ಬ್ರೆಜಿಲ್‌ನಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆ
ಮಾಸ್ಕೋ, ಜೂನ್ 4: ಬ್ರೆಜಿಲ್ ನಲ್ಲಿ ಕಳೆದ 24 ಗಂಟೆಗಳಲ್ಲಿ ಬ್ರೆಜಿಲ್‌ನಲ್ಲಿ ದೃಡಪಡಿಸಿದ ಕರೋನ ಪ್ರಕರಣಗಳ ಸಂಖ್ಯೆ 83,391 ರಿಂದ 16,803,472 ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.
ಸಚಿವಾಲಯದ ವರದಿ ಪ್ರಕಾರ, ಹೊಸದಾಗಿ 1,682 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ 469,388ಕ್ಕೆ ಏರಿಕೆಯಾಗಿದೆ. ಸೋಂಕು ದೇಶದಲ್ಲಿ ಏಕಾಏಕಿ ಪ್ರಾರಂಭವಾದಾಗಿನಿಂದ 15.22 ದಶಲಕ್ಷಕ್ಕೂ ಹೆಚ್ಚು ರೋಗಿಗಳು ಈವರೆಗೆ ಚೇತರಿಸಿಕೊಂಡಿದ್ದಾರೆ.
ಇದಕ್ಕೆ ಒಂದು ದಿನ ಮೊದಲು ದೇಶದಲ್ಲಿ 95,000 ಕ್ಕೂ ಹೆಚ್ಚು ಹೊಸ ಕರೋನ ಸೋಂಕು ಪ್ರಕರಣಗಳು ದೃಡಪಟ್ಟಿತ್ತು ಇದರ ಜೊತೆಗೆ 2,507 ಸಾವುನೋವುಗಳು ಸಂಭವಿಸಿತ್ತು ಎಂದು ವರದಿ ಹೇಳಿದೆ.