ಟ್ವಿಟರ್ ಬ್ಯಾನರ್ : ಡೊನಾಲ್ಡ್ ಟ್ರಂಪ್ ಜತೆಗಿನ ಫೋಟಿ ಡಿಲೀಟ್ ಮಾಡಿದ ಇಸ್ರೇಲ್ ಪ್ರಧಾನಿ
ಟೆಲ್ ಅವೀವ್, ಜನವರಿ 12: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮಂಗಳವಾರ ಟ್ವಿಟರ್ ಖಾತೆಯಲ್ಲಿನ ತಮ್ಮ ಕವರ್ ಫೋಟೋವನ್ನು ಬದಲಾಯಿಸಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜತೆಗಿನ ಚಿತ್ರವನ್ನು ತೆಗೆದುಹಾಕಿದ್ದಾರೆ. ಶ್ವೇತಭವನದ ಸಭೆಯಲ್ಲಿ ಟ್ರಂಪ್ ಪಕ್ಕದಲ್ಲಿ ಕುಳಿತಿದ್ದ ಭಾವಚಿತ್ರವನ್ನು ನೆತನ್ಯಾಹು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದ್ದರು. ಈ ಫೋಟೋ ಇಸ್ರೇಲ್ ಮತ್ತು ಟ್ರಂಪ್ ನೇತೃತ್ವದ ಅಮೆರಿಕ ಆಡಳಿತದ ನಡುವಿನ ಸ್ನೇಹ ಮತ್ತು ನಿಕಟ ಸಂಬಂಧದ ಸಂಕೇತವಾಗಿ ಕಂಡುಬಂದಿತ್ತು. ನವೆಂಬರ್ ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬಿಡೆನ್ ಅವರನ್ನು ನೆತನ್ಯಾಹು ಅಧಿಕೃತವಾಗಿ ಅಭಿನಂದಿಸಿದ ನಂತರ ಟ್ರಂಪ್ ಮತ್ತು ನೆತನ್ಯಾಹು ನಡುವಿನ ಸಂಬಂಧ ಹದಗೆಟ್ಟಿತ್ತು. ಹೀಗಾಗಿ ಉಭಯ ನಾಯಕರೂ ಜತೆಗಿದ್ದ ಫೋಟೊ ಡಿಲೀಟ್ ಮಾಡಲಾಗಿದೆ.
ಇದೀಗ ನೆತನ್ಯಾಹು ಅವರ ಟ್ವಿಟ್ಟರ್ ಪ್ರೊಫೈಲ್‌ನಲ್ಲಿನ ಹೊಸ ಚಿತ್ರವು "ಇಸ್ರೇಲ್ ನಾಗರಿಕರು, ನಾವು ಜೀವನಕ್ಕೆ ಮರಳುತ್ತಿದ್ದೇವೆ" ಎಂಬ ಸಂದೇಶವನ್ನು ಸಾರುತ್ತಿದೆ. ಕವರ್ ಫೋಟೋದ ಬದಲಾವಣೆ ಕುರಿತು ಅವರ ಖಾತೆಯಲ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಏತನ್ಮಧ್ಯೆ, ಅಮೆರಿಕ ರಾಜಧಾನಿ ವಾಷಿಂಗ್ಟನ್ ನಲ್ಲಿ ಜನವರಿ 6 ರ ಅಶಾಂತಿಯ ನಂತರ ಟ್ರಂಪ್ ಅವರನ್ನು ಎಲ್ಲಾ ಪ್ರಮುಖ ಸಾಮಾಜಿಕ ವೇದಿಕೆಗಳಲ್ಲಿ ನಿರ್ಬಂಧಿಸಲಾಗಿದೆ, ಅವರ ಬೆಂಬಲಿಗರ ಗುಂಪೊಂದು ಕಟ್ಟಡಕ್ಕೆ ನುಗ್ಗಿ, ಪೊಲೀಸರೊಂದಿಗೆ ಘರ್ಷಣೆ, ಆಸ್ತಿಪಾಸ್ತಿಗೆ ಹಾನಿ, ಉದ್ಘಾಟನಾ ಹಂತವನ್ನು ವಶಪಡಿಸಿಕೊಳ್ಳುವುದು ಮತ್ತು ರೊಟುಂಡಾವನ್ನು ಆಕ್ರಮಿಸಿಕೊಂಡಿದೆ. ಹಿಂಸಾತ್ಮಕ ರ್ಯಾಲಿಯಲ್ಲಿ ಐವರ ಹತ್ಯೆಯಾಗಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಮತಗಳನ್ನು ಕದಿಯಲಾಗಿದ್ದು, ಇದರ ವಿರುದ್ಧ ಹೋರಾಡಿ ಪ್ರತಿಭಟಿಸುವಂತೆ ಟ್ರಂಪ್ ತಮ್ಮ ಬೆಂಬಲಿಗರಿಗೆ ಕರೆಯಿತ್ತ ಬೆನ್ನಲ್ಲೇ ಈ ಎಲ್ಲ ಅಹಿತಕರ ಬೆಳವಣಿಗೆಗಳು ನಡೆದಿವೆ.