ಏಪ್ರಿಲ್ ನಲ್ಲಿ ಜೋ ಬೈಡೆನ್ - ಜಪಾನ್ ಪ್ರಧಾನಿ ಮಾತುಕತೆ
ಟೋಕಿಯೊ, ಮಾರ್ಚ್ 12 :ಜಪಾನ್ ಪ್ರಧಾನಿ ಯೋಶಿಹೈಡ್ ಸುಗಾ ಅಮೆರಿಕಕ್ಕೆ ಭೇಟಿ ನೀಡಿ ದ್ವಿಪಕ್ಷೀಯ ಸಂಬಂಧ ಬಲವರ್ಧನೆ ಕುರಿತು ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಜಪಾನ್ ಪ್ರಧಾನಿ, ಏಪ್ರಿಲ್ ಆರಂಭದಲ್ಲಿ ಬೈಡೆನ್ ಅವರನ್ನು ಭೇಟಿ ಮಾಡಲಿದ್ದಾರೆ. ಎಂದು ಸಂಪುಟ ಕಾರ್ಯದರ್ಶಿ ಕಟ್ಸುನೊಬು ಕ್ಯಾಟೊ ಶುಕ್ರವಾರ ತಿಳಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ಅಧಿಕಾರಕ್ಕೆ ಬಂದ ನಂತರ ಇದು ಅವರ ಮೊದಲ ಅಮೆರಿಕ ಪ್ರವಾಸವಾಗಿದೆ. ಹಾಗೆಯೇ ಬೈಡೆನ್ ಅವರೊಂದಿಗೆ ಮೊದಲ ವೈಯಕ್ತಿಕ ಸಭೆಯಾಗಿದೆ "ಜಪಾನ್-ಅಮೆರಿಕ ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುವುದು, ಮುಕ್ತ ಇಂಡೋ-ಪೆಸಿಫಿಕ್ ವಲಯ ಸಾಕಾರಗೊಳಿಸುವ ನಿಟ್ಟಿನಲ್ಲಿ ಪರಸ್ಪರ ಸಹಕಾರ ದೃಡಪಡಿಸುವುದು ಮಾತುಕತೆಯ ಉದ್ದೇಶವಾಗಿದೆ ಎಂದು ಹೇಳಲಾಗಿದೆ. ಜಪಾನಿನ ನಿಯೋಗವು ಕನಿಷ್ಟ ಸಂಖ್ಯೆಯ ಸದಸ್ಯರನ್ನು ಹೊಂದಿದ್ದು, ಅವರೆಲ್ಲರಿಗೂ ಕರೋನ ಸೋಂಕು ನಿವಾರಕ ಲಸಿಕೆ ನೀಡಲಾಗುತ್ತದೆ.