ಮುಂದಿನ ದಿನಮಾನದಲ್ಲಿ ಈ ಸರಕಾರಕ್ಕೆ ಬುದ್ಧಿ ಕಲಿಸಲಾಗುತ್ತದೆ: ಸಂಗಮೇಶ್ವರ ಶಿವಾಚಾರ್ಯ
ಲೋಕದರ್ಶನ ವರದಿ
ಕುಷ್ಟಗಿ 09: ಮುಂದಿನ ದಿನಮಾನದಲ್ಲಿ ಈ ಸರಕಾರಕ್ಕೆ ಬುದ್ಧಿ ಕಲಿಸಲಾಗುತ್ತದೆ ಚಳಗೇರಾ ಮಠದ ವೀರ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ರಾಜ್ಯ ಸರಕಾರದ ದಿವ್ಯ ನಿರ್ಲಕ್ಷ್ಯದ ವಿರುದ್ಧ ಚಳಗೇರಾ ಮಠದ ವೀರ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಗುಡುಗಿದ ಪ್ರಸಂಗ ಶುಕ್ರವಾರ ಬೆಳಿಗ್ಗೆ ಇಲ್ಲಿನ ತಹಶಿಲ್ದಾರ ಕಛೇರಿಯಲ್ಲಿ ನಡೆಯಿತು.
ತಾಲ್ಲೂಕಿನ ವೀರಮಹೇಶ್ವರ ಕ್ಷೇಮಾಭಿವೃದ್ಧಿ ಹಾಗೂ ತಾಲೂಕು ಬೇಡ ಜಂಗಮ ಸಮಾಜ ವತಿಯಿಂದ ಬೇಡ ಜಂಗಮ ಪ್ರಮಾಣ ಪತ್ರಕ್ಕಾಗಿ ರಾಜ್ಯ ಸರಕಾದ ಮೇಲೆ ವಿವಿಧ ಹಂತದ ಪ್ರತಿಭಟನೆ ಮಾಡಿದರು ಕೂಡಾ ಸುಳ್ಳು ಹೇಳುವ ಮೂಲಕ ವಂಚನೆ ಮಾಡುತ್ತಿರುವ ರಾಜ್ಯ ಸರಕಾದ ಕ್ರಮವನ್ನು ಖಂಡಿಸಿದ ಶ್ರೀ ಗಳು ಇಂದು ನಡೆದ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡುತ್ತಿದ್ದ ಅವರು ಬೆಂಗಳೂರಿನ ಫ್ರೀಡಂ ವೃತ್ತದಲ್ಲಿ ಮಾಡಿದ ಹೋರಾಟ ಹತ್ತಿಕ್ಕಲು ಪ್ರಯತ್ನ ಮಾಡಿದ್ದಲ್ಲದೆ ನೇತೃತ್ವ ವಹಿಸಿದ್ದ ಬಿಡಿ ಹಿರೇಮಠ ವಕೀಲರನ್ನು ಬಂದಿಸಲು ಪ್ರಯತ್ನ ಮಾಡಿದ್ದು ಮುಂದಿನ ದಿನಮಾನದಲ್ಲಿ ಈ ಸರಕಾರಕ್ಕೆ ಬುದ್ದಿ ಕಲಿಸಲಾಗುತ್ತದೆ. ಇನ್ನೂ ಕೆಲವೇ ದಿನಗಳಲ್ಲಿ ಕೇಂದ್ರ ಸರಕಾರದ ಗಮನಕ್ಕೆ ತರುವ ಸಲುವಾಗಿ ನಾಡಿನ ಹರ ಗುರು ಚರಮೂರ್ತಿಗಳ ನೇತ್ರತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೇಟಿಯಾಗಿ ಬೇಡ ಜಂಗಮ ಪ್ರಮಾಣ ಪತ್ರ ನೀಡುವಂತೆ ಮನವೊಲಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ನುಡಿದರು.
ತಾಲೂಕು ಬೇಡ ಜಂಗಮ ಸಮಾಜದ ಅಧ್ಯಕ್ಷ ಶಿವಕುಮಾರ ಗಂಧದಮಠ ಮಾತನಾಡಿ ಪ್ರಾಣ ಬಿಟ್ಟೇವು ಹಕ್ಕು ಬಿಡುವುದಿಲ್ಲ ನಮ್ಮ ಹೋರಾಟದ ಸ್ವರೂಪ ಮುಂದಿನ ದಿನಗಳಲ್ಲಿ ಹಿಂಸಾಚಾರಕ್ಕೆ ತಿರುಗಿದರೆ ನಿವೇ ಜವಾಬ್ದಾರರು ಎಂದು ಹೇಳಿದರು.
ಬೆಳಿಗ್ಗೆ 9ಗಂಟೆಯಿಂದ ಇಲ್ಲಿನ ಬುತ್ತಿಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಸೇರಿದ ವಿವಿಧ ಗ್ರಾಮದಿಂದ ಬಂದ ಸಹಸ್ರ ಸಂಖ್ಯೆಯ ಜಂಗಮರು ಅಲ್ಲಿಂದ ನಗರದ ಪ್ರಮುಖ ರಸ್ತೆಯ ಮುಖಾಂತರ ಪ್ರತಿಭಟನೆ ಮೇರವಣಿಗೆ ಮಾಡಿ ಸರಕಾರದ ವಿರುದ್ಧ ಘೋಷಣೆ ಮಾಡುತ್ತಾ ತಹಶಿಲ್ದಾರ ಕಛೇರಿಯಲ್ಲಿ ಆಗಮಿಸಿ ತಹಶಿಲ್ದಾರ ಗುರುರಾಜ ಚಲವಾದಿ ಅವರಿಗೆ ಮನವಿ ಪತ್ರ ನೀಡಿದರು. ಮನವಿ ಸ್ವೀಕರಿಸಿದ ತಹಶಿಲ್ದಾರ ಮಾತನಾಡಿ ಸರಕಾರಕ್ಕೆ ತಮ್ಮ ಮನವಿಪತ್ರ ಕಳಿಸಿಕೊಡುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ದೊಡ್ಡಯ್ಯ ಗದ್ದಡಿಗಿ, ವಿಜಯಕುಮಾರ ಹಿರೇಮಠ, ಮಹಾಂತಯ್ಯ ಅರಳೇಲಿಮಠ, ಚಿರಂಜೀವಿ ಹಿರೇಮಠ, ಪ್ರಭು ಸೊಪ್ಪಿಮಠ, ಸಂಗಮೇಶ್ವರ ಸಾದ್ವಿಮಠ, ಸಂಗಯ್ಯ ವಸ್ರ್ರದ, ಗುರುಪಾದಯ್ಯ ಸಾಲಿಮಠ , ನಾಗಯ್ಯ್ ಸ್ಥಾವರಮಠ ಅಮರಯ್ಯ ಬಿಕ್ಷಾವತಿಮಠ, ಸೇರಿದಂತೆ ತಾಲೂಕಿನ ದೋಟಿಹಾಳ ಕೇಸೂರ,ಹನಮಸಾಗರದ, ಕುರ್ನಾಳ, ಜಾಗೀರಗೂಡದೂರ, ವಿವಿಧ ಗ್ರಾಮದಿಂದ ಈ ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.