ಅಂತರರಾಷ್ಟ್ರೀಯ

ಓಮಿಕ್ರಾನ್ ತಡೆಯಲು ವಿದೇಶಿಗರಿಗೆ ಗಡಿಯನ್ನು ಮುಚ್ಚಿದ ಇಸ್ರೇಲ್

ಓಮಿಕ್ರಾನ್ ತಡೆಯಲು ವಿದೇಶಿಗರಿಗೆ ಗಡಿಯನ್ನು ಮುಚ್ಚಿದ ಇಸ್ರೇಲ್

ಜೆರುಸಲೇಮ್: ನ. 28 ಹೊಸ ಕೋವಿಡ್ ರೂಪಾಂತರಿ ಓಮಿಕ್ರಾನ್ ಹರಡುವುದನ್ನು ತಡೆಯುವ ಸಲುವಾಗಿ ಇಸ್ರೇಲ್ ಎಲ್ಲಾ ವಿದೇಶಿಯರಿಗೆ ಗಡಿಗಳನ್ನು ಮುಚ್ಚಿದೆ.


ಕೊರೊನಾ ವೈರಸ್‌ನ ಹೊಸ ಓಮಿಕ್ರಾನ್ ರೂಪಾಂತರದ ಹರಡುವಿಕೆಯನ್ನು ತಡೆಯಲು ಇಸ್ರೇಲ್ ಭಾನುವಾರದ ನಂತರ ಎಲ್ಲಾ ವಿದೇಶಿಯರಿಗೆ ತನ್ನ ಗಡಿಗಳನ್ನು ಮುಚ್ಚಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ವಿಶೇಷ ಸಮಿತಿಯ ಒಪ್ಪಿಗೆಯೊಂದಿಗೆ ಬರುವವರಿಗೆ ಮಾತ್ರ ಅವಕಾಶವಿದ್ದು, ಇನ್ನುಳಿದ ವಿದೇಶಿ ಪ್ರಜೆಗಳ ಪ್ರವೇಶವನ್ನು ಇಸ್ರೇಲ್‌ಗೆ ನಿಷೇಧಿಸಲಾಗಿದೆ ಎಂದು ಪ್ರಧಾನಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಈ ನಿಯಮವು ಭಾನುವಾರ ಸಂಜೆಯಿಂದ ಜಾರಿಗೆ ಬರಲಿದೆ ಎಂದು ಹೇಳಿದೆ.


ಒಂದು ವೇಳೆ ಇಸ್ರೇಲಿ ನಾಗರಿಕರು ದೇಶಕ್ಕೆ ಬರುವುದಾದರೇ, ಪಿಸಿಆರ್ ಪರೀಕ್ಷೆಯ ವರದಿಯನ್ನು ತೋರಿಸಬೇಕಾಗುತ್ತದೆ. ಅಲ್ಲದೇ ಕೊರೊನಾ ಲಸಿಕೆ ಹಾಕಿಸಿಕೊಂಡಿರಬೇಕು. 14 ದಿನಗಳ ಕಾಲ ಕ್ವಾರಂಟೈನ್​ಗೆ ಒಳಗಾಗಬೇಕು.


ಇಸ್ರೇಲ್‌ನ ಕೋವಿಡ್ ಪ್ರತಿಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವ ಕ್ಯಾಬಿನೆಟ್ ಸಮಿತಿಯು ಈ ಕ್ರಮವನ್ನು ಸೂಚಿಸಿದೆ. ಅಲ್ಲದೇ ಇದಕ್ಕೆ ಭಾನುವಾರ ಬೆಳಗ್ಗೆ ಇಡೀ ಕ್ಯಾಬಿನೆಟ್‌ನಿಂದ ಅನುಮೋದನೆ ಕೂಡ ಸಿಕ್ಕಿದೆ.


ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಗುರುವಾರ ಅವರು ಹೊಸ B.1.1.529 ರೂಪಾಂತರವನ್ನು ಕನಿಷ್ಠ 10 ರೂಪಾಂತರಗಳೊಂದಿಗೆ ಪತ್ತೆಹಚ್ಚಿದ್ದಾರೆ. ದಕ್ಷಿಣ ಆಫ್ರಿಕಾ, ಬೋಟ್ಸ್‌ವಾನಾ, ಜಿಂಬಾಬ್ವೆ, ನಮೀಬಿಯಾ ಮತ್ತು ಲೆಸೊಟೊ ದೇಶದಲ್ಲಿ ಈ ತಳಿಯ ವೈರಾಣು ತಗುಲಿರುವ ಪ್ರಕರಣಗಳು ಪತ್ತೆಯಾಗಿವೆ.


ಸುದ್ದಿ ಓದಿ