ಮುಧೋಳ

ವ್ಯಾಪಕ ಮಳೆ 33 ಮನೆಗಳಿಗೆ ಹಾನಿ; 250 ಹೆಕ್ಟರ್ ಈರುಳ್ಳಿ ಬೆಳೆ ನಾಶ

ವ್ಯಾಪಕ ಮಳೆ 33 ಮನೆಗಳಿಗೆ ಹಾನಿ; 250 ಹೆಕ್ಟರ್ ಈರುಳ್ಳಿ ಬೆಳೆ ನಾಶ

ಮುಧೋಳ 07: ಸೋಮವಾರ ಹಾಗೂ ಮಂಗಳವಾರ ಸುರಿದ  ಭಾರಿ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಒಟ್ಟು 33 ಮನೆಗಳು ಹಾನಿಗೊಳಗಾಗಿದ್ದು 250 ಹೆಕ್ಟರ್ ಪ್ರದೇಶದ ಈರುಳಿ ಬೆಳೆ ನಾಶವಾಗಿದೆ. 

ಸೋಮವಾರ ಸುರಿದ ಭಾರಿ ಮಳೆಯಿಂದಾಗಿ ನಗರದ ಹಲವಾರು ಸ್ಥಳಗಳು ಸಂಪೂರ್ಣವಾಗಿ ಜಲಾವೃತವಾಗಿದ್ದವು.ಮುಧೋಳ-ಕಾತರಕಿಗೆ ಸಂಪರ್ಕ ಸೇವತುವೆಯಾದ ಮಡಿಹಳ್ಳ ತಾತ್ಕಾಲಿಕ ರಸ್ತೆ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ.ಇದು ಮೂರನೆಯ ಬಾರಿ ಕೊಚ್ಚಿಕೊಂಡು ಹೋದ ಉದಾಹರಣೆಯಾಗಿದೆ.ಈ ಹಿಂದೆ ಎರಡು ಬಾರಿ ಮಳೆಯಿಂದಾಗಿ ಕೊಚ್ಚಿಕೊಂಡು ಹೋಗಿದ್ದು ತಕ್ಷಣ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿದ್ದರು ಶಾಶ್ವತ ಪರಿಹಾರಕ್ಕೆ ದೊಡ್ಡ ಸೇತುವೆ ನಿರ್ಮಾಣ ಮಾಡುತ್ತಿದ್ದು ಸದ್ಯ ಪ್ರಯಾಣಿಕರ ಅನುಕೂಲಕ್ಕಾಗಿ ತಾತ್ಕಾಲಿಕ ರಸ್ತೆ ಮಾಡಬೇಕಾಗಿದೆ.ತಾಲ್ಲೂಕಿನ ಲೋಕಾಪೂರದ  ಪೋಲಿಸ್ ಠಾಣೆಯ ವಸತಿ ನಿಲಯ,ವಿದ್ಯುತ್ ವಿತರನಾ ಕೇಂದ್ರಗಳು ಸೇರಿದಂತೆ ಇತರೆಡೆ ನೀರು ನುಗ್ಗಿ ವ್ಯತ್ಯಯವಾಗಿತ್ತು,ಇನ್ನು ಮಂಟೂರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ನುಗ್ಗಿ ಹಾನಿಮಾಡಿದೆ.ಮೈದಾನ ಕೆರೆಯಂತೆ ಕಾಣುವಂತಹ ದೃಶ್ಯಗಳು ಕಂಡು ಬಂದಿವೆ.ಅಲ್ಲದೆ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಎರಡು ದಿನಗಳ ಕಾಲ ಸುರಿದ ಮಳೆಗೆ  ಈರುಳ್ಳಿ ಬೆಳೆ ಸಂಪೂರ್ಣ ಹಾನಿಯಾಗಿದ್ದು ಇದು ಮುಂದುವರೆದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗುವ ಸಂಭವ ಇದೆ. 

ಈ ಕುರಿತು ತಹಶೀಲ್ದಾರ ವಿನೋದ ಹತ್ತಳ್ಳಿ ಮಾತನಾಡಿ ತಾಲ್ಲೂಕಿನಲ್ಲಿ ಯಾವೂದೇ ಜೀವ ಹಾನಿಯಾದ ವರದಿಯಾಗಿಲ್ಲ ಭಾರಿ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ಮಡಿಹಳ್ಳಿ ತಾತ್ಕಾಲಿಕ ರಸ್ತೆ ಕೊಚ್ಚಿಕೊಂಡು ಹೋಗಿದ್ದು ಈಗ ಮತ್ತೆ ಅದನ್ನು ದುರಸ್ತಿ ಮಾಡಲಾಗುತ್ತಿದ್ದು ಪ್ರಯಾಣಿಕರಿಗೆ ತೊಂದರೆಯಾಗದ ರೀತಿಯಲ್ಲಿ  ಸೂಕ್ತ ಕ್ರಮ ಕೈಗೊಳ್ಳಲಾಗುವದೆಂದು ಹೇಳಿದರು. 

ತಾಲ್ಲೂಕಿನಲ್ಲಿ ಎರಡು ದಿನಗಳ ಕಾಲ ಸುರಿದ ಮಳೆಯಿಂದಾಗಿ ಈರುಳ್ಳಿ ಬೆಳೆಗೆ ಹಾನಿಯಾಗಿದ್ದು ಇದು ಮುಂದುವರೆದರೆ ಹೆಚ್ಚಿನ ತೊಂದರೆಯಾಗಬಹುದು ಬಿಸಿಲು ಬಿದ್ದರೆ ಎಲ್ಲವೂ ಸರಿಯಾಗುತ್ತಿದ್ದು ಪ್ರಾಥಮಿಕ ವರದಿ ಪ್ರಕಾರ ಸುಮಾರು ಪೆಟ್ಲೂರು,ಶಿರೋಳ,ಮಂಟೂರು ಸೇರಿಂತೆ ವಿವಿದ ಗ್ರಾಮಗಳ ತೋಟದಲ್ಲಿನ 250 ಹೆಕ್ಟರ್ ಈರುಳ್ಳಿ ನಾಶವಾಗಿದೆ ಎಂದು  ತೋಟಗಾರಿಕಾ ಇಲಾಖೆಯ ಅಧಿಕಾರಿ ಮಹೇಶ ದಂಡನ್ನವರ  ಹೇಳಿದರು. 


ಸುದ್ದಿ ಓದಿ