ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ರಮೇಶ ಜಾರಕಿಹೊಳಿ ಯಾರು, ಅವರಿಗೇನು ಸಂಬಂಧ ಇಲ್ಲಿ, ಚನ್ನರಾಜ್ ಹಟ್ಟಿಹೊಳಿ ಪ್ರಶ್ನೆ

ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ರಮೇಶ ಜಾರಕಿಹೊಳಿ ಯಾರು, ಅವರಿಗೇನು ಸಂಬಂಧ ಇಲ್ಲಿ, ಚನ್ನರಾಜ್ ಹಟ್ಟಿಹೊಳಿ ಪ್ರಶ್ನೆ

ಬೆಳಗಾವಿ : ಗ್ರಾಮೀಣ ಕ್ಷೇತ್ರಕ್ಕೆ ರಮೇಶ ಜಾರಕಿಹೊಳಿಗೆ ಎನು ಸಂಬಂಧ, ಇಲ್ಲಿ ಅವರದೇನು ಕೆಲಸಾ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ದ ಚನ್ನರಾಜ್ ಹಟ್ಟಿಹೊಳಿ ವಾಗ್ದಾಳಿ ನಡೆಸಿದರು. 

   ಶನಿವಾರ ಮಧ್ಯಾಹ್ನ ಗ್ರಾಮೀಣ ಕ್ಷೇತ್ರದಲ್ಲಿನ ರಾಜಹಂಸ ಗಡ ಕೋಟೆಯ ಮೇಲೆ ಇಬ್ಬರು ಮುಖಂಡರ ಕಾರುಗಳು ಮುಖಾಮುಖಿಯಾಗಿದ್ದವು‌. ಈ ಸಂದರ್ಭದಲ್ಲಿ ಮಾಧ್ಯಮ ದವರು ಜೊತೆ ಮಾತನಾಡಿದ ಹಟ್ಟಿಹೊಳಿ ಅವರು, ಗ್ರಾಮೀಣ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ವಿನಾಕಾರಣವಾಗಿ ಅಲೇದಾಡುತ್ತಿದ್ದಾರೆ. ಅವರಿ ಇಲ್ಲೆನು‌ ಕೆಲಸಾ ಎಂದು ಪ್ರಶ್ನೆ ಮಾಡಿದರು. 

   ಅಲ್ಲದೆ ರಾಜಹಂಸಗಡ ಕೋಟೆಯ ಮೇಲೆ ನಿರ್ಮಿಸಲಾದ ಶಿವಾಜಿ ಮಹಾರಾಜರ ಪ್ರತಿಮೆಯ ಅನಾವರಣಕ್ಕೆ ಇನ್ನು ಆಮಂತ್ರಣ ಪತ್ರಿಕೆಯ ಅಂತಿಮಗೊಂಡಿಲ್ಲ.  ಇಲ್ಲಿ ಶಿಷ್ಟಾಚಾರ ಉಲ್ಲಂಘನೆ ಪ್ರಶ್ನೆ ಬರುವದಿಲ್ಲ. ಆದರೆ ಇವರು ಹೇಳುತ್ತಿರುವದು ಬೇರೆ. ರಮೇಶ ಜಾರಕಿಹೊಳಿ ಅವರು ಬೆಂಕಿ ಜೊತೆ ಸರಸ ಆಡುತ್ತಿದ್ದಾರೆ ಎನ್ನುವದನ್ನು ಮರೆಯಬಾರದು  ಎಂದು ಚನ್ನರಾಜ್ ಹಟ್ಟಿಹೊಳಿ ನುಡಿದರು.


ಸುದ್ದಿ ಓದಿ