ಮೂಡಲಗಿ

ಭೂಮಿಯ ಫಲವತ್ತತೆ ಸಂರಕ್ಷಿಸಿದರೆ ಅಧಿಕ ಇಳುವರಿ ಸಾಧ್ಯ: ಬೆಳಕೂಡ

ಭೂಮಿಯ ಫಲವತ್ತತೆ ಸಂರಕ್ಷಿಸಿದರೆ ಅಧಿಕ ಇಳುವರಿ ಸಾಧ್ಯ: ಬೆಳಕೂಡ

ಮೂಡಲಗಿ 20: ರೈತರು ಭೂಮಿಯ ಫಲವತ್ತತೆ ಸಂರಕ್ಷಿಸುವ ಮೂಲಕ ಅಧಿಕ ಇಳುವರಿಯನ್ನು ಪಡೆದುಕೊಳ್ಳಬೇಕು ಎಂದು ಕಲ್ಲೋಳಿಯ ಪ್ರಗತಿಪರ ರೈತ ಬಾಳಪ್ಪ ಬೆಳಕೂಡ ಹೇಳಿದರು. 

ಇಲ್ಲಿಯ ನವರಾತ್ರಿ ಉತ್ಸವ ಸಮಿತಿಯವರು ಏರಿ​‍್ಡಸಿದ್ದ ಕೃಷಿ ಮೇಳದ ಗುರುವಾರ ಕೊನೆಯ ದಿನದಂದ ಏರಿ​‍್ಡಸಿದ್ದ ಎಕರೆಗೆ 100 ಟನ್ ಕಬ್ಬು ಬೆಳೆಯುವ ತಂತ್ರಗಾರಿಕೆ ವಿಷಯ ಕುರಿತು ಏರಿ​‍್ಡಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದ ಅವರು ಮಣ್ಣಿನಲ್ಲಿ ಸಾವಯವ ಅಂಶಗಳನ್ನು ಉಳಿಸಿಕೊಂಡು ಅಣುಜೀವಿಗಳನ್ನು ಹೆಚ್ಚಿಸುವುದಕ್ಕೆ ರೈತರು ಆದ್ಯತೆ ನೀಡಬೇಕು ಮತ್ತು ಬೆಳೆಗಳಿಗೆ ಸೂರ್ಯನ ಬೆಳಕು, ಗಾಳಿ, ನೀರಿನ ಹಂಚಿಕೆ ಬಗ್ಗೆ ಹೆಚ್ಚುಗಮನ ನೀಡಿದರೆ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂದರು. 

ರೈತನು ಹಲವಾರು ಎಕರೆಯಷ್ಟು ಭೂಮಿ ಹೊಂದಿದ್ದರು ಕನಿಷ್ಠಪಕ್ಷ ಒಂದು ಆಕಳನ್ನಾದರು ಸಾಕಿ ಅದರ ಸೆಗಣಿ, ಗಂಜಳ ಭೂಮಿಯ ಮಣ್ಣಿನಲ್ಲಿ ಸೇರುವಂತಾದರೆ ಅದು ಮಣ್ಣಿನ ಫಲವತ್ತತೆ ವೃದ್ಧಿಸುತ್ತದೆ. ಐದು ಅಡಿ ಅಂತರ ಸಾಲಿನಲ್ಲಿ ಕಬ್ಬು ನಾಟಿ ಮಾಡಿ ಮಿಶ್ರ ಬೆಳೆಯನ್ನು ತೆಗೆಯುವುದರಿಂದ ರೈತರಿಗೂ ಆದಾಯ ಮತ್ತು ಕಬ್ಬಿನ ಬೆಳೆಯ ಫಲವತ್ತತೆಯನ್ನು ಹೆಚ್ಚಿಸುತ್ತದೆ ಎಂದರು. 

ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಂ. ನದಾಫ ಮಾತನಾಡಿ 2022-23ನೇ ಸಾಲಿನಲ್ಲಿ ಕಲ್ಲೋಳಿಯ ಬಾಳಪ್ಪ ಬೆಳಕೂಡ ಅವರು ಒಂದು ಎಕರೆಯಲ್ಲಿ 125 ಟನ್ ಕಬ್ಬು ಬೆಳೆದು ದಾಖಲೆ ಸೃಷ್ಟಿಸಿದ್ದಾರೆ. ಒಕ್ಕುಲತನ ಮಾಡುವ ಬಗ್ಗೆ ಇರುವ ಅವರ ಶ್ರದ್ಧೆ, ಕೃಷಿಯಲ್ಲಿ ತೊಡಗಿಸಿಕೊಳ್ಳುವಿಕೆ ಮತ್ತು ವೈಜ್ಞಾನಿಕವಾಗಿ ಕೆಲಸ ಮಾಡುವುದರಿಂದ ಅಷ್ಟು ಇಳುವರಿ ಪಡೆಯಲು ಸಾಧ್ಯವಾಗಿದೆ. ಇನ್ನು ಎಕರೆಗೆ 150 ಟನ್ ಕಬ್ಬು ಬೆಳೆಯುವ ಗುತಿ ಇಟ್ಟಿದ್ದಾರೆ ಎಂದರು. 

ಸಂಕೇಶ್ವರದ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ನೂಲಿ ಮಾತನಾಡಿ ಕಬ್ಬಿನಲ್ಲಿ ಶೋಧನೆಯಾಗಿರುವ ಹೊಸ ತಳಿಗಳ ಕುರಿತು ಮಾತನಾಡಿದರು. 

ಅತಿಥಿಗಳಾಗಿ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ಕೃಷಿ ಇಲಾಖೆಯ ಉಪ ನಿರ್ದೇಶಕ ರಂಗಣ್ಣ ನಾಗಣ್ಣವರ,  ಪ್ರಗತಿಪರ ರೈತ ಸದಾಶಿವ ತಲಬಟಿ, ಲಾಯನ್ಸ ಕ್ಲಬ್‌ದ ವೆಂಕಟೇಶ ಸೋನವಾಲಕರ, ಶ್ರೀಶೈಲ್ ಲೋಕನವರ ಮತ್ತಿತರರು ಇದ್ದರು 


ಸುದ್ದಿ ಓದಿ