ಅಂತರರಾಷ್ಟ್ರೀಯ

ಬ್ರೆಜಿಲ್ ನಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಏರಿಕೆ

ಬ್ರೆಜಿಲ್ ನಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಏರಿಕೆ

ಮಾಸ್ಕೋ, ಮೇ 8: ಬ್ರೆಜಿಲ್ ನಲ್ಲಿ  ಕಳೆದ 24 ಗಂಟೆಗಳಲ್ಲಿ  ಕರೋನ ಸೋಂಕು  ಪ್ರಕರಣ ,ಮತ್ತು ಸಾವಿನ  ಸಂಖ್ಯೆ ಎರಡೂ ಗಣನೀಯವಾಗಿ  ಏರಿಕೆಯಾಗುತ್ತಿದೆ. 

ಪ್ರಕರಣಗಳ ಸಂಖ್ಯೆ 78,886 ರಿಂದ 15,082,449 ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಸಚಿವಾಲಯ ಶುಕ್ರವಾರ  ತಿಳಿಸಿದೆ. ಸಚಿವಾಲಯದ ಪ್ರಕಾರ, ಸಾವಿನ ಸಂಖ್ಯೆ 2,165 ರಷ್ಟು ಏರಿಕೆಯಾಗಿ, ಈವರೆಗೆ  4 ಲಕ್ಷಕ್ಕೂ ಹೆಚ್ಚು ಜನರು  ಮಾರಕ ಸೋಂಕಿಗೆ ಬಲಿಯಾಗಿದ್ದಾರೆ. 

ಸೋಂಕು  ಏಕಾಏಕಿ ಪ್ರಾರಂಭವಾದಾಗಿನಿಂದ 13.64 ದಶಲಕ್ಷಕ್ಕೂ ಹೆಚ್ಚು ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದಕ್ಕೂ  ಮೊದಲು ಒಂದು ದಿನ ಮುಂಚಿತವಾಗಿ, ದೇಶದಲ್ಲಿ  73,ಸಾವಿರಕ್ಕೂ  ಹೆಚ್ಚು ಹೊಸ ಪ್ರಕರಣಗಳು ಖಚಿತವಾಗಿ, 2,550 ಸಾವು ಸಂಭವಿಸಿದೆ ಎಂದೂ  ವರದಿಯಾಗಿದೆ. 

ಸುದ್ದಿ ಓದಿ