2 ವರ್ಷದ ವಚನಾ ವೀರೇಶ್ ಪಾಟೀಲಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ ಗೌರವ
India Book of Records honor for 2-year-old Vachana Veeresh Patil
ಲೋಕದರ್ಶನ ವರದಿ
ಮಾಂಜರಿ 06: ಸೆ. ಅಪಾರ ಸ್ಮರಣಶಕ್ತಿ ಹಾಗೂ ಅಚ್ಚರಿಯ ಗ್ರಹಣ ಸಾಮರ್ಥ್ಯದಿಂದ ಚಿಕ್ಕೋಡಿ ತಾಲ್ಲೂಕಿನ ನೇಜ ಗ್ರಾಮದ 2 ವರ್ಷ 1 ತಿಂಗಳ ಬಾಲಕಿ **ವಚನಾ ವೀರೇಶ್ ಪಾಟೀಲ** ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಸಾಧಕಿಯಾಗಿ ಹೊರಹೊಮ್ಮಿದ್ದಾಳೆ.
ಹಾವೇರಿ ಮೂಲದ ಹಾಗೂ ಪ್ರಸ್ತುತ ನೇಜ ಗ್ರಾಮದ ನಿವಾಸಿ ಸಂಸ್ಕೃತಿ ಚಿಂತಕ ವೀರೇಶ್ ಗ. ಪಾಟೀಲ ಅವರ ಪುತ್ರಿಯಾಗಿರುವ ವಚನಾ, ಅತಿ ಚಿಕ್ಕ ವಯಸ್ಸಿನಲ್ಲೇ ಸಾಮಾನ್ಯ ಜ್ಞಾನ, ಭಾಷಾ ಜ್ಞಾನ ಸೇರಿದಂತೆ ವಿವಿಧ ವಿಷಯಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳುವ ಮೂಲಕ ಗಮನ ಸೆಳೆದಿದ್ದಾಳೆ.
ವಚನಾ 21ಕ್ಕೂ ಹೆಚ್ಚು ರಾಷ್ಟ್ರೀಯ ನಾಯಕರ, 14ಕ್ಕೂ ಅಧಿಕ ಸಮಾಜ ಸುಧಾರಕರ ಹಾಗೂ 26ಕ್ಕೂ ಹೆಚ್ಚು ಸಂತ-ಮಹಾತ್ಮರ ಭಾವಚಿತ್ರಗಳನ್ನು ನಿಖರವಾಗಿ ಗುರುತಿಸುತ್ತಾಳೆ. ಇಂಗ್ಲಿಷ್ ಂಹಿಚ ಅಕ್ಷರಗಳಿಗೆ ಸೂಕ್ತ ಶರಣರ ಹೆಸರುಗಳನ್ನು ಜೋಡಿಸಿ ಹೇಳುವ ವಿಶಿಷ್ಟ ಕೌಶಲ್ಯವನ್ನೂ ಹೊಂದಿದ್ದಾಳೆ.
ಇದಲ್ಲದೆ, 60ಕ್ಕೂ ಹೆಚ್ಚು ಇಂಗ್ಲಿಷ್ ಪದಗಳ ಕನ್ನಡ ಅರ್ಥವನ್ನು ಹೇಳುವುದು, ಮಾನವ ದೇಹದ ಅಂಗಾಂಗಗಳ ಹೆಸರುಗಳನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಗುರುತಿಸುವುದು, 15ಕ್ಕೂ ಹೆಚ್ಚು ಜಿಕೆ ಪ್ರಶ್ನೆಗಳಿಗೆ ಉತ್ತರಿಸುವುದು ಹಾಗೂ 10ಕ್ಕೂ ಹೆಚ್ಚು ಸಂಸ್ಕೃತ ಶ್ಲೋಕಗಳನ್ನು ಪಠಿಸುವ ಸಾಮರ್ಥ್ಯವನ್ನು ಹೊಂದಿದ್ದಾಳೆ.
ಭಾರತದ ರಾಜ್ಯಗಳು, ಕರ್ನಾಟಕದ ಜಿಲ್ಲೆಗಳು, ಖಂಡಗಳು, ದಿಕ್ಕುಗಳು, ವಾರದ ದಿನಗಳು ಮತ್ತು ತಿಂಗಳ ಹೆಸರುಗಳನ್ನು ಸ್ಪಷ್ಟವಾಗಿ ನೆನಪಿನಲ್ಲಿಟ್ಟುಕೊಂಡಿರುವ ವಚನಾ, ಪ್ರಾಣಿ, ಪಕ್ಷಿ, ಹೂವು, ಹಣ್ಣು ಹಾಗೂ ತರಕಾರಿಗಳು ಸೇರಿದಂತೆ 100ಕ್ಕೂ ಅಧಿಕ ಚಿತ್ರಗಳನ್ನು ಕ್ಷಣಾರ್ಧದಲ್ಲಿ ಗುರುತಿಸುವ ಸಾಮರ್ಥ್ಯ ಹೊಂದಿದ್ದಾಳೆ.
ಅತಿ ಚಿಕ್ಕ ವಯಸ್ಸಿನಲ್ಲೇ ಕನ್ನಡ ನಾಡಿನ ಸಂಸ್ಕೃತಿ ಹಾಗೂ ಜ್ಞಾನವನ್ನು ಮೈಗೂಡಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ವಚನಾಳ ಅಪರೂಪದ ಸಾಧನೆಗೆ ಗ್ರಾಮಸ್ಥರು ಹಾಗೂ ವಿವಿಧ ವಲಯಗಳ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 