ಅಂತರರಾಷ್ಟ್ರೀಯ

ಜಪಾನ್ ನಲ್ಲಿ ಹೆಲಿಕಾಪ್ಟರ್ ಪತನ; ಪೈಲಟ್ ಸಾವು

ಜಪಾನ್ ನಲ್ಲಿ ಹೆಲಿಕಾಪ್ಟರ್ ಪತನ; ಪೈಲಟ್ ಸಾವು

ಟೋಕಿಯೋ, ಡಿಸೆಂಬರ್.31: ಪೂರ್ವ ಜಪಾನಿನ ಶಿಜುವಾಕಾ ಎಂಬಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಪೈಲಟ್ ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ಜಪಾನ್ ಮಾಧ್ಯಮ ಗುರುವಾರ ವರದಿ ಮಾಡಿದೆ.

ಬುಧವಾರ ತಡರಾತ್ರಿ, ಶಿಮಾಡಾ ನಗರದ ಸಮೀಪವಿರುವ ಪರ್ವತಗಳಲ್ಲಿ  ಹೆಲಿಕಾಪ್ಟರ್ ಅಪಘಾತಕ್ಕೀಡಾದ ಬಗ್ಗೆ ಶಿಜುವಾಕಾ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭಾರೀ ಹಾನಿಗೊಳಗಾದ ಹೆಲಿಕಾಪ್ಟರ್ ಮತ್ತು ಮೃತ ಪೈಲಟ್‌ ನ ಶವವನ್ನು ರಕ್ಷಣಾ ಕಾರ್ಯಕರ್ತರು ಪತ್ತೆ ಹಚ್ಚಿದ್ದಾರೆ.

ಹೆಲಿಕಾಪ್ಟರ್ ಮಿಯಾ ಪ್ರಾಂತ್ಯದಿಂದ ಯೊಕೊಹಾಮಾ ನಗರಕ್ಕೆ ಹೋಗುತ್ತಿದ್ದಾಗ  ಭಾರೀ ಗಾಳಿಯಿಂದ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ.

ಸುದ್ದಿ ಓದಿ