ಹಿರೇಬಾಗೇವಾಡಿ ಪೊಲೀಸರ ಕಾರ್ಯಾಚರಣೆ : ಇಬ್ಬರು ಎಣ್ಣೆ ಡಬ್ಬಿ ಕಳ್ಳರ ಬಂಧನ ; 24.23 ಲಕ್ಷ ಮೌಲ್ಯದ ಡಬ್ಬಿಗಳು ವಶಕ್ಕೆ

ಹಿರೇಬಾಗೇವಾಡಿ ಪೊಲೀಸರ ಕಾರ್ಯಾಚರಣೆ : ಇಬ್ಬರು ಎಣ್ಣೆ ಡಬ್ಬಿ ಕಳ್ಳರ ಬಂಧನ ; 24.23 ಲಕ್ಷ ಮೌಲ್ಯದ ಡಬ್ಬಿಗಳು ವಶಕ್ಕೆ

ಬೆಳಗಾವಿ : ಬೆಲಿ ಎದ್ದು ಹೊಲದ ಬೆಳೆ ಮೆಯ್ದರೆ ರೈತನ ಪಾಡೇನು ಎಂಬ ಮಾತಿನಂತೆ ಲಾರಿಯಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಅಡುಗೆ ಎಣ್ಣೆ ಡಬ್ಬಿಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಲಾರಿ ಚಾಲಕರನ್ನು ಹಿರೇಬಾಗೇವಾಡಿ ಪೊಲೀಸರು ಖೆಡ್ಡಾಕ್ಕೆ ಬಿಳಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ 24.23 ಲಕ್ಷ ಮೌಲ್ಯದ ಎಣ್ಣಿ ಡಬ್ಬಿಗಳನ್ನು ವಶಕ್ಕೆ ಪಡೆದಿದ್ದಾರೆ. 

    ಇದೇ ದಿ.18ರಂದು ಇಸ್ಮಾಯಿಲ್ ನವಾಸ   (43) (ಸಾ : ಪಡುಬಿದ್ರಿ , ಉಡುಪಿ ಜಿಲ್ಲೆ ಇವರು ತಮ್ಮ ಲಾರಿ ಚಾಲಕರಾದ ಇಬ್ರಾಹಿಮ್ ಹಾಗೂ ಸಾಹೇಬ್ ಅಲಿ ಹುಸೇನ್ (ಸಾ. ಇಬ್ಬರೂ ಅಸ್ಸಾಂ ರಾಜ್ಯ) ಇವರಿಬ್ಬು ಮಂಗಳೂರಿನಿಂದ ಅಡುಗೆ ಎಣ್ಣೆಯ ಡಬ್ಬಿಗಳು ಮತ್ತು ಬಾಕ್ಸ್‌ಗಳನ್ನು ಬೆಳಗಾವಿ ಮತ್ತು ನಿಪ್ಪಾಣಿ ಕಡೆಗೆ ಸರಬರಾಜು ಮಾಡಲು ದಿ. 15 ಹೊರಟು ಹಿರೇಬಾಗೇವಾಡಿ ಗ್ರಾಮ ಹದ್ದಿಯ ಬಡೇಕೊಳ್ಳ ಘಾಟದ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಲಾರಿ ನಿಲ್ಲಿಸಿ ಸುಮಾರು 30,38,276 ರೂ. ಮೌಲ್ಯದ 1,465 ಅಡುಗೆ ಎಣ್ಣೆಯ ಡಬ್ಬಿ ಮತ್ತು 80 ಪೌಚ್ ಬಾಕ್ಸ್‌ಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

    ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು.  ಈ ಪ್ರಕರಣದ ಪತ್ತೆ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಗೋಪಾಲಕೃಷ್ಣ ಗೌಡರ ಎಸಿಪಿ ಬೆಳಗಾವಿ (ಗ್ರಾ) ಇವರ ಮಾರ್ಗದರ್ಶನದಲ್ಲಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಪಿಐ ಅಮರೇಶ ಬಿ . ಹಾಗೂ ಸಿಬ್ಬಂದಿಯವರು ಕಾರ್ಯಪ್ರವೃತ್ತರಾಗಿ ಇಬ್ಬರೂ ಆರೋಪಿತರನ್ನು ಪತ್ತೆ ಮಾಡಿ, ವಶಕ್ಕೆ ಪಡೆದುಕೊಂಡು ಅವರಿಂದ 23,93,560 ರೂಪಾಯಿ ಮೌಲ್ಯದ 878 ಅಡುಗೆ ಎಣ್ಣೆ ಡಬ್ಬಿಗಳು ಮತ್ತು 14 ಬಾಕ್ ಎಣ್ಣೆ ಪೌಚ್‌ಗಳು ಹಾಗೂ ಡಿಯೋ ಮೋಟಾರು 30,000 ಹೀಗೆ ಒಟ್ಟು 24,23,560 ಮೌಲ್ಯದ ಸಾಮಗ್ರಿಗಳನ್ನು ವಶ ಪಡಿಸಿಕೊಂಡು ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ . 

    ಆರೋಪಿತರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಶ್ರಮಿಸಿದ ಪಿಐ  ಅಮರೇಶ ಬಿ, ಹಾಗೂ ಅವರ ತಂಡದ ಕಾರ್ಯವೈಖರಿಯನ್ನು ಬೆಳಗಾವಿ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯಾ ಮತ್ತು ಡಿಸಿಪಿಗಳು  ಶ್ಲಾಘಿಸಿರುತ್ತಾರೆ.

ಸುದ್ದಿ ಓದಿ