ಸ್ತ್ರೀಶೋಷಣೆಯ ಬಗ್ಗೆ ಡಾ. ವೀಣಾ ಶಾಂತೇಶ್ವರ ಬರೆದ ಕೃತಿಗಳಿಂದ ಪ್ರೇರಣೆ : ಬಿ.ಎಲ್‌. ಪಾಟೀಲ

ಸ್ತ್ರೀಶೋಷಣೆಯ ಬಗ್ಗೆ ಡಾ. ವೀಣಾ ಶಾಂತೇಶ್ವರ ಬರೆದ ಕೃತಿಗಳಿಂದ ಪ್ರೇರಣೆ : ಬಿ.ಎಲ್‌. ಪಾಟೀಲ Inspired by Dr. Veena Shanteshwar's works on women's exploitation: B.L. Patil

ಲೋಕದರ್ಶನ ವರದಿ 

       ಧಾರವಾಡ 25 : ಡಾ. ವೀಣಾ ಶಾಂತೇಶ್ವರ ಸ್ತ್ರೀವಾದಿ ಸಂವೇದನೆಯ ಮತ್ತುಕಟು ವಾಸ್ತವದ ಬರವಣಿಗೆಯ ವೈಚಾರಿಕ ಪ್ರಜ್ಞೆಯ ಲೇಖಕಿಯರು. ಪುರುಷ ಪ್ರಧಾನ ಸಮಾಜದ ವಿರುದ್ಧ ಅವರ ದುಗಟ್ಟಿಧ್ವನಿ ಎಂದು ಹೊಸತು ಪತ್ರಿಕೆಯ ಸಂಪಾದಕರಾದ ಡಾ. ಸಿದ್ಧನಗೌಡ ಪಾಟೀಲ ಹೇಳಿದರು. ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಡಾ.ಗುರುಲಿಂಗ ಕಾಪಸೆ ದತ್ತಿ’ ಕಾರ್ಯಕ್ರಮದಲ್ಲಿ ‘ಡಾ ಗುರುಲಿಂಗ ಕಾಪಸೆ  ಸಾಹಿತ್ಯ ಪ್ರಶಸ್ತಿ-2026 ಪ್ರದಾನ ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿದರು.  

ಡಾ. ವೀಣಾ ಶಾಂತೇಶ್ವರ ಹಾಗೂ ಸಿ.ಚನ್ನಬಸವಣ್ಣ ವ್ಯಕ್ತಿತ್ವದ ಮಾದರಿಗಳನ್ನು ನೀಡಿದವರು. ಡಾ. ವೀಣಾ ಶಾಂತೇಶ್ವರ ಸ್ತ್ರೀವಾದಿ ಸಂವೇದನೆಯ ಕೃತಿಗಳ ಮೂಲಕ ಜಾಗೃತಿ ಮೂಡಿಸಿ, ವಿದ್ಯಾರ್ಥಿಗಳನ್ನು ಸೃಷ್ಠಿಸಿದರೆ, ಸಿ.ಚನ್ನಬಸವಣ್ಣ ಲೋಹಿಯಾ ಪ್ರಕಾಶನದ ಮೂಲಕ ಪುಸ್ತಕ ಸಂಸ್ಕೃತಿಯನ್ನು ಬೆಳೆಸಿ ಪ್ರಕಾಶನವನ್ನುಒಂದು ಉದ್ಯಮಎಂದು ಪರಿಗಣಿಸದೆ ಸಾಹಿತ್ಯ, ದಾಸೋಹಕಾರ್ಯಕ್ರಮ ಮಾಡಿದರು. ಜನರ ಆಸಕ್ತಿ ಅಭಿರುಚಿ ಬೇಡಿಕೆಗೆ ತಕ್ಕಂತಹ ಸುಮಾರು 200 ಕ್ಕೂ ಹೆಚ್ಚು ಕೃತಿ ಪ್ರಕಾಶನದ ಮೂಲಕ ಮಾಡಿದರು ಎಂದು ಹೇಳಿದರು.  

ಪ್ರಶಸ್ತಿ ಪ್ರದಾನ ಮಾಡಿದ ಅಥಣಿ ದೇವದಾಸಿ ವಿಮೋಚನಾ ಸಂಸ್ಥೆ ಅಧ್ಯಕ್ಷರಾದ ಬಿ.ಎಲ್‌. ಪಾಟೀಲ ಮಾತನಾಡಿ, ಡಾ. ವೀಣಾ ಶಾಂತೇಶ್ವರ ನನ್ನ ಗುರುಮಾತೆ. ಸ್ತ್ರೀಶೋಷಣೆಯ ಬಗ್ಗೆ ಅವರು ಬರೆದ ಕೃತಿಗಳಿಂದ ನಾನು ಪ್ರೇರಣೆಗೊಂಡು ದೇವದಾಸಿ ವಿಮೋಚನಾ ಸಂಸ್ಥೆ ಹುಟ್ಟು ಹಾಕಲು ಕಾರಣವಾಯಿತು. ಹಾಗೆಯೇಡಾ. ಗುರುಲಿಂಗ ಕಾಪಸೆ ಅವರ ಸಾಧನೆ ನಮಗೆಲ್ಲಾ ಅನುರಕರಣೀಯ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಮಹಾನ್ ಸಾಧನೆ ಮಾಡಿದವರು. ಸಿ. ಚನ್ನಬಸವಣ್ಣ ಪುಸ್ತಕ ಪರಂಪರೆ ಮಾತ್ರ ಬೆಳೆಸಲಿಲ್ಲ. ಮಾನವೀಯತೆ ಪರಂಪರೆ ಬೆಳೆಸಿದವರು. ಡಾ. ಗುರುಲಿಂಗ ಕಾಪಸೆ ಅವರ ಹೆಸರಿನ ಸಾಹಿತ್ಯ ಪ್ರಶಸ್ತಿಗೆ ತನ್ನದೇಗೌರವವಿದ್ದುಇಬ್ಬರೂ ಮಹಾನ್ ಸಾಹಿತಿಗಳಿಗೆ ಲಭಿಸಿದ್ದು ಅಭಿನಂದನೀಯಎಂದರು. 

ಪ್ರಶಸ್ತಿ ಪುರಸ್ಕೃತರಾದಡಾ.ವೀಣಾ ಶಾಂತೇಶ್ವರ ಮಾತನಾಡಿ, ಡಾ.ಗುರುಲಿಂಗ ಕಾಪಸೆ ಅನುಭಾವ ಸಾಹಿತ್ಯ ಪರಂಪರೆಯವರು.ಸಾತ್ವಿಕಗುಣದ ಉದಾರಿಗಳು.ಸ್ತ್ರೀಯ ಬಗ್ಗೆ ಅಪಾರ ಕಳಕಳಿ ಗೌರವ ಭಾವನೆ ಹೊಂದಿದವರಾಗಿದ್ದರು.ಪ್ರಾಥಮಿಕ ಹಂತದಲ್ಲಿ ಮಾತೃ ಭಾಷೆಕನ್ನಡವೇಕಡ್ಡಾಯವಾಗಿರಬೇಕೆಂಬುದುಅವರ ನಿಲುವು ಆಗಿತ್ತು.ಡಾ. ಕಾಪಸೆ ಇಡೀಜನಾಂಗಕ್ಕೆ ಬದ್ಧತೆ ಹಾಗೂ ಶ್ರದ್ಧೆಯಿಂದಕೈಗೆತ್ತಿಕೊಂಡಕಾರ್ಯ ಪರಿಪೂರ್ಣ ಮಾಡಿದವರುಎಂದು ಹೇಳಿದರು. ಈ ಪ್ರಶಸ್ತಿ ನನ್ನಗೌರವ ಹೆಚ್ಚಿಸಿದೆ ಎಂದರು. 

ಇನ್ನೋರ್ವ ಪ್ರಶಸ್ತಿ ಪುರಸ್ಕೃತರಾದ ಸಿ.ಚನ್ನಬಸವಣ್ಣ ಮಾತನಾಡಿ, ನಮಗೆ ಬದ್ಧತೆ ಇದ್ದರೆ ಎಂತಹ ಮಹತ್ಸಾಧನೆಯನ್ನಾದರೂ ಮಾಡಬಹುದು. ಲೋಹಿಯಾ ಪ್ರಕಾಶನಒಂದು ಸಮಷ್ಠಿ ಪ್ರಜ್ಞೆಯಾಗಿ ಲೋಹಿಯಾಚಿಂತನೆ ಯುವಜನಾಂಗಕ್ಕೆ ತಲುಪಿಸುವುದಾಗಿದೆ. ಅದಕ್ಕೆ ನಮ್ಮಚಿಂತನಾ ಲಹರಿ ಸರಿಇರಬೇಕಷ್ಟೇ.ತಮಗೆ ಬಂದ ಪ್ರಶಸ್ತಿ ಮೊತ್ತದಲ್ಲಿ 5000 ಎಂ.ಎ.ವ್ಯಾಸಂಗ ವಿದ್ಯಾರ್ಥಿಗೆ ನೀಡುವುದಾಗಿ ವಾಗ್ದಾಣ ಮಾಡಿದರು. 

ಡಾ. ಶಾಂತಾಇಮ್ರಾಪೂರ ಹಾಗೂ ಪ್ರೊ.ಜಿ.ಎ. ತಿಗಡಿ ಪ್ರಶಸ್ತಿ ಫಲಕ ವಾಚಿಸಿದರು. ಕಾರ್ಯಕ್ರಮದಲ್ಲಿಡಾ.ವೀರಣ್ಣರಾಜೂರ ಉಪಸ್ಥಿತರಿದ್ದು ಮಾತನಾಡಿದರು.ವೇದಿಕೆಯಲ್ಲಿಚಂದ್ರಶೇಖರ ಕಾಪಸೆ ಇದ್ದರು. ರವಿ ಕಾಪಸೆ ತಮ್ಮತಂದೆಯವರ ಕಷ್ಟದ ಹಾಗೂ ಶಿಸ್ತುಬದ್ಧ ಜೀವನದ ಬಗ್ಗೆ ಮಾತನಾಡಿದರು. ಕ.ವಿ.ವ. ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಸತೀಶ ತುರಮರಿ ಸ್ವಾಗತಿಸಿದರು.ಡಾ. ಬಸವರಾಜ ಸಾದರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಹಲಗತ್ತಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು. ಡಾ. ಸಂಜೀವಕುಲಕರ್ಣಿ, ಬಸವಪ್ರಭು ಹೊಸಕೇರಿ, ವೀರಣ್ಣಒಡ್ಡೀನ,  ಡಾ. ಜಿನದತ್ತ ಹಡಗಲಿ, ವಿಶ್ವೇಶ್ವರಿ ಹಿರೇಮಠ, ಡಾ. ಧನವಂತ ಹಾಜವಗೋಳ, ಡಾ. ಕೆ.ಆರ್‌. ದುರ್ಗಾದಾಸ್, ಸಿ.ಯು.ಬೆಳ್ಳಕ್ಕಿ, ರಂಜಾನದರ್ಗಾ, ಡಾ. ಲಿಂಗರಾಜಅಂಗಡಿ, ಸುಜಾತಾ ಹಡಗಲಿ  ಸೇರಿದಂತೆ ಕಾಪಸೆ ಪರಿವಾರದವರು, ಶಿಷ್ಯಂದಿರು, ಅಭಿಮಾನಿಗಳು ಇದ್ದರು.