ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ: ಭೋವಿ ಸಮಾಜದಿಂದ ಗೌರವ ಸನ್ಮಾನ
ಲೋಕದರ್ಶನ ವರದಿ
ಕುಷ್ಟಗಿ 20: 2021-22ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಭೋವಿ ಸಮಾಜದ ಇಬ್ಬರೂ ವಿದ್ಯಾರ್ಥಿನಿಯರನ್ನು ಮಂಗಳವಾರ ಸಂಜೆ ಪಟ್ಟಣದ 15ನೇ ವಾರ್ಡಿನ ಶೇಖಪ್ಪ ಮ್ಯಾಗೇರಿಯವರ ನಿವಾಸದಲ್ಲಿ ಸಿದ್ದರಾಮೇಶ್ವರ ಕ್ಷೇಮಾಭಿವೃದ್ಧಿ ಸಂಘ ಭೋವಿ ವಡ್ಡರ ತಾಲೂಕು ಘಟಕದಿಂದ ಗೌರವಿಸಿ ಸನ್ಮಾನಿಸಿದರು.
ಬಾಗಲಕೋಟೆ- ಚಿತ್ರದುರ್ಗ ಗುರುಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ ಸಮಾಜ ಸೇವಾದೀಕ್ಷಾ 24ನೇ ವಾರ್ಷಿಕೋತ್ಸವ ಮತ್ತು ಪಟ್ಟಾಧಿಕಾರದ 13ನೇ ವಾರ್ಷಿಕೋತ್ಸವ ಹಾಗೂ 37ನೇ ವಸಂತೋತ್ಸವದ ಅಂಗವಾಗಿ ಇತ್ತೀಚೆಗೆ ಚಿತ್ರದುರ್ಗದ ಗುರುಪೀಠದಲ್ಲಿ ಏರಿ್ಡಸಿದ್ದ ಐ.ಎ.ಸ್ ಅಧಿಕಾರಿ ಮಂಜುನಾಥ ಪ್ರಸಾದ ಅವರ ವಿದ್ಯಾ ಪ್ರಕಾಶದಲ್ಲಿ ವಿದ್ಯಾ ರತ್ನ ಎಂಬ ಬಿರುದಾಂಕಿತವನ್ನು ನೀಡಿ ಗೌರವಿಸಲಾಯಿತು.
2021-22ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ಕು.ದುರ್ಗಾ ಅಮರಾವತಿ ಎಂಬ ವಿದ್ಯಾರ್ಥಿನಿ ಶೇಕಡಾ 88 ರಷ್ಟು ಹೆಚ್ಚು ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.
2021-22 ನೇ ಸಾಲಿನ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಕು.ಬಸವರಾಜೇಶ್ವರಿ ಮ್ಯಾಗೇರಿ ಎಂಬ ವಿದ್ಯಾರ್ಥಿನಿ ಶೇಕಡಾ 89ರಷ್ಟು ಹೆಚ್ಚು ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಕಾರಣ ಸಿದ್ದರಾಮೇಶ್ವರ ಕ್ಷೇಮಾಭಿವೃದ್ಧಿ ಸಂಘ ಭೋವಿ ವಡ್ಡರ ತಾಲೂಕು ಘಟಕದಿಂದ ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಭೋವಿ ಸಮಾಜದ ಮುಖಂಡರಾದ ಪರಸಪ್ಪ ಅಮರಾವತಿ, ಶೇಖಪ್ಪ ಮ್ಯಾಗೇರಿ, ಹನುಮಂತಪ್ಪ ಯರದಾಳ, ಯಮುನಪ್ಪ ಕಟ್ಟಿಗಿ, ದಾಸಪ್ಪ ಪೂಜಾರ, ಯಮನೂರ್ಪ ನಿಡುಗುಂದಿ, ಹನುಮಂತಪ್ಪ ಬೆಂಕಿ ಸ್ವಾಮಿ, ಈರ್ಪ ನಿಡಗುಂದಿ, ತಿಮ್ಮಣ್ಣ ಹಿರೇಮನಿ, ಮುತ್ತು ಮ್ಯಾಗೇರಿ ಸೇರಿದಂತೆ ಸಿದ್ದರಾಮೇಶ್ವರ ಭೋವಿ ವಡ್ಡರ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.