ಅಂತರರಾಷ್ಟ್ರೀಯ

ಕರೋನ ತಡೆಗೆ ತಿಂಗಳಾಂತ್ಯದವರೆಗೆ ತುರ್ತುಪರಿಸ್ಥಿತಿ ವಿಸ್ತರಿಸಿದ ಜಪಾನ್

ಕರೋನ  ತಡೆಗೆ ತಿಂಗಳಾಂತ್ಯದವರೆಗೆ ತುರ್ತುಪರಿಸ್ಥಿತಿ ವಿಸ್ತರಿಸಿದ ಜಪಾನ್

ಟೋಕಿಯೊ, ಮೇ 7 (ಕ್ಸಿನ್ಹುವಾ) ಜಪಾನ್ ಪ್ರಸ್ತುತ ಟೋಕಿಯೊ, ಒಸಾಕಾ, ಕ್ಯೋಟೋ ಮತ್ತು ಹ್ಯೋಗೊ ಪ್ರಾಂತ್ಯಗಳಲ್ಲಿ ಜಾರಿಯಲ್ಲಿರುವ ಕರೋನ  ತುರ್ತು ಪರಿಸ್ಥಿತಿಯನ್ನು ತಿಂಗಳ ಅಂತ್ಯದವರೆಗೆ ವಿಸ್ತರಿಸಲಿದೆ ಎಂದು  ಕರೋನ ಸೋಂಕು  ನಿಯಂತ್ರಣ ಉಸ್ತುವಾರಿ ಸಚಿವರು ಶುಕ್ರವಾರ ತಿಳಿಸಿದ್ದಾರೆ. ಬುಧವಾರದಿಂದ ತುರ್ತು ಕ್ರಮಗಳ ಅಡಿಯಲ್ಲಿ ನಾಲ್ಕು ಪ್ರಾಂತ್ಯಗಳನ್ನು ಸೇರಿಸಲಾಗುವುದು ಎಂದು ಯಸುತೋಶಿ ನಿಶಿಮುರಾ ಹೇಳಿದರು. ಐಚಿ ಮತ್ತು ಫುಕುಯೋಕಾ ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸುವುದರಿಂದ ಆಯಾ ರಾಜ್ಯಪಾಲರು ಮತ್ತು ಅಧಿಕಾರಿಗಳಿಗೆ ಕರೋನ ಸೋಂಕು ಮತ್ತಷ್ಟು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಜಾರಿಗೆ ತರಲು ಅವಕಾಶವಾಗಲಿದೆ ಎಂದು ಹೇಳಿದರು. ಜಪಾನ್ ಪ್ರಧಾನಿ ಯೋಶಿಹೈಡ್ ಸುಗಾ ಅವರು ಐಚಿ ಮತ್ತು ಫುಕುಯೋಕಾ ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಿದ್ದಾರೆ  ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. "ತುರ್ತು ಪರಿಸ್ಥಿತಿಯನ್ನು ವಿಸ್ತರಿಸುವ ಬಗ್ಗೆ ಸರ್ಕಾರ ಶುಕ್ರವಾರ ಸರ್ಕಾರ  ತಜ್ಞರ ಸಮಿತಿಯೊಂದಿಗೆ ಸಮಾಲೋಚನೆ ನಡೆಸಲಿದೆ. 



ಸುದ್ದಿ ಓದಿ