ಅನುದಾನ ತಂದು ಯೋಜನೆ ಆರಂಭಿಸಿದ್ದು ನಾನು: ಶಾಸಕ ಎ.ಎಸ್. ಪಾಟೀಲ ನಡಹಳ್ಳಿ
I brought the grant and started the project: MLA A.S. Patil Nadahalli
ಅನುದಾನ ತಂದು ಯೋಜನೆ ಆರಂಭಿಸಿದ್ದು ನಾನು: ಶಾಸಕ ಎ.ಎಸ್. ಪಾಟೀಲ ನಡಹಳ್ಳಿ
ನಾರಗಬೆಟ್ಟ ಏತ ನೀರಾವರಿ ಯೋಜನೆಯ ಬಾಕಿ ಕಾಮಗಾರಿ ಮುಗಿಸಲಿ: ಅಭಿವೃದ್ಧಿ ಅನುದಾನದಲ್ಲಿ ದುಡ್ಡು ಹೊಡೆಯುವ ಕಾರ್ಯಮುದ್ದೇಬಿಹಾಳ: ನಾಗರಬೆಟ್ಟ ಏತ ನೀರಾವರಿ ಯೋಜನೆಗೆ ಗುದ್ದಲಿ ಪೂಜೆ ಮಾಡಿ ಹೋಗಿರೂದೂ ನಾನು ಅನುದಾನ ತಂದು ಯೋಜನೆ ಆರಂಭ ಮಾಡಿಸಿದೆ. ಚುನಾವಣೆ ನೀತಿ ಸಂಹಿತೆಯಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇನ್ನೂವರೆಗೂ ಬಾಕಿ ಕಾಮಗಾರಿ ಮಾಡಿಸಲು ಆಗುತ್ತಿಲ್ಲ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಬೆಟ್ಟ ಏತ ನೀರಾವರಿ ಸಂಪೂರ್ಣ ಪ್ರದೇಶ ಅಭಿವೃದ್ಧಿ ಮಾಡಿದ್ದೇನೆ. ಉಳಿದಿರುವುದು ಎರಡು ಕೆರೆ ಮಾತ್ರ. ಅವುಗಳನ್ನಾದರೂ ತುಂಬಿಸಿ ಎಂದು ವಿನಂತಿಸಿದರು.
ಜನರು ಪ್ರಶ್ನಿಸಬೇಕು: ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ನಾನು ಶಾಸಕನಾಗಿದ್ದ ಅವಧಿಯಲ್ಲಿ ತಂದ ಅನುದಾನದಲ್ಲಿ ನಡೆಯುತ್ತಿವೆ. ಕಾಂಗ್ರೆಸ್ ಸರ್ಕಾರ ಬಂದು ಮೂರು ವರ್ಷವಾಯಿತು ಒಂದೇ ಒಂದು ಕೋಟಿ ರೂ. ಅನುದಾನ ಕೊಟ್ಟಿಲ್ಲ. ಕೊಟ್ಟಿದ್ದರೆ ದಾಖಲೆ ತೋರಿಸಲಿ. ಇದಕ್ಕಾಗಿ ಆಯ್ಕೆಯಾದ ಜನಪ್ರತಿನಿಧಿಗಳನ್ನು ಪ್ರಶ್ನಿಸೋಣ, ಅವರನ್ನು ಆಯ್ಕೆ ಮಾಡಿದ ಜನರನ್ನು ಪ್ರಶ್ನೆಸುತ್ತೇನೆ. ನಾನು ಮಾಡಿಸಿದ ರಸ್ತೆಗಳನ್ನು ಒಡೆದು ಹಾಕುತ್ತಿದ್ದಾರೆ. ಇದನ್ನು ನೋಡಿಕೊಂಡು ನೀವೇನು ನಿದ್ದೆ ಮಾಡುತ್ತಿದ್ದೀರಾ? ನಾನು ಕ್ಷೇತ್ರದಲ್ಲಿ ಗುಣಮಟ್ಟದ ಕಾಮಗಾರಿಗಳು ನಡೆಯಲಿ ಎಂದು ಅನುದಾನ ತಂದರೆ, ಈಗೀನವರು ಅದರಲ್ಲಿ ದುಡ್ಡು ಹೊಡೆದು ಅಮರ್ಕ ಕಾಮಗಾರಿ ಮಾಡುತ್ತಿದ್ದಾರೆ. ಇದನ್ನೇಲ್ಲ ನೀವು ಪ್ರಶ್ನಿಸಬೇಕು ಎಂದು ಹೇಳಿದರು.ಮತ್ತೆ ಹಿಂದುಳಿದ ತಾಲೂಕಿನ ಹಣೆಪಟ್ಟಿ:ಕಟ್ಟುವಂತಾಗಿದೆಮುದ್ದೇಬಿಹಾಳ ತಾಲೂಕಿನಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಲ್ಯಾಂಡ್ ಆರ್ಮಿರಿಗೆ ಕೊಟ್ಟು ಶೇ.50 ಲೂಟಿ ಹೊಡೆಯುತ್ತಿದ್ದಾರೆ. ಗುತ್ತಿಗೆಗಾರರಿಗೆ ಕೆಲಸವಿಲ್ಲದಂತೆ ಮಾಡಿದ್ದಾರೆ. ಇಷ್ಟಾದರೂ ಗುತ್ತಿಗೆದಾರರು ಸುಮ್ಮನಿದ್ದಾರೆ. ಮೊನ್ನೆ ಬಂದ ಗೋವಿಂದರಾವ್ ವರದಿಯಲ್ಲಿಯೂ ಮುದ್ದೇಬಿಹಾಳ ಹಿಂದುಳಿದ ತಾಲೂಕಿಗೆ ಸೇರಿದೆ. ತಾಲೂಕಿನ ಜನತೆ ಎಚ್ಚೆತ್ತುಕೊಳ್ಳಬೇಕು. ನಿಷ್ಕ್ರೀಯ ಜನಪ್ರತಿನಿಧಿ ಆಯ್ಕೆ ಮಾಡಿದರೆ ನೀವು ಕಷ್ಟ ಅನುಭವಿಸುತ್ತೀರಿ, ನಿಮ್ಮ ಮಕ್ಕಳಿಗೆ ಶಾಪಕೊಟ್ಟು ಹೋಗುತ್ತಿರಿ. ಕ್ಷೇತ್ರದಲ್ಲಿ ನಡೆಯುತ್ತಿರುವ ಕಳಪೆ ಕಾಮಗಾರಿಗಳು ಜನರೇ ನಿಲ್ಲಬೇಕು ಎಂದು ಒತ್ತಾಯಿಸಿದರು.ಸರ್ವರ ಅಭಿವೃದ್ಧಿಗೆ ಶ್ರಮಿಸಿದ್ದೇನೆ: 2.86 ಕೋಟಿ ರೂ. ಕ್ರೀಡಾಂಗಣಕ್ಕೆ, ಪ್ರತಿಯೊಂದು ಸರ್ಕಾರಿ ಶಾಲೆಗೆ 1 ಕೋಟಿ ರೂ., ಉರ್ದು ಶಾಲೆ ಅಭಿವೃದ್ಧಿಗೆ ಅನುದಾನ ಹೀಗೆ ಯಾವುದೇ ಮತ, ಜಾತಿ ನೋಡದೆ ಸರ್ವ ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಕ್ಷೇತ್ರಕ್ಕಾಗಿ ನಾನು ಮಾಡಿರುವ ಸಹಾಯ ಬೇರೆ ಕಡೆ ಮಾಡಿದ್ದರೆ ಸಾಯೋವರೆಗೂ ನನ್ನನ್ನೇ ಶಾಸಕನನ್ನಾಗಿ ಮಾಡುತ್ತಿದ್ದರು ಎಂದು ಹೇಳಿದರು.
ಇನ್ನಾದರೂ ಅಭಿವೃದ್ಧಿಯಾಗಲಿ: ನಾನು ಅಭಿವೃದ್ಧಿಯಲ್ಲಿ ರಾಜಕಾರಣ ಮಾಡಿಲ್ಲ. ಮಾಡೋದು ಇಲ್ಲ. ಎಲ್ಲ ಜನಾಂಗದವರಿಗೂ ಸಹಾಯ, ಸಹಕಾರ ನೀಡಿದ್ದೇನೆ. ಆದರೂ ಜನರುಕೈಹಿಡಿಯಲಿಲ್ಲ. ಇನ್ನಾದರೂ ಕ್ಷೇತ್ರದ ಜನತೆ ಎಚ್ಚೆತ್ತುಕೊಳ್ಳಬೇಕು. ಕ್ಷೇತ್ರದ ಪ್ರತಿ ಮನೆಗೂ ಹೋಗುವೆ. ಅಧಿಕಾರಿಗಳು, ಶಾಸಕರು ಇನ್ನಾದರೂ ಎಚ್ಚೆತ್ತುಕೊಂಡು ಅಭಿವೃದ್ಧಿ ಕಾರ್ಯ ಮಾಡಬೇಕು ಎಂದರು. ನರೇಂದ್ರ ಮೋದಿ ಅವರು ಪ್ರಧಾನಿ ಆದ ನಂತರ ಭಾರತ ಆರ್ಥಿಕಾಭಿವೃದ್ಧಿ ಹೊಂದುತ್ತಿದೆ. 2013-14ರಲ್ಲಿ ಭಾರತದ ಬಜೆಟ್ 13 ಲಕ್ಷ ರೂ. ಕೋಟಿ, ಇದೀಗ ಗಾತ್ರ 53.23 ಲಕ್ಷ ರೂ. ಕೋಟಿಗೆ ಏರಿಕೆಯಾಗಿದೆ. ವಿದೇಶಿ ಹೂಡಿಕೆ, ಕೃಷಿ, ಗ್ರಾಮೀಣಾಭಿವೃದ್ಧಿ, ರಕ್ಷಣೆಗೆ ಕೇಂದ್ರ ಸರ್ಕಾರ ಒತ್ತು ನೀಡಿದೆ. ಜಗತ್ತಿಗೆ ಭಾರತ ವಿಶ್ವಗುರುವಾಗುವ ಕಾಲ ಸಮೀಪವಾಗುತ್ತದೆ ಎಂದರು.
ಗೋಷ್ಠಿಯಲ್ಲಿ ಪ್ರಭು ಕಡಿ, ಸಂಜು ಬಾಗೇವಾಡಿ, ಗೀರೀಶಗೌಡ ಪಾಟೀಲ, ಮದನಸ್ವಾಮಿ ಹಿರೇಮಠ, ಅಶೋಕ ಚಿನಿವಾರ, ಪರಶುರಾಮ ನಾಲತವಾಡ, ಸಂಗನಗೌಡ ಪಾಟೀಲ, ಬಸಯ್ಯ ನಂದಿಕೇಶ್ವರಮಠ, ಹುಲಗಪ್ಪ ಕಿಲ್ಲಾರಟ್ಟಿ, ನಾಗೇಶ ಕವಡಿಮಟ್ಟಿ, ಪುನೀತ ಹಿಪ್ಪರಗಿ, ನಿಖಿಲ ಮಲಗಲದಿನ್ನಿ, ಶಿವು ಬಿರಾದಾರ, ಅನಿಲ ರಾಠೋಡ, ಶಿವು ಲದ್ದಿಮಠ, ಗೌರಮ್ಮ ಹುನಗುಂದ, ಕಾವೇರಿ ಕುಂಬಾರ, ಪ್ರೀತಿ ಕುಂಬಾರ ಸೇರಿದಂತೆ ಇತರರು ಇದ್ದರು
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 