ಭಾರತದಲ್ಲಿ ಇವಿ ಚಾರ್ಜಿಂಗ್ ಸೌಲಭ್ಯ ವಿಸ್ತರಣೆಗೆ ಹ್ಯುಂಡೈ–ಜಿಯೋ-ಬಿಪಿ ಪಾಲುದಾರಿಕೆ
Hyundai, Jio-bp Partner to Expand EV Charging Access Across India
ಬೆಂಗಳೂರು, ಆಗಸ್ಟ್ 25 : ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ (ಇವಿ) ಬಳಕೆದಾರರಿಗೆ ಚಾರ್ಜಿಂಗ್ ಸೌಲಭ್ಯವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಮತ್ತು ಜಿಯೋ-ಬಿಪಿ ಸಹಭಾಗಿತ್ವಕ್ಕೆ ಮುಂದಾಗಿವೆ.
ಈ ಸಹಭಾಗಿತ್ವದಡಿ ಜಿಯೋ-ಬಿಪಿಯ ‘ಪಲ್ಸ್’ ಚಾರ್ಜಿಂಗ್ ಕೇಂದ್ರಗಳನ್ನು ಹ್ಯುಂಡೈನ ‘ಮೈಹ್ಯುಂಡೈ’ ಆ್ಯಪ್ ಮೂಲಕ ಪತ್ತೆಹಚ್ಚಿ ಬಳಸಲು ಇವಿ ಬಳಕೆದಾರರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇದರಿಂದ ಒಂದೇ ಡಿಜಿಟಲ್ ವೇದಿಕೆಯ ಮೂಲಕ ಹೆಚ್ಚಿನ ಚಾರ್ಜಿಂಗ್ ಕೇಂದ್ರಗಳನ್ನು ಸುಲಭವಾಗಿ ಬಳಸಬಹುದಾಗಿದೆ.
ಜಿಯೋ-ಬಿಪಿಯ ಪಲ್ಸ್ ನೆಟ್‌ವರ್ಕ್‌ನ ಏಕೀಕರಣದ ಬಳಿಕ ‘ಮೈಹ್ಯುಂಡೈ’ ಆ್ಯಪ್ ಮೂಲಕ ದೇಶಾದ್ಯಂತ 37,000ಕ್ಕೂ ಹೆಚ್ಚು ಸಾರ್ವಜನಿಕ ಇವಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಪ್ರವೇಶಿಸಬಹುದಾಗಿದೆ. ಜಿಯೋ-ಬಿಪಿ 300ಕ್ಕೂ ಹೆಚ್ಚು ನಗರಗಳಲ್ಲಿ 7,000ಕ್ಕೂ ಅಧಿಕ ಸಕ್ರಿಯ ಚಾರ್ಜಿಂಗ್ ಪಾಯಿಂಟ್‌ಗಳನ್ನು ಹೊಂದಿದೆ.
ದೇಶದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಜಿಯೋ-ಬಿಪಿಯ ಹಲವು ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ದೀರ್ಘ ದೂರದ ಪ್ರಯಾಣ ಕೈಗೊಳ್ಳುವ ಇವಿ ಬಳಕೆದಾರರಿಗೆ ಅನುಕೂಲವಾಗಲಿದೆ. ಇದರ ಚಾರ್ಜಿಂಗ್ ಮೂಲಸೌಕರ್ಯದಲ್ಲಿ 60 ಕಿಲೋವ್ಯಾಟ್‌ನಿಂದ 480 ಕಿಲೋವ್ಯಾಟ್‌ವರೆಗೆ ಡಿಸಿ ಫಾಸ್ಟ್ ಚಾರ್ಜರ್‌ಗಳು ಲಭ್ಯವಿದ್ದು, ನೆಟ್‌ವರ್ಕ್ ಶೇ.96ರಷ್ಟು ಅಪ್‌ಟೈಮ್ ಹೊಂದಿದೆ ಎಂದು ಸಂಸ್ಥೆ ತಿಳಿಸಿದೆ.
ಹ್ಯುಂಡೈ ಮೋಟಾರ್ ಇಂಡಿಯಾದ ಹೆಚ್ಚಿನ ಸಾಮರ್ಥ್ಯದ ಚಾರ್ಜರ್‌ಗಳನ್ನು ಹಂತ ಹಂತವಾಗಿ ಜಿಯೋ-ಬಿಪಿ ಪಲ್ಸ್ ಚಾರ್ಜ್ ಪ್ರೊ ಆ್ಯಪ್ನಲ್ಲೂ ಸಂಯೋಜಿಸಲಾಗುವುದು.
ಹ್ಯುಂಡೈ ಮೋಟಾರ್ ಇಂಡಿಯಾದ ಕಾರ್ಪೊರೇಟ್ ಪ್ಲಾನಿಂಗ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ವಿಭಾಗ ಮುಖ್ಯಸ್ಥ ಹ್ಯುನ್ ಸುಪ್ ಲೀ ಮಾತನಾಡಿ, ಇವಿ ಬಳಕೆದಾರರಲ್ಲಿ ವಾಹನದ ಮೈಲೇಜ್‌ಗಿಂತ ಚಾರ್ಜಿಂಗ್ ಸೌಲಭ್ಯ ಕುರಿತ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಸಹಭಾಗಿತ್ವವು ಸುಲಭ ಮತ್ತು ಚಿಂತೆಮುಕ್ತ ಎಲೆಕ್ಟ್ರಿಕ್ ಮೊಬಿಲಿಟಿ ಅನುಭವ ಒದಗಿಸಲಿದೆ ಎಂದರು.
ಜಿಯೋ-ಬಿಪಿ ಅಧ್ಯಕ್ಷ ಸಾರ್ಥಕ್ ಬೆಹುರಿಯಾ ಮಾತನಾಡಿ, ಸುಲಭವಾಗಿ ಲಭ್ಯವಾಗುವ, ವಿಶ್ವಾಸಾರ್ಹ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಚಾರ್ಜಿಂಗ್ ಮೂಲಸೌಕರ್ಯದ ಮೂಲಕ ಭಾರತದ ಎಲೆಕ್ಟ್ರಿಕ್ ಮೊಬಿಲಿಟಿ ಪರಿವರ್ತನೆಯ ಮೇಲಿನ ವಿಶ್ವಾಸವನ್ನು ಈ ಸಹಭಾಗಿತ್ವ ಮತ್ತಷ್ಟು ಬಲಪಡಿಸಲಿದೆ ಎಂದರು.
ಜಿಯೋ-ಬಿಪಿ ಸಿಇಒ ಅಕ್ಷಯ್ ವಾಧ್ವಾ ಮಾತನಾಡಿ, ತಮ್ಮ ಪಲ್ಸ್ ನೆಟ್‌ವರ್ಕ್‌ನ ಹೆಚ್ಚಿನ ಅಪ್‌ಟೈಮ್ ಮತ್ತು ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹ್ಯುಂಡೈನ ಆ್ಯಪ್‌ಗೆ ಸಂಯೋಜಿಸುವುದರಿಂದ ಇವಿ ಬಳಕೆದಾರರಿಗೆ ಚಾರ್ಜಿಂಗ್ ಕೇಂದ್ರಗಳನ್ನು ಸುಲಭವಾಗಿ ಬಳಸಲು ಸಾಧ್ಯವಾಗಲಿದೆ ಎಂದರು.
‘ಮೈಹ್ಯುಂಡೈ’ ಆ್ಯಪ್ ಯಾವುದೇ ಬ್ರ್ಯಾಂಡ್‌ನ ಇವಿ ಬಳಕೆದಾರರಿಗೆ ಲಭ್ಯವಿದ್ದು, ಒಂದೇ ಡಿಜಿಟಲ್ ವೇದಿಕೆಯ ಮೂಲಕ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ಪತ್ತೆಹಚ್ಚಿ ಬಳಸಲು ಅವಕಾಶ ನೀಡುತ್ತದೆ.
ಹ್ಯುಂಡೈ ಮೋಟಾರ್ ಇಂಡಿಯಾ ಪ್ರಸ್ತುತ 183 ಡಿಸಿ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ನಿರ್ವಹಿಸುತ್ತಿದ್ದು, 2030ರ ವೇಳೆಗೆ ತನ್ನದೇ ಆದ ಚಾರ್ಜಿಂಗ್ ನೆಟ್‌ವರ್ಕ್ ಅನ್ನು 600 ಕೇಂದ್ರಗಳಿಗೆ ವಿಸ್ತರಿಸುವ ಗುರಿ ಹೊಂದಿದೆ.
ಇವಿ ಮಾಲೀಕರ ಅನುಭವವನ್ನು ಮತ್ತಷ್ಟು ಸುಧಾರಿಸಲು ಗ್ರಾಹಕ ಕೇಂದ್ರಿತ ವಿಶೇಷ ಕೊಡುಗೆಗಳನ್ನು ರೂಪಿಸುವ ಬಗ್ಗೆಯೂ ಎರಡೂ ಕಂಪನಿಗಳು ಚರ್ಚಿಸಲಿವೆ.
ಭಾರತದ ಇವಿ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆಯ ಅಳವಡಿಕೆಯನ್ನು ವೇಗಗೊಳಿಸುವ ನಿಟ್ಟಿನಲ್ಲಿ ಈ ಪಾಲುದಾರಿಕೆ ಮಹತ್ವದ ಹೆಜ್ಜೆಯಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 