ಇಂಡಿ ಶಾಸಕರ ವಿರುದ್ಧ ಗುಡುಗಿದ:ಜಿತೇಂದ್ರ ಕಾಂಬಳೆ
Jitendra Kambale thundered against Indi MLAs
ಲೋಕದರ್ಶನ ವರದಿ
ಇಂಡಿ 30: ಸಮಾಜದ ಒಂದು ಹೆಣ್ಣುಮಗುವಿನ ಪರವಾಗಿ ನಿಂತು ಶಾಸಕರಿಗೆ ವಿರೋಧ ವ್ಯಕ್ತಪಡಿಸಿದರೆ ನೀವ್ಯಾಕೆ ನೋವು ಮಾಡಿಕೊಳ್ಳುತ್ತೀರಿ ನೀವು ಕೂಡ ಆ ಮಗುವಿನ ಪರವಾಗಿ ನಿಂತು ಶಾಸಕರಿಗೆ ವಿರೋಧ ಮಾಡಬೇಕಿತ್ತು ಅದನ್ನು ಬಿಟ್ಟು ನನ್ನನ್ನೇ ವಿರೋದಿಸುತ್ತಿರಲ್ಲ ಇದು ಸರೀನಾ ಎಂದು ಸಮಾಜದ ಮುಖಂಡರಿಗೆ ಆರ್ ಪಿ ಅಯ್ ಪಕ್ಷದ ಮುಖಂಡ ಜಿತೇಂದ್ರ ಕಾಂಬಳೆ ಸವಾಲ್ ಒಡ್ಡಿದರು. ನಗರದ ಸ್ಟೇಶನ್ ರಸ್ತೆಯಲ್ಲಿರುವ ಇಂಟರ್ ನ್ಯಾಶನಲ್ ಅಮರ ಹೋಟೆಲಿನಲ್ಲಿ ಆಯೋಜಿಸಿದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಶಾಸಕ ಯಶಾವಂತರಾಯಗೌಡ ಪಾಟೀಲ ಅವರು ಎಲ್ಲಕ್ಕಿಂತಲೂ ಹೆಚ್ಚು ಜಾತಿವಾದಿ ಇದ್ದಾರೆ ಪ್ರತಿಯೊಂದು ಸಮುದಾಯದಲ್ಲಿ ಇಬ್ಬಾಗ ಮಾಡಿ ಒಡೆದಾಳುವ ಪ್ರವೃತ್ತಿ ಹೊಂದಿದ್ದಾರೆ. ನಾನು ಅವರನ್ನು ವಿರೋಧಿಸಿದರೆ ನನ್ನ ಮೇಲೆ ನನ್ನ ಸಮುದಾಯದವರಿಂದ ತೇಜೋವಧೆ ಮಾಡುವುದು. ಅಲ್ಪಸಂಖ್ಯಾತರಲ್ಲಿ ಯಾರಾದರೂ ಅವರನ್ನು ವಿರೋಧಿಸಿದರೆ ಅವರ ಜಾತಿಯವರಿಂದಲೇ ವಿರೋಧಿಸುವುದು ಇಂತಹ ಮನಸ್ಥಿತಿ ಹೊಂದಿರುವುದು ನಮಗೆ ಅರ್ಥವಾಗುವುದಿಲ್ಲವೇ ಎಂದು ಶಾಸಕರ ಮೇಲೆ ಹರಿಹಾಯ್ದರು. ಭೀಮಾ ನದಿಗೆ 16 ಸಾವಿರ ಕ್ಯೂಸೆಕ್ ನೀರು ಹರಿಸಿದ್ದೇನೆ ಎಂದು ಸುಳ್ಳು ಹೇಳುವುದು 4 ಸಾವಿರ 5 ಸಾವಿರ ಕೋಟಿ ರೂಪಾಯಿ ನಮ್ಮ ಕ್ಷೇತ್ರಕ್ಕೆ ಅನುದಾನ ತಂದಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ.
ಹಾಗೇ ಏನಾದರೂ ಅನುದಾನ ತಂದಿದ್ದರೆ ಕ್ಷೇತ್ರದ ತುಂಬಾ ನೋಟಿನ ಮೇಲೆ ರೋಡ ನಿರ್ಮಾಣ ಮಾಡಿದರು ಇನ್ನೂ ನೋಟ್ ಗಳು ಉಳಿಯುತ್ತಿದ್ದವು ಎಂದು ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಸಾಮಾಜದ ಮುಖಂಡ ಮುತ್ತಪ್ಪ ಫೊತೆ ಹಾಗೂ ಪ್ರಶಾಂತ ಕಾಳೆ ಅವರು ಸಮಾಜದ ಒಳಿತಿಗಾಗಿ ಅವರೇನು ಮಾಡಿದ್ದಾರೆ. ಮುತ್ತಪ್ಪ ಪೋತೆ ಅವರು ನಗರದ ಕೋರ್ಟ್ ಮುಂದೆ ಇರುವ ಸಮಾಜದ ಜಾಗ (ಪ್ಲಾಟ್) ಮಾರಿಕೊಂಡಿದ್ದಾರೆ. ಮತ್ತು ಪ್ರಶಾಂತ ಕಾಳೆ ಅವರು ಬೌದ್ಧ ವಿಹಾರ ಕಟ್ಟಡ ಕಾಮಗಾರಿ ಯಲ್ಲಿ ಅವರ ಸಹೋದರನ ಹೆಸರಿನಲ್ಲಿ ಹಣ ವರ್ಗಾವಣೆ ಮಾಡಿದ್ದಾರೆ ಸದ್ಯ ಈ ಪ್ರಕರಣ ಲೋಕಾಯುಕ್ತ ಕಚೇರಿಯಲ್ಲಿ ಕೆಸ್ ಇದೆ. ಹಾಗೇನಾದರೂ ನಾನು ಮಾಡಿದ್ದೀನಾ ಎಂದು ಹೇಳಿದರು. ನನ್ನನ್ನು ರೌಡಿ ಎಂದು ಕರೆಯುತ್ತೀರಿಯಲ್ಲ 2006 ರಲ್ಲಿ ಮಹಾದೇವ ಹರಿಜನ ಎಂಬ ವ್ಯಕ್ತಿಯನ್ನು ತಾಂಬಾ ಗ್ರಾಮದಲ್ಲಿ ಕೊಲೆ ಮಾಡಿ ಹಿರೇಬೇವನೂರ ಗ್ರಾಮದಲ್ಲಿ ತಂದು ಹಾಕಿ ಎಕ್ಸೈಜೆಂಟ್ ಅಂತ ಬಿಂಬಿಸಿ ಕೇಸ್ ಮುಚ್ಚಿ ಹಾಕಿದ್ದರು ಅದರ ವಿರುದ್ಧ ಹೋರಾಟ ಮಾಡಿ ಅದು ಎಕ್ಸೀಜೆಂಟ್ ಅಲ್ಲ ಕೊಲೆ ಎಂದು ಪ್ರೊ ಮಾಡಿ ಕೊಲೆ ಮಾಡಿದವರನ್ನು ಜೈಲಿಗೆ ಖಳಿಸಿ ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಿದ್ದೇನೆ ಅದಕ್ಕಾಗಿ ನನ್ನನ್ನು ರೌಡಿ ಶೀಟರ್ ಅಂತ ನನ್ನ ಮೇಲೆ ಪೊಲೀಸ್ರು ಕೇಸ್ ಹಾಕಿದರು ಎಂದುವಿವರಿಸಿದರು. ಶಾಸಕರ ಸ್ವ ಗ್ರಾಮದಲ್ಲೇ ಅಸ್ಪೂರ್ಶತೆ ತಾಂಡವಾಡುತ್ತಿದೆ ದೇವಸ್ಥಾನದಲ್ಲಿ ಪ್ರವೇಶ ಇಲ್ಲಾ, ಹೋಟೆಲುಗಳಲ್ಲಿ ಸಮಾನವಾಗಿ ಚಹಾ ನೀಡುವುದಿಲ್ಲ, ಕ್ಷೌರಿಕ ಅಂಗಡಿಗಳಲ್ಲಿ ನಮ್ಮ ಮಕ್ಕಳಿಗೆ ಕಟಿಂಗ ಮಾಡುವುದಿಲ್ಲ ನಮ್ಮ ಮಕ್ಕಳನ್ನು ಕರೆದುಕೊಂಡು ನೆರೆಯ ಗ್ರಾಮಕ್ಕೆ ಹೋಗಿ ಕಟಿಂಗ್ ಮಾಡಿಸಿಕೊಳ್ಳಬೇಕು ಇಂತಹ ಮನಸ್ಥಿತಿ ನೋಡಿದರೆ ನಮ್ಮ ಊರಿನ ಬಗ್ಗೆ ನಮಗೆ ನಾಚಿಕೆಯಾಗುತ್ತದೆ ಎಂದು ಸುರೇಶ ನಾಯ್ಕೋಡೆ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಬಾಬು ಛಲವಾದಿ, ಸುಖದೇವ್ ಮೇಲಿನಕೆರಿ, ದೀಲಿಪ್ ಕಪಾಲಿ, ಸುರೇಶ ನಾಯಕೋಡೆ , ಮಹೇಶ ಮೇಲಿನಮನಿ ಸೇರಿದಂತೆ ಇತರರು ಇದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 