ಇಂಡೋನೇಷ್ಯಾದಲ್ಲಿ ಬಸ್ ಕಂದಕಕ್ಕೆ ಬಿದ್ದು ಕನಿಷ್ಠ 22 ಸಾವು
ಜಕಾರ್ತಾ, ಮಾರ್ಚ್ 11: ಇಂಡೋನೇಷ್ಯಾದಲ್ಲಿ ಬಸ್ ಕಂದಕಕ್ಕೆ ಉರುಳಿ ಬಿದ್ದು ಕನಿಷ್ಠ 22 ಜನರು ಮೃತಪಟ್ಟಿದ್ದಾರೆ.
ಮೃತರಲ್ಲಿ ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು ಶಿಕ್ಷಕರು ಸಹ ಸೇರಿದ್ದಾರೆ ಎಂದು ಇಂಡೋನೇಷ್ಯಾದ ಮಾಧ್ಯಮ ವರದಿ ಮಾಡಿದೆ.
ಗುರುವಾರ. ಜಕಾರ್ತಾ ಗ್ಲೋಬ್ ಪತ್ರಿಕೆ ವರದಿಯ ಪ್ರಕಾರ, 58 ಜನರೊಂದಿಗೆ ಬಸ್ ತೀಕ್ಮಲಯ ನಗರಕ್ಕೆ ತೀರ್ಥಯಾತ್ರೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಜರುಗಿದೆ .
ಸ್ಥಳೀಯ ತುರ್ತು ಸೇವೆಗಳ ಪ್ರಕಾರ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಹೇಳಲಾಗಿದ್ದರೂ ಈ ಘಟನೆಗೆ ಸಕಾಲಿಕ ಕಾರಣ ಇನ್ನೂ ತಿಳಿದಿಲ್ಲ.