ಅಂತರರಾಷ್ಟ್ರೀಯ

ಭಾರತದ ರೂಪಾಂತರಿ ವೈರಸ್‌ 44 ದೇಶಗಳಲ್ಲಿ ಕಂಡುಬಂದಿದೆ ; ಡಬ್ಲ್ಯುಎಚ್ಓ

ಭಾರತದ ರೂಪಾಂತರಿ ವೈರಸ್‌ 44 ದೇಶಗಳಲ್ಲಿ ಕಂಡುಬಂದಿದೆ ;   ಡಬ್ಲ್ಯುಎಚ್ಓ

ಜಿನೀವಾ, ಮೇ 12: ಭಾರತದಲ್ಲಿ ರೂಪಾಂತರಗೊಂಡಿರುವ  ಕೊರೊನಾ  ಬಿ 1,617 ವೈರಸ್,  ವಿಶ್ವದ  ಬಹಳಷ್ಟು  ದೇಶಗಳಿಗೆ ಹರಡಿದೆ.  ಈವರೆವಿಗೆ 44 ದೇಶಗಳಲ್ಲಿ ಈ ವೈರಸ್‌ ಗುರುತಿಸಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಓ) ಬುಧವಾರ  ಹೇಳಿದೆ.

B.1.617 ರಲ್ಲಿ ಹಲವು   ಉಪ ಪ್ರಭೇದಗಳಿದ್ದು, ಅವಳಿ ರೂಪಾಂತರಿ ವೈರಸ್ ಪ್ರಕಾರವಾಗಿದೆ.  ಈ ಸ್ಟ್ರೈನ್ ಮೊದಲ ಬಾರಿ ಭಾರತದಲ್ಲಿ ಕಂಡುಬಂದಿದೆ.  44 ದೇಶಗಳು  ಅಪ್ಲೋಡ್ ಮಾಡಿದ 4,500 ಮಾದರಿಗಳಲ್ಲಿ  ಈ ಮಾದರಿಯನ್ನು ಗುರುತಿಸಿರುವುದಾಗಿ ಡಬ್ಲ್ಯುಎಚ್ಓ ತಿಳಿಸಿದೆ.

ಭಾರತದ ಹೊರಗೆ,  ಬ್ರಿಟನ್‌ನಲ್ಲಿ ಈ  ವೈರಸ್‌ ಪ್ರಕರಣಗಳು    ಅತ್ಯಧಿಕವಾಗಿ  ವರದಿಯಾಗಿವೆ  ಎಂದು  ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕಳೆದ ವಾರ ಭಾರತದ ರೂಪಾಂತರಿ   ಪ್ರಭೇದವನ್ನು  ಆತಂಕಕಾರಿ   ಮಾದರಿ ಎಂದು ವರ್ಗೀಕರಿಸಿದೆ. ಇದರಿಂದ  ಬ್ರಿಟನ್, ಬ್ರೆಜಿಲ್ , ದಕ್ಷಿಣ ಆಫ್ರಿಕಾದಲ್ಲಿ ಕಂಡುಬರುವ ಮಾರಕ ವೈರಸ್  ಮಾದರಿಗಳ ಪಟ್ಟಿಗೆ ಬಿ 1,617 ಅನ್ನು ಸೇರಿಸಿದೆ. ಈ ರೂಪಾಂತರಿ     ಪ್ರಸರಣ,  ಕೊರೊನಾ ವೈರಸ್‌ಗೆ ಹೋಲಿಸಿದರೆ ತೀವ್ರವಾಗಿದೆ ಎಂದು ಡಬ್ಲ್ಯುಎಚ್‌ಒ ಸ್ಪಷ್ಟಪಡಿಸಿದೆ. ಹಲವು ದೇಶಗಳಲ್ಲಿ ಈ ರೀತಿಯ ಪ್ರಕರಣಗಳು  ವೇಗವಾಗಿ   ಪ್ರಸರಣಗೊಳ್ಳುತ್ತಿದ್ದು,  ಹಾಗಾಗಿ ಇದನ್ನು  ಆತಂಕಕಾರಿ ಪಟ್ಟಿಗೆ  ಸೇರ್ಪಡೆಗೊಳಿಸಲಾಗಿದೆ.   ಈ ರೂಪಾಂತರಿಯಿಂದ  ಭಾರತದಲ್ಲಿ ಪ್ರಕರಣಗಳ ಸಂಖ್ಯೆ  ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ.

ಆದರೆ, ಭಾರತದಲ್ಲಿ ವೈರಸ್  ತೀವ್ರವಾಗಿ  ಹರಡಲು ಇತರ ಕಾರಣಗಳೂ ಇವೆ   ಎಂದು ಡಬ್ಲ್ಯುಎಚ್‌ಓ ತಿಳಿಸಿದೆ. ಕೊರೊನಾ  ಜಾಗ್ರತೆಯನ್ನು    ಮರೆತು ಭಾರಿ  ಬೃಹತ್‌  ಪ್ರಮಾಣದ ಧಾರ್ಮಿಕ  ಹಾಗೂ ರಾಜಕೀಯ ಸಮಾವೇಶ ಆಯೋಜಿಸಿ  ಭೌತಿಕ ದೂರ, ಮಾಸ್ಕ್‌ ಧರಿಸುವಂತಹ   ನಿಯಮಗಳ ನಿರ್ಲಕ್ಷ್ಯವೂ  ಪ್ರಸ್ತುತ ಪರಿಸ್ಥಿತಿಗೆ ಕಾರಣ ಎಂದು ಭಾವಿಸಲಾಗಿದೆ. ಏಪ್ರಿಲ್ ಅಂತ್ಯದ ವೇಳೆಗೆ, ಬಿ 1.617  ರಲ್ಲಿ    ಬಿ 1.617.1 , ಬಿ 1.617.2 ಪ್ರಭೇದಗಳನ್ನು  ಭಾರತದಲ್ಲಿ ಗುರುತಿಸಲಾಗಿದೆ. ಇದಲ್ಲದೆ, ಬ್ರಿಟನ್‌ನಲ್ಲಿ ಬೆಳಕಿಗೆ ಬಂದ ಬಿ .1.1.7 ಸ್ಟ್ರೈನ್ ಕೂಡ ದೇಶದಲ್ಲಿ ವೇಗವಾಗಿ ಹರಡುತ್ತಿದೆ.

ಸುದ್ದಿ ಓದಿ