೀವ  ಉಳಿಸಿವೆ  ಎಂದು ಅವರು  ತಿಳಿಸಿದ್ದಾರೆ. 

ತಾಲಿಬಾನ್ ಅಫ್ಘಾನಿಸ್ತಾನದ ಹೆಚ್ಚಿನ   ಪ್ರದೇಶಗಳ  ಮೇಲೆ  ನಿಯಂತ್ರಣ    ಸಾಧಿಸುತ್ತಿರುವ   ಸಂದರ್ಭದಲ್ಲಿ    ಅಧ್ಯಕ್ಷ  ಬೈಡನ್‌  ಈ  ಹೇಳಿಕೆ  ನೀಡಿದ್ದಾರೆ.

2001 ರ ಸೆಪ್ಟೆಂಬರ್ 11 ರಂದು  ನಡೆದ   ಉಗ್ರರ  ದಾಳಿಯ ನಂತರ    ಕಳೆದ  ಸುಮಾರು    20  ವರ್ಷಗಳಿಂದ    ಅಮೆರಿಕಾ  ಸೇನೆ ಅಫ್ಘಾನಿಸ್ತಾನದಲ್ಲಿ ಹೋರಾಡುತ್ತಿದೆ.

2021 ಸೆಪ್ಟೆಂಬರ್  11 ಗಡುವಿನೊಳಗೆ  ಅಮೆರಿಕಾ   ಯೋಧರು  ಸ್ವದೇಶಕ್ಕೆ   ವಾಪಸ್ಸಾಗಬೇಕು  ಎಂದು   ಅಮೆರಿಕಾ  ಅಧ್ಯಕ್ಷ  ಜೋ ಬೈಡನ್‌   ಈ ವರ್ಷದ  ಆರಂಭದಲ್ಲಿ   ಗಡುವು   ವಿಧಿಸಿದ್ದರು. 

ಸುದ್ದಿ ಓದಿ