ಕಾರವಾರ

ಅಂತರ ವಲಯ ಟೇಬಲ್ ಟೆನಿಸ್ ಪಂದ್ಯಾವಳಿ

ಅಂತರ ವಲಯ ಟೇಬಲ್ ಟೆನಿಸ್ ಪಂದ್ಯಾವಳಿ

ಲೋಕದರ್ಶನ ವರದಿ

ದಾಂಡೇಲಿ 20 :  ದಾಂಡೇಲಿ ಸ್ಥಳೀಯ ಬಂಗೂರ ನಗರ ಪದವಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಅಂತರ ವಲಯ ಟೇಬಲ್ ಟೆನಿಸ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು.  ಪಂದ್ಯಾವಳಿಯನ್ನು ಸಸಿಗೆ ನಿರೇರುವ ಮೂಲಕ ಉದ್ಘಾಟಿಸಿದ ಹಳಿಯಾಳದ   ಟೇಬಲ್ ಟೆನಿಸ್ ಹಾಗೂ ಕ್ರಿಕೆಟ್ ತರಬೇತುದಾರ ಉದಯ ಜಾಧವ ಮಾತನಾಡುತ್ತ ಕ್ರೀಡೆ ಮನುಷ್ಯನಲ್ಲಿ ಶಿಸ್ತು ಎಕಾಗ್ರತೆ ಹಾಗೂ ಸಂಯಮವನ್ನು  ನಿರೂಪಿಸುತ್ತದೆ ಅಲ್ಲದೆ ಕ್ರೀಡಾ ಮನೋಬಾವ ಎಲ್ಲರೊಂದಿಗೆ ಬೆರೆಯಲು ಅನುವು ಮಾಡಿಕೊಡುತ್ತದೆ. ಭಾಗವಹಿಸಿದ ಎಲ್ಲ ಕ್ರೀಡಾ ಪಟುಗಳಿಗೆ ಅವರು ಪಂದ್ಯಾವಳಿಯಲ್ಲಿ ಜಯಿಸಲು ಶುಭಕೋರಿದರು.  ನವೀನ ಕಾಮತ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಪ್ರಾಂಶುಪಾಲ ಡಾ. ಬಿ.ಎಲ್‌. ಗುಂಡುರ ಅವರ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕ್ರೀಡಾ ನಿರ್ದೇಶಕ ಡಾ. ಎಸ್‌. ವಿನಯ್ ಐ.ಕ್ಯೂ. ಎಸ್‌.ಸಿ ಚೇರಮನ್ ಡಾ. ಹೊಸಮನಿ ಆಡಳಿತ ಮಂಡಳಿ ಅಧಿಕಾರಿ ರಾಘವೇಂದ್ರ ವಿದ್ಯಾರ್ಥಿಗಳಾದ ಪ್ರಜ್ವಲ್, ಕೀರ್ತಿ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ