ಉನ್ನತ ಹುದ್ದೆ ಅಲಂಕರಿಸಿ : ಸುಧಾಕರ ದೈವಜ್ಞ
Hold a high position said Sudhakar Daivagya
ಶಿಗ್ಗಾವಿ 18: ನಮ್ಮ ಸಮಾಜದ ವಿದ್ಯಾರ್ಥಿಗಳು ಉನ್ನತ ಹುದ್ದೆಯನ್ನು ಅಲಂಕರಿಸಬೇಕು ಎಂದು ದೈವಜ್ಞ ಸಮಾಜ ಅಧ್ಯಕ್ಷ ಸುಧಾಕರ ದೈವಜ್ಞ ಹೇಳಿದರು.
ಪಟ್ಟಣದ ವಿಠ್ಠಲ ದೇವಸ್ಥಾನದಲ್ಲಿ ನಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಎಲ್ಲ ಸಮಾಜದವರು ಮುಖ್ಯವಾಹಿನಿಗೆ ಬಂದಿದ್ದಾರೆ ದೈವಜ್ಞ ಸಮಾಜ ಮುಂದೆ ಬರುವ ಅನಿವಾರ್ಯತೆ ಇದೆ ಎಂದು ಮಾರ್ಮಿಕವಾಗಿ ಹೇಳಿದರು. ಮಾಜಿ ಅಧ್ಯಕ್ಷ ಪ್ರಕಾಶ ವೇರ್ಣೆಕರ ಮಾತನಾಡಿ ಸಮಾಜದಲ್ಲಿ ಸಂಘಟನೆ ಪ್ರಮುಖವಾಗಿದೆ ಆದ್ದರಿಂದ ಸಂಘಟನೆ ಮುಖಾಂತರ ಎಲ್ಲ ಕಾರ್ಯಗಳನ್ನು ನಿರ್ವಹಿಸಬಹುದು ಎಂದರು. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಾದ ಅಮೃತಾ ಪಾಲನಕರ, ರಾಧಿಕಾ ಶೇಜವಾಡಕರ, ಅಣ್ಣಯ್ಯ ಶೇಜವಾಡಕರ, ಕಾವ್ಯಾ ಕುರ್ಡೇಕರ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಭೂದಾನಿ ವಾಸುದೇವ ರಾಯ್ಕರ, ಚಂದ್ರಕಾಂತ ಪಾಲನಕರ, ದತ್ತಣ್ಣಾ ವೇರ್ಣೇಕರ, ವಿನಾಯಕ ರಾಯ್ಕರ, ಮೋಹನ ರಾಯ್ಕರ, ಪ್ರಕಾಶ ಪಾಲನಕರ, ಸಂಕೇತ ರಾಯ್ಕರ್, ಮಂಜುನಾಥ ವೇರ್ಣೆಕರ, ಆನಂದ ವೇರ್ಣೆಕರ, ಜಗದೀಶ ಶೇಜವಾಡಕರ, ನಾಗೇಶ ರಾಯ್ಕರ, ಸಂತೋಷ ರಾಯ್ಕರ್, ನಾಗರಾಜ ರಾಯ್ಕರ್, ವಿನೋದಾ ಕುರ್ಡೇಕರ, ಭೂಷಣ ರೇವಣಕರ, ರಾಘವೇಂದ್ರ ದೈವಜ್ಞ, ಗಣೇಶ ಕುಡತರಕರ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ರಾಯೇಶ್ವರ ರಾಯ್ಕರ ಕಾರ್ಯಕ್ರಮ ನಿರ್ವಹಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 