ಮಹರ್ಷಿ ಭಗೀರಥರಿಂದ ಹೆಚ್ಚು ಅರ್ಥ ಮತ್ತು ಮಹತ್ವ ಪಡೆದಿದೆ: ಪ್ರಕಾಶ ಹಳಿಯಾಳ

ಮಹರ್ಷಿ ಭಗೀರಥರಿಂದ ಹೆಚ್ಚು ಅರ್ಥ ಮತ್ತು ಮಹತ್ವ ಪಡೆದಿದೆ: ಪ್ರಕಾಶ ಹಳಿಯಾಳ It has gained more meaning and significance from Maharishi Bhagiratha: Prakash Haliyal

ಲೋಕದರ್ಶನ ವರದಿ 

          ಧಾರವಾಡ 23: ಸ್ವರ್ಗದಿಂದ ಗಂಗೆಯನ್ನು ಭೂಲೋಕಕ್ಕೆ ತಂದ ಮಹಾನ್ ತಪಸ್ವಿ ಭಗೀರಥ ಅವರ ಸೇವೆ ಅಮೂಲ್ಯವಾಗಿದೆ. ಅವರ ತಪಸ್ಸು ಮತ್ತು ಸಂಕಲ್ಪವು ಸಮಾಜಕ್ಕೆ ಪ್ರೇರಣೆಯಾಗಿದೆ ಎಂದು ಮಹಾನಗರ ಪಾಲಿಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ ಹಳಿಯಾಳ ಅವರು ಹೇಳಿದರು. 

ಅವರು ಇಂದು (ಏ.23) ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಮಹರ್ಷಿ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. 

ಕಠಿಣ ಪರಿಶ್ರಮ ಮತ್ತು ಕಾರ್ಯಬದ್ಧತೆಯು ಮಹರ್ಷಿ ಭಗೀರಥರಿಂದ ಹೆಚ್ಚು ಅರ್ಥ ಮತ್ತು ಮಹತ್ವ ಪಡೆದಿದೆ. ಮಹರ್ಷಿ ಭಗೀರಥರ ಬಗ್ಗೆ ಇರುವ ಪ್ರತೀತಿ ಮತ್ತು ಐತಿಹಾಸಿಕ ಘಟನೆ, ದಾಖಲೆಗಳು ಭಾರತೀಯರ ಸಾಧನೆಯ ಬಗ್ಗೆ ಬೆಳಕು ಚಲುತ್ತದೆ. ಇಂದಿನ ಯುವಕರಲ್ಲಿ ಹಾಗೂ ಮಕ್ಕಳಲ್ಲಿ ಭಗೀರಥರ ಪರಿಶ್ರಮ ಹಾಗೂ ಸಾಧಿಸುವ ಚಲದ ಬಗ್ಗೆ ಅರಿವು ಮೂಡಿಸುವ ಆಚರಿಸಲು ಪ್ರೇರೆಪಿಸುವ ಅಗತ್ಯವಿದೆ ಎಂದು ಅವರು ಹೇಳಿದರು.  

ಶಿಕ್ಷಣದ ಮಹತ್ವವನ್ನು ಒತ್ತಿಹೇಳುವ ಜೊತೆಗೆ, ಭಗೀರಥನಂತಹ ಮಹನೀಯರ ಜೀವನದಿಂದ ಪ್ರೇರಣೆ ಪಡೆಯಬೇಕು. ದೇಶದ ಅಭಿವೃದ್ಧಿಗೆ ಅಡ್ಡಿಯಾಗುವ ಅಜ್ಞಾನವನ್ನು ನಿವಾರಿಸಲು, ಸಮಾಜದಲ್ಲಿ ಜಾಗೃತಿ ಮತ್ತು ಏಕತೆ ಅಗತ್ಯವೆಂದು ಅವರು ಹೇಳಿದರು. 

ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ವೆಂಕನಗೌಡ ಪಾಟೀಲ ಅವರು ಮಾತನಾಡಿ, ಉಪ್ಪಾರ ಸಮಾಜದ ಇತಿಹಾಸವು ಮಹತ್ವಪೂರ್ಣವಾಗಿದ್ದು, ಅದರ ಪರಂಪರೆ ಮತ್ತು ತ್ಯಾಗಗಳು ಸಮಾಜದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿವೆ. ಭಗೀರಥನ ತಪಸ್ಸಿನ ಮೂಲಕ ಗಂಗೆಯನ್ನು ಭೂಮಿಗೆ ತಂದ ಮಹತ್ವವು ತ್ಯಾಗ, ಧೈರ್ಯ ಮತ್ತು ಸಂಕಲ್ಪದ ಸಂಕೇತವಾಗಿದೆ. ಈ ಆದರ್ಶಗಳನ್ನು ಮಹಾತ್ಮರು ಸದಾ ಬಲಪಡಿಸಿ, ಸಮಾಜಕ್ಕೆ ದಾರಿ ತೋರಿಸಿದ್ದಾರೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಕ್ಲಾಸಿಕ್ ಸ್ಟಡಿ ಸರ್ಕಲ್‌ನ ಅಧ್ಯಕ್ಷ ಲಕ್ಷ್ಮಣ ಉಪ್ಪಾರ ವಿಶೇಷ ಉಪನ್ಯಾಸ ನೀಡಿದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರತಿ ದೇವಶಿಖಾಮಣಿ ಕಾರ್ಯಕ್ರಮ ನಿರೂಪಿಸಿದರು. ಹನುಮಂತ ಲಾತೂರ ವಂದಿಸಿದರು.  

ವೇದಿಕೆಯಲ್ಲಿ ಭಗೀರಥ ಉತ್ಸವ ಸಮಿತಿ ಅಧ್ಯಕ್ಷ ಸತೀಶ ಮುರುಗೋಡ, ಮಾಂತೇಶ ಯಡ್ರಾವಿ, ಬಲರಾಮ ಕುಷ್ಕರ, ಶಿವಾನಂದ ಶಾಂತಿಗೇರಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು, ಗುರು ಹಿರಿಯರು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. 

ವೇದಿಕೆ ಕಾರ್ಯಕ್ರಮ ಪೂರ್ವದಲ್ಲಿ ಮಹರ್ಷಿ ಭಗೀರಥ ಭಾವಚಿತ್ರದ ಭವ್ಯ ಮೆರಣಿಗೆಯು ಜಿಲ್ಲಾಧಿಕಾರಿಗಳ ಕಚೇರಿಯಿಂದ ಪ್ರಾರಂಭವಾಗಿ, ಕೋರ್ಟ ಸರ್ಕಲ್, ಆಲೂರು ವೆಂಕಟರಾವ್ ವೃತ್ತದ ಮೂಲಕ ನಡೆಯಿತು. ಮೆರವಣಿಗೆಯಲ್ಲಿ ಮಹಿಳೆಯರು ಪೂರ್ಣ ಕುಂಭಮೇಳ ಪ್ರದರ್ಶಿಸಿದರು. ವಿವಿಧ ಜಾನಪದ ಕಲಾತಂಡಗಳು ಹಾಗೂ ಯುವ ಸಮೂಹದ ನೃತ್ಯದೊಂದಿಗೆ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದ ಆವರಣದವರೆಗೆ ತಲುಪಿತು.