ಅಂತರರಾಷ್ಟ್ರೀಯ

ನೂರು ವರ್ಷಗಳಲ್ಲೇ ಅಮೆರಿಕದಲ್ಲಿ ಭಾರೀ ಮಳೆ .. 22 ಸಾವು

ನೂರು ವರ್ಷಗಳಲ್ಲೇ    ಅಮೆರಿಕದಲ್ಲಿ ಭಾರೀ ಮಳೆ .. 22 ಸಾವು
ವಾಷಿಂಗ್ಟನ್, ಆಗಸ್ಟ್‌ 23 : ಭಾರಿ ಮಳೆಯಿಂದಾಗಿ ಅಮೆರಿಕಾದ ಕೆಲ ಪ್ರದೇಶಗಳು ತತ್ತರಿಸಿವೆ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಈವರೆಗೆ ಕನಿಷ್ಠ 22 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇನ್ನೂ ಪ್ರವಾಹದಲ್ಲಿ ನೂರಾರು ಕಾರುಗಳು ವಾಹನಗಳು ಕೊಚ್ಚಿ ಹೋಗಿವೆ. ಹಲವು ಮಂದಿ ಕಾಣೆಯಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ನೂರು ವರ್ಷಗಳಲ್ಲಿ ಅಮೆರಿಕಾ ಕಂಡ ಅತಿ ಹೆಚ್ಚು ಮಳೆ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಟೆನ್ನೆಸ್ಸೀಯ ಹಂಫ್ರೆ ಕೌಂಟಿಯಲ್ಲಿ ಕಳೆದ 24 ಗಂಟೆಗಳಲ್ಲಿ 43 ಇಂಚುಗಳಷ್ಟು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಸುದ್ದಿ ಓದಿ