ಸಂವಿಧಾನವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ: ಮಾದರ
ಮೂಡಲಗಿ 16: ಸಮಾನತೆಯ ಹರಿಕಾರ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಂವಿಧಾನವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮುಖಂಡ ಪ್ರಕಾಶ ಮಾದರ ಹೇಳಿದರು.
ದಲಿತ ಸಂಘರ್ಷ ಸಮಿತಿ(ಸಂಯೋಜಕ) ಕಚೇರಿಯಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ 130ನೇ ಜಯಂತಿ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಅಂಬೇಡ್ಕರರು ಬಾಲ್ಯದ ಜೀವನದಲ್ಲಿ ಅನೇಕ ಅವಮಾನಗಳನ್ನು ಎದುರಿಸಿ ಉನ್ನತ ಶಿಕ್ಷಣ ಪಡೆದು ಹಿಂದುಳಿದ ಜನಾಂಗಕ್ಕಾಗಿ ಶ್ರಮಿಸಿದ ಮಹಾನ ವ್ಯಕ್ತಿ. ಅವರ ಸಂದೇಶಗಳನ್ನು ಪಾಲನೆ ಮಾಡುವುದರ ಮೂಲಕ ಅವರಿಗೆ ಗೌರವ ಸಲ್ಲಿಕೆಯಾಗಬೇಕು ಎಂದರು.
ಸಮಿತಿ ಅಧ್ಯಕ್ಷ ಯಶವಂತ ಮಂಟೂರ, ಪಿಎಸೈ ಎಚ್ ವಾಯ್ ಬಾಲದಂಡಿ ಮಾತನಾಡಿ, ದೀನ, ದಲಿತರ ಆಶಾಕಿರಣ ಮಹಾನಾಯಕ ಡಾ. ಅಂಬೇಡ್ಕರ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದರು.
ಜಯ ಕರ್ನಾಟಕ ಜನಪರ ವೇದಿಕೆಯ ಶಿವರಡ್ಡಿ ಹುಚರಡ್ಡಿ, ಹನಮಂತ ಸತರಡ್ಡಿ, ಸಿದ್ದಣ್ಣ ದುರದುಂಡಿ, ಸಿದ್ಲಿಂಗಪ್ಪ ಯರಗಟ್ಟಿ, ಸುಂದರ ಹವಳೆವ್ವಗೋಳ ಅನೇಕ ದಲಿತ ಮುಖಂಡರು ಇದ್ದರು.