ವಿವಿಧ ಬೇಡಿಕೆಗಳ ಈಡೇರಿಕೆಗೆ ಜೆಡಿಎಸ್ ನಿಂದ ಮನವಿ
JDS appeals for fulfillment of various demands
ಇಂಡಿ 31 : ತಾಲೂಕಿನಲ್ಲಿ ಹದಗೇಟ ರಸ್ತೆಗಳ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರ ನೇತೃತ್ವದಲ್ಲಿ ಮಿನಿ ವಿಧಾನಸೌಧ ಮುಂಬಾಗದಲ್ಲಿ ನೂರಾರು ಕಾರ್ಯಕರ್ತರು ತಹಶೀಲ್ದಾರ್ ಕಡಕಭಾವಿ ಯವರಿಗೆ ಮನವಿ ಸಲ್ಲಿಸಲಾಯಿತು.ನಂತರ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಮಾತನಾಡುತ್ತಾ ಇಂಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಂದ ಹಳ್ಳಿಗಳಿಗೆ ಹಾಗೂ ತಾಲೂಕಾ ಕೇಂದ್ರ ದಿಂದ ಜಿಲ್ಲಾ ಕೇಂದ್ರಕ್ಕೆ ಹೋಗುವ ರಸ್ತೆಗಳು ಸಂಪೂರ್ಣ ಹಾಳಾಗಿವೆ.ರೈತರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಆಸ್ಪತ್ರೆಗೆ ಹೋಗುವ ರೋಗಿಗಳಾಗಿರಬಹುದು, ಹೆರಿಗೆ ಪೇಷಂಟ್ ಆಗಿರಬಹುದು,ಹದಗೇಟ ರಸ್ತೆಗಳಿಂದ ದಿನನಿತ್ಯ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು.ವಿಶೇಷವಾಗಿ ಮಿನಿ ವಿಧಾನಸೌಧ ಮುಂಬಾಗದಲ್ಲಿ ಹಲವಾರು ಗುಂಡಿಗಳು ಬಿದ್ದರು ಇಲ್ಲಿವರೆಗೆ ಸಂಬಂಧ ಪಟ್ಟ ಇಲಾಖೆ ಗಮನಕ್ಕೆ ಬಾರದಿರುವುದು ಖಂಡನಾರ್ಹ.
ಮತ್ತು ರೈತರ ಟಿ ಸಿ.ಸುಟ್ಟಾಗ್ 15 ದಿನಗಳ ಕಾಲ ಕಾಯಬೇಕು, ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರಿನ ಸಮಸ್ಯೆಗಳು, ಹಾಗೂ ಮಳೆ ಗಾಳಿಗೆ ಬೆಳೆ ನಾಶವಾದಾಗ ಯಾವುದೇ ಪರಿಹಾರ ನೀಡದ ಕುರುಡು ಸರ್ಕಾರ, ವಿದ್ಯಾವಂತ ನಿರುದ್ಯೋಗಿಗಳ ಸಮಸ್ಯೆಗಳ ಕೆಳದ ಕಿವುಡು ಸರಕಾರದ ಧೋರಣೆಯನ್ನು ನಾವು ಖಂಡಿಸುತ್ತೆವೆ ಎಂದು ಮಾತನಾಡಿದರು.ಇದೆ ಸಂದರ್ಭದಲ್ಲಿ ಅಯೂಬ್ ನಾಟೀಕರ, ಸಿದ್ದು ಡಂಗಾ, ದುಂಡು ಬಿರಾದಾರ, ಯಶವಂತ ಕಾಡೆಗೋಳ,ಫಜಲು ಮುಲ್ಲಾ, ರಮೇಶ್ ಹಂಜಗಿ,ಲಕ್ಷ್ಮಣ ಪೂಜಾರಿ, ಸುದರ್ಶನ್ ಶಿಂದೆ, ಸುದರ್ಶನ್ ಉಪಾಧ್ಯಯ, ನಿಯಾಝ್ ಅಗರಖೇಡ, ಶಿವಾಜಿ, ಬಸವರಾಜ ಪೂಜಾರಿ,ಸಿದ್ದರಾಮ ಹಂಜಗಿ, ಉಮೇಶ, ಹಲಸಂಗಿ, ಶ್ರೀಶೈಲ.ಗುನ್ನಾಪೂರ,ಲಕ್ಕಿ ಲಚ್ಯಾಣ, ವಿಶ್ವನಾಥ್ ಕಟ್ಟಿಮನಿ,ನಳಂದಾದ ರವಿ, ವಿಠಲ ಪೂಜಾರಿ ಭೀಮ ವಾಲಿಕಾರ ಮುಂತಾದವರು ಉಪಸ್ಥಿತರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 