ಅಂತರರಾಷ್ಟ್ರೀಯ

ಉತ್ತರ ಅಫಘಾನಿಸ್ತಾನ : ವಾಯುದಾಳಿಯಲ್ಲಿ ಉಗ್ರರ ನೆಲೆ ನಾಶ, 12 ಮಂದಿ ಹತ

ಉತ್ತರ ಅಫಘಾನಿಸ್ತಾನ : ವಾಯುದಾಳಿಯಲ್ಲಿ ಉಗ್ರರ ನೆಲೆ ನಾಶ, 12 ಮಂದಿ ಹತ

ಮೈಮಾನಾ, ಆಗಸ್ಟ್ 29: ಅಫ್ಘಾನಿಸ್ತಾನದ ಉತ್ತರ ಫರಿಯಾಬ್ ಪ್ರಾಂತ್ಯದ ಕರ್ಗಾನ್ ಪ್ರದೇಶದಲ್ಲಿ ಸೇನೆಯು ವಾಯುದಾಳಿ ನಡೆಸಿ ತಾಲಿಬಾನ್ ಉಗ್ರರ ನೆಲೆ ನಾಶಪಡಿಸಿದ್ದು,  12 ಉಗ್ರರು ಹತರಾಗಿದ್ದಾರೆ  ಎಂದು ಉತ್ತರ ಪ್ರದೇಶದ ಸೇನಾ ವಕ್ತಾರ ಮೊಹಮ್ಮದ್ ಹನೀಫ್ ರೆಜಾಯ್ ಶನಿವಾರ ತಿಳಿಸಿದ್ದಾರೆ.

ಖಚಿತ ಸುಳಿವಿನ ಮೇರೆಗೆ ಸೇನೆಯ ಯುದ್ಧ ವಿಮಾನವು ಶುಕ್ರವಾರ ಮಧ್ಯಾಹ್ನ ತಾಲಿಬಾನ್ ನೆಲೆಯೊಳಗೆ ನುಗ್ಗಿ ನಾಶಪಡಿಸಿದ್ದು, 12 ಬಂಡುಕೋರರನ್ನು ಕೊಂದು ಹಾಕಿದೆ.

ಉಗ್ರರು, ಈ ಪ್ರದೇಶದಲ್ಲಿ ಭದ್ರತಾ ತಪಾಸಣಾ ಕೇಂದ್ರಗಳ ಮೇಲೆ ದಾಳಿಗೆ  ಯೋಜಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೆಲೆ ನಾಶ ಹಾಗೂ ಉಗ್ರರ ಸಾವಿನ ಕುರಿತು ತಾಲಿಬಾನ್ ಈ ಕ್ಷಣದವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಸುದ್ದಿ ಓದಿ