ಗಾಜಾದಲ್ಲಿ ಇಸ್ರೇಲ್ ದಾಳಿ: ಮೃತರ ಸಂಖ್ಯೆ 67ಕ್ಕೆ ಏರಿಕೆ
ಗಾಜಾ, ಮೇ 13: ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನಾ ಪಡೆಗಳು ನಡೆಸಿದ ದಾಳಿಗಳಲ್ಲಿ ಸಾವವನ್ನಪ್ಪಿದವರ ಸಂಖ್ಯೆ 67ಕ್ಕೆ ಏರಿದೆ ಎಂದು ಪ್ಯಾಲೆಸ್ತೇನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಮೃತರ ಪೈಕಿ 17 ಮಕ್ಕಳು ಸೇರಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಇಸ್ರೇಲ್ ನಡೆಸಿದ ದಾಳಿಗಳಲ್ಲಿ 115 ಮಕ್ಕಳು ಮತ್ತು 50 ಮಹಿಳೆಯರು ಸೇರಿ 338 ಪ್ಯಾಲೆಸ್ತೇನಿಯನ್ನರು ಸಾವನ್ನಪ್ಪಿದ್ದಾರೆ.
ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನ ಹಮಾಸ್ ಸೇನೆಗಳು ಸೋಮವಾರ ರಾತ್ರಿಯಿಂದ ನೂರಾರು ರಾಕೆಟ್ ದಾಳಿಗಳನ್ನು ಪರಸ್ಪರ ನಡೆಸಿವೆ. ವಿವಾದಿತ ಜೆರುಸೆಲೆಮ್ ನಲ್ಲಿ ಪ್ಯಾಲೆಸ್ತೇನಿಯರನ್ನು ತಮ್ಮ ಮನೆಗಳಿಂದ ತೆರವು ಗೊಳಿಸಿದ ಕೆಲ ದಿನಗಳ ನಂತರ ಈ ಸಂಘರ್ಷ ಭುಗಿಲೆದ್ದಿದೆ.