ಅಂತರರಾಷ್ಟ್ರೀಯ

ಕೋವಿಡ್-ಪ್ರಕರಣಗಳು ಉಲ್ಬಣ: ಜಪಾನ್ ಅನೇಕ ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಕೋವಿಡ್-ಪ್ರಕರಣಗಳು ಉಲ್ಬಣ: ಜಪಾನ್ ಅನೇಕ ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಟೋಕಿಯೊ, ಜ 7 : ಜಪಾನ್ ನಲ್ಲಿ ಕೋವಿಡ್-19 ಪ್ರಕರಣಗಳ ತೀವ್ರ ಏರಿಕೆ ಹಿನ್ನೆಲೆಯಲ್ಲಿ ಪ್ರಧಾನಿ ಯೊಶಿಹಿಡೆ ಸುಗಾ ಅವರು ಗುರುವಾರ ಟೋಕಿಯೊ, ಚಿಬಾ, ಕನಗಾವಾ ಮತ್ತು ಸೈತಾಮಾ ಪ್ರಾಂತ್ಯಗಳಲ್ಲಿ ಫೆ 7 ರವರೆಗೆ ಎರಡನೇ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.ಕಳೆದ 24 ಗಂಟೆಗಳಲ್ಲಿ ಜಪಾನ್ನಲ್ಲಿ ಹೊಸ  6,004 ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದೆ. ಟೋಕಿಯೊ ನಗರವೊಂದರಲ್ಲೇ 1,591 ಹೊಸ ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸುವುದರಿಂದ ಆರ್ಥಿಕತೆಯ ಶೇ 0.88 ರಷ್ಟು ಸಂಕುಚಿತವಾಗಲಿದ್ದು ಮತ್ತು ಸುಮಾರು 75,000 ಉದ್ಯೋಗಗಳು ನಷ್ಟವಾಗಬಹುದು ಎಂದು ಬುದ್ದಿಜೀವಿಗಳು ಸಲಹೆ ಮಾಡಿದ್ದಾರೆ.

ತುರ್ತು ಪರಿಸ್ಥಿತಿ ಜ 8 ರಿಂದ ಫೆ 7 ರವರೆಗೆ ಟೋಕಿಯೊದ ಸೈತಾಮ, ಚಿಬಾ, ಕನಗಾವ ಮತ್ತು ಸೈತಾಮ ಪ್ರಾಂತ್ಯಗಳಲ್ಲಿ ಜಾರಿಯಲ್ಲಿರುತ್ತದೆ ಎಂದು ದೇಶದ ಕೋವಿಡ್-19 ಪ್ರತಿಕ್ರಿಯೆ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ಹೇಳಿದ್ದಾರೆ.  ತುರ್ತು ಪರಿಸ್ಥಿತಿ ವೇಳೆ ಎಲ್ಲಾ ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ರಾತ್ರಿ 8 ಗಂಟೆಗೆ ಮುಚ್ಚಬೇಕಾಗುತ್ತದೆ. ನಿರ್ಬಂಧಗಳನ್ನು ಪಾಲಿಸುವ ವಾಣಿಜ್ಯ ಮುಂಗಟ್ಟುಗಳಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಿಕೊಡಲಿದೆ.  ಈ ಅವಧಿಯಲ್ಲಿ ಜಪಾನ್ ಉದ್ದಿಮೆಗಳು ಮನೆಯಿಂದಲೇ ಕೆಲಸ ಮಾಡಲು ತಮ್ಮ ಉದ್ಯೋಗಿಗಳನ್ನು ಪ್ರೋತ್ಸಾಹಿಸಬೇಕಾಗುತ್ತದೆ. ಸಭೆ-ಸಮಾರಂಭಗಳನ್ನು 5,000 ಜನರಿಗೆ ಸೀಮಿತಗೊಳಿಸಲಾಗಿದೆ.ಜಪಾನ್ ನಲ್ಲಿ ಈ ಹಿಂದೆ ಕಳೆದ ಏಪ್ರಿಲ್ ನಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿತ್ತು. ಸೋಂಕು ಪ್ರಕರಣಗಳು ಇಳಿಮುಖವಾದ ನಂತರ ಕಳೆದ ಮೇ 25 ರಂದು ಇದನ್ನು ತೆರವುಗೊಳಿಸಲಾಗಿತ್ತು.

  

ಸುದ್ದಿ ಓದಿ