ಮೂಡಲಗಿ

ಇಂದು ನೂತನ ಲಕ್ಷ್ಮೀದೇವಿ ದೇವಸ್ಥಾನದ ಉದ್ಘಾಟನೆ

ಇಂದು ನೂತನ ಲಕ್ಷ್ಮೀದೇವಿ ದೇವಸ್ಥಾನದ ಉದ್ಘಾಟನೆ

ಮೂಡಲಗಿ : ಪಟ್ಟಣದ ಗಾಂಧಿ ಚೌಕದ ಹತ್ತಿರ ಢವಳೇಶ್ವರ ಓಣಿಯಲ್ಲಿ ನೂತನವಾಗಿ ಢವಳೇಶ್ವರ ಕುಟುಂಬಸ್ಥರು  ನಿಮರ್ಿಸಿದ ಲಕ್ಷ್ಮೀದೇವಿ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪಣೆ ಹಾಗೂ ಕಳಸಾರೋಹಣ, ಜಾತ್ರಾಮಹೋತ್ಸವ ಮೇ.29 ಮತ್ತು 30ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಾತ್ರಾ ಕಮಿಟಿ ತಿಳಿಸಿದೆ.

ಮೇ.29ರಂದು ಪಟ್ಟಣದ ಶ್ರೀ ಬಸವೇಶ್ವರ ದೇವಸ್ಥಾನ ದಿಂದ ಕುಂಭ ಮೇಳ, ಸಕಲ ವಾಧ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯುವದು. ನಂತರ ಹೋಮ ಹವಣದೊಂದಿಗೆ ಲಕ್ಷ್ಮೀ ದೇವಿ ಮೂರ್ತಿ ಪ್ರತಿಷ್ಠಾಪಣೆ ಮದ್ಯಾಹ್ನ ಮಹಾ ಪ್ರಸಾದ ಜರುಗಲಿದೆ.

ಸಮಾರಂಭದ ಸಾನಿಧ್ಯವನ್ನು ದತ್ತಾತ್ರೇಯಬೋಧ ಸ್ವಾಮಿಗಳು ಹಾಗೂ ಶ್ರೀಧರಬೋಧ ಸ್ವಾಮಿಗಳು, ಸುಣಧೋಳಿಯ ಶಿವಾನಂದ ಸ್ವಾಮಿಗಳು ವಹಿಸುವರು. 

ಬೆಳಗಾವಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ ಉದ್ಘಾಟಿಸುವರು. 

ಮೇ.30ರಂದು ಪ್ರತಿ ವರ್ಷದ ಜಾತ್ರೆಯಂತೆ ಮುಂಜಾನೆ 8ಗಂಟೆಗೆ ಲಕ್ಷ್ಮೀದೇವಿಗೆ ಅಭೀಷೇಕ ನಂತರ ಉಡಿ ತುಂಬುವ ಕಾರ್ಯ ನಡೆಯುವದು. ಮದ್ಯಾಹ್ನ  ಮಹಾಪ್ರಸಾದ ಜರುಗುವದು.

 

ಸುದ್ದಿ ಓದಿ