ಅಂತರರಾಷ್ಟ್ರೀಯ

ಬ್ರಿಟನ್ ನಂತರ ಜಪಾನ್ ನಲ್ಲೂ ಹೊಸ ರೂಪದ ಕೊರೊನಾ ಸೋಂಕು ಪತ್ತೆ ....

ಬ್ರಿಟನ್ ನಂತರ ಜಪಾನ್ ನಲ್ಲೂ ಹೊಸ ರೂಪದ ಕೊರೊನಾ ಸೋಂಕು ಪತ್ತೆ  ....

ಟೊಕಿಯೋ,  ಜ 11: ವಿಶ್ವದಾದ್ಯಂತ ಆತಂಕಕ್ಕೆ ಕಾರಣವಾಗಿರುವ ಬ್ರಿಟನ್ ಮಾದರಿ ಕೊರೋನ ಸೋಂಕಿನ ನಂತರ  ಜಪಾನ್ ನಲ್ಲಿ ಮತ್ತೊಂದು ಹೊಸ ರೂಪದ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ ಎಂದು ಜಪಾನ್ ನ್ಯಾಶನಲ್ ಇನ್ಸ್ಟಿಟ್ಯೂಟ್ ಇನ್ಷೆಕ್ಷಿಯಸ್ ಡೀಸಸ್ ಹೇಳಿದೆ. ಬ್ರೆಜಿಲ್ ನಿಂದ ಬಂದ ನಾಲ್ವರು ಪ್ರಯಾಣಿಕರಲ್ಲಿ ಹೊಸ ರೂಪದ ಕೊರೊನಾ ವೈರಸ್ ಪತ್ತೆಯಾಗಿದೆ ಎಂದು ಜಪಾನ್ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಷೆಕ್ಷಿಯಸ್ ಡೀಸೀಸಸ್ ಹೇಳಿದೆ.ಬ್ರಿಟನ್ ಮತ್ತು ದಕ್ಷಿಣ  ಆಫ್ರಿಕಾದಲ್ಲಿ ಪತ್ತೆಯಾದ ಮಾದರಿಯಲ್ಲಿಯೇ ಹೊಸ ಕೊರೊನಾ ಸೋಂಕಿನ ಲಕ್ಷಣಗಳನ್ನು ಹೊಂದಿದೆ. ಇದು ರೂಪಾಂತರಗೊಂಡ ವೈರಸ್ ಆವೃತ್ತಿಯಾಗಿರುವ ಸಾಧ್ಯತೆಯಾಗಿದ್ದು, ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಗೂ ಮಾಹಿತಿ ನೀಡಲಾಗಿದೆ ಎಂದು ಹೇಳಲಾಗಿದೆ.


ಸುದ್ದಿ ಓದಿ