ಪುನೀತ್ ರಾಜಕುಮಾರ ಕ್ರಾಸ್ ಮರುನಾಮಕರಣದ ನಾಮಫಲಕ ಉದ್ಘಾಟನೆ
ಲೋಕದರ್ಶನ ವರದಿ
ಮೂಡಲಗಿ 06: ಕರುನಾಡಿನ ಯುವರಾಜ ಕೋಟ್ಯಂತರ ಅಭಿಮಾನಿಗಳ ಕಣ್ಮಣಿ ಪುನೀತ್ ರಾಜಕುಮಾರ ಅಕಾಲಿಕವಾಗಿ ಕಾಣದಂತೆ ಮಾಯವಾಗಿ ಕೈಲಾಸ ಸೇರಿಕೊಂಡ ಘಟನೆ ನಮ್ಮೆಲ್ಲರನ್ನೂ ಸ್ತಂಭೀಭೂತರನ್ನಾಗಿಸಿದೆ ಎಂದು ಉಪನ್ಯಾಸಕ ವಾಯ್ ಬಿ ಕಳ್ಳಗುದ್ದಿ ಹೇಳಿದರು.
ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಅಪ್ಪು ಅಭಿಮಾನಿ ಬಳಗದಿಂದ ಗ್ರಾಮದ ನವನಗರ ಕ್ರಾಸ್ನ್ನು “ಪುನೀತ್ ರಾಜಕುಮಾರ ಕ್ರಾಸ್” ವೆಂದು ಮರುನಾಮಕರಣದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ಪುನೀತ ನೆನಪು ಮಾಡಿಕೊಳ್ಳಲಾಗುತ್ತಿದೆ. ಬದುಕಿರುವ ತನಕವೂ ಮಾಡಿದ ಸಮಾಜ ಸೇವೆಯೇ ಅವರ ಹೆಸರು ಜನರ ಹೃದಯದಲ್ಲಿ ಅಜರಾಮರವಾಗಿರಲು ಸಾಧ್ಯವಾಗಿದೆ. ನಮ್ಮ ಕೈಲಾದಷ್ಟು ಸಮಾಜಕ್ಕೆ ಸೇವೆ ಸಲ್ಲಿಸಿ, ನಾವು ಸಲ್ಲಿಸಿದ ಸೇವೆಗಳೇ ನಮ್ಮ ಉಸಿರು ನಿಂತ ಮೇಲೂ ನಮ್ಮ ಹೆಸರನ್ನು ಉಳಿಸುತ್ತವೆ ಎಂದರು.
ಪಿಎಸ್ಐ ಎಚ್ ವೈ ಬಾಲದಂಡಿ ಮಾತನಾಡಿ, ಪುನೀತ್ ರಾಜಕುಮಾರ ಅವರ ಅಭಿಮಾನಿಗಳು ಸಾಕಷ್ಟು ರಕ್ತದಾನ ಶಿಬಿರ ಹೀಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅದೆಷ್ಟೋ ಅಭಿಮಾನಿಗಳು ತಮ್ಮ ಕಣ್ಣಗಳ ದಾನಕ್ಕೆ ಮುಂದೆ ಬಂದಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಬಡ ಜನರಿಗೆ ಅನ್ನಸಂತರೆ್ಣ ಮಾಡಿ ಅಭಿಮಾನ ಮೆರೆದಿದ್ದಾರೆ ಎಂದರು.
ಹಳ್ಳೂರ ಗ್ರಾಮದಲ್ಲಿ ಪುನೀತ ಪುಣ್ಯಸ್ಮರಣೆ ಅಂಗವಾಗಿ ಅಪ್ಪು ಅಭಿಮಾನಿಗಳಿಂದ ಅನ್ನಸಂತರೆ್ಣ ಹಾಗೂ ಡಾ. ವಿ.ಪಿ ಕನಕರಡ್ಡಿ ಮೆಮೋರಿಯಲ್ ಬ್ಲಡ್ ಸೆಂಟರ್ ಮಹಾಲಿಂಗಪೂರ ಮತ್ತು ಅಪ್ಪು ಅಭಿಮಾನಿ ಬಗಳದ ಸಹಯೋಗದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ ನೂರಾರು ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ತಮ್ಮ ನೆಚ್ಚಿನ ನಟನನ್ನು ನೆನೆದು ಭಾವುಕರಾದರು.
ಪುನೀತ ರಾಜಕುಮಾರ ಕ್ರಾಸ್ ಎಂಬ ನಾಮಫಲಕವನ್ನು ಗ್ರಾಮದ ನಿವೃತ್ತ ಯೋಧ ಸುರೇಶ ಬಾಗಡಿ, ಗ್ರಾಪಂ ಸದಸ್ಯ ಹಣಮಂತ ತೇರದಾಳ, ಮಾಜಿ ಜಿಪಂ ಸದಸ್ಯ ಭೀಮಶಿ ಮಗದುಮ್ಮ, ಮಾಜಿ ಗ್ರಾಪಂ ಅಧ್ಯಕ್ಷ ಬಸಪ್ಪ ಹಡಪದ ಉದ್ಘಾಟಿಸಿದರು.
ಸುರೇಶ ಕತ್ತಿ, ಸದಾಶಿವ ಮಾವರಕ, ಮಹಾದೇವ ಹೊಸಟ್ಟಿ, ಬಾಳೇಶ ನೇಸೂರ, ಕೆಂಪಣ್ಣ ಅಂಗಡಿ, ನರಸಪ್ಪ ಶೇರಖಾನ, ಲಕ್ಕಪ್ಪ ಸಪ್ತಸಾಗರ, ರಾಮಚಂದ್ರ ಬಾಗಡೆ, ಮಂಜು ನಾವಿ, ದುಂಡಿಬಾ ಕಿಳ್ಳಿಕೆತರ, ಆನಂದ ಕಿಳ್ಳಿಕೇತರ, ಆನಂದ ಬಾಗಡಿ, ಕಿಶೋರ ಗಣಾಚಾರಿ, ಮನೋಹರ ಬಾಗಡಿ, ಸಂಜು ಸಾಂಗ್ಲಿಕರ, ಚಂದ್ರೇಶ ಶೆಟ್ಟಿ, ರಾಮಪ್ಪ ಬಾಗಡಿ, ಹಣಮಂತ ಬಾಗಡಿ, ಅಪ್ಪಸಾಬ ಮುಜಾವರ, ಬಸಪ್ಪ ಕಾಂಬಳೆ ಹಾಗೂ ಪುನೀತ ಅಭಿಮಾನಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.