ಮೂಡಲಗಿ

ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ಮುರಳಿಧರ ಪೈ ಪರೀಶೀಲನೆ

ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ಮುರಳಿಧರ ಪೈ ಪರೀಶೀಲನೆ

ಮೂಡಲಗಿ 13: ನೂತನವಾಗಿ ನಿರ್ಮಾಣವಾಗುತ್ತಿರುವ ನ್ಯಾಯಾಲಯದ ಕಟ್ಟಡವನ್ನು ವೀಕ್ಷಿಸಲು ಆಗಮಿಸಿದ ಬೆಳಗಾವಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಮುರಳಿಧರ ಪೈ ಅವರು ನಿರ್ಮಾಣ ಹಂತದ ಕಟ್ಟಡ ಕಾಮಗಾರಿಯ ಗುಣಮಟ್ಟವನ್ನು ವೀಕ್ಷಿಸಿ ವಕೀಲರೊಂದಿಗೆ ಸಮಾಲೋಚಿಸಿ ಹಲವಾರು ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು. 

ನ್ಯಾಯವಾದಿಗಳ ಸಂಘದಿಂದ, ಮೂಡಲಗಿ ತಾಲೂಕಿಗೆ ಸೇರೆ​‍್ಡಗೊಂಡಿರುವ ಗ್ರಾಮಗಳಲ್ಲಿರುವ ವ್ಯಾಜ್ಯಗಳನ್ನು ಮೂಡಲಗಿ ನ್ಯಾಯಾಲಯದ ವ್ಯಾಪ್ತಿಗೆ ವರ್ಗಾಯಿಸುವ ಕುರಿತು ಮನವಿಯನ್ನು ಸಲ್ಲಿಸಿದರು.  

ಮೂಡಲಗಿ ಜೆಎಮ್‌ಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಪಾಟೀಲ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್ ಎಸ್ ಗೋಡಿಗೌಡರ, ಪಿಎಸ್‌ಐ ಎಚ್ ವಾಯ್ ಬಾಲದಂಡಿ, ಮಾಜಿ ಅಧ್ಯಕ್ಷ ಕೆ ಪಿ ಮಗದುಮ್, ಶಂಕರ ತುಕ್ಕನ್ನವರ, ವಿನೋದ ಪಾಟೀಲ, ರವಿ ಪತ್ತಾರ,  ಭೀಮಶಿ ಹೆಬ್ಬಾಳ, ಶಿವಬಸು ತುಪ್ಪದ, ಆರ್ ಬಿ ಮಮದಾಪೂರ ಸೇರಿದಂತೆ ಸಂಘದ ಪದಾಧಿಕಾರಿಗಳು, ನ್ಯಾಯವಾದಿಗಳು, ನ್ಯಾಯಾಲಯ ಸಿಬ್ಬಂದಿಗಳು ಇದ್ದರು. 


ಸುದ್ದಿ ಓದಿ