ಅಂತರರಾಷ್ಟ್ರೀಯ

ಹಿಂದೂ ದೇವಾಲಯ ಧ್ವಂಸ: ಜಗತ್ತಿನಾದ್ಯಂತ ವ್ಯಾಪಕ ಖಂಡನೆ

ಹಿಂದೂ ದೇವಾಲಯ ಧ್ವಂಸ:  ಜಗತ್ತಿನಾದ್ಯಂತ ವ್ಯಾಪಕ ಖಂಡನೆ

ಕರಕ್ ,  ಡಿಸೆಂಬರ್ 31:ಪಾಕಿಸ್ತಾನದಲ್ಲಿ  ಹಿಂದೂ ದೇವಾಲಯವನ್ನು ಧ್ವಂಸ ಮಾಡಿರುವ ಘಟನೆಗೆ ಜಗತ್ತಿನಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಪ್ರಪಂಚದ ಇತರ ಭಾಗಗಳಲ್ಲಿ ನೆಲೆಸಿರುವ ಮಾನವ ಹಕ್ಕುಗಳ ಕಾರ್ಯಕರ್ತರು ಈ ಘಟನೆಯನ್ನು  ಬಲವಾಗಿ  ಖಂಡಿಸಿದ್ದಾರೆ.

 ನೂರಕ್ಕೂ ಹೆಚ್ಚು ಜನರ ಗುಂಪು ಖೈಬರ್ ಪಖ್ತುಂಖಾವಾ ಪ್ರಾಂತ್ಯದ ಕರಕ್ ಜಿಲ್ಲೆಯ ಹಿಂದೂ ದೇವಾಲಯವೊಂದನ್ನು ನಾಶಪಡಿಸಿ ಬೆಂಕಿ ಹಚ್ಚಿದೆ.

ಇದು ಹೊಸ ಪಾಕಿಸ್ತಾನ, ಸರ್ಕಾರದ ಆಡಳಿತದಲ್ಲಿರುವ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕಾರಕ್ ಎಂಬ ನಗರದಲ್ಲಿ ಹಿಂದೂ ದೇವಾಲಯವನ್ನು  ನಾಶಪಡಿಸಿದ್ದರೂ  ಪೊಲೀಸರು ಅಥವಾ ಸ್ಥಳೀಯ ಪಡೆಗಳು ಜನಸಮೂಹವನ್ನು ತಡೆಯಲಿಲ್ಲ  ಎಂದೂ  ಲಂಡನ್ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತ ಟ್ವೀಟ್ ಮೂಲಕ ಹೇಳಿದ್ದಾರೆ.

ಕರಕ್ ಜಿಲ್ಲೆಯ ಹಿಂದೂ ದೇವಾಲಯವನ್ನು ಸ್ಥಳೀಯ ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ ಗಲಭೆಕೋರರು ನಾಶಪಡಿಸಿದ್ದಾರೆ, ದೇವಾಲಯ ವಿಸ್ತರಣೆಗೆ   ಹಿಂದೂಗಳು ಸ್ಥಳೀಯ ಆಡಳಿತದಿಂದ ಅನುಮತಿ ಪಡೆದಿದ್ದರು ಎನ್ನಲಾಗಿದೆ.

ಸುದ್ದಿ ಓದಿ