ಶಾಲಾ ಅಭಿವೃದ್ಧಿಗಾಗಿ ತಿಂಗಳ ವೇತನ ನೀಡಿ ಮಾದರಿಯಾದ ಮುಖ್ಯೋಪಾಧ್ಯಾಯ ಶರಣಪ್ಪ ತುಮರಿಕೊಪ್ಪ
ಲೋಕದರ್ಶನ ವರದಿ
ಕುಷ್ಟಗಿ 18: ತಾಲೂಕಿನ ಮದ್ನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶರಣಪ್ಪ ತುಮರಿಕೊಪ್ಪ ಶಾಲಾ ಅಭಿವೃದ್ಧಿಗಾಗಿ ಒಂದು ತಿಂಗಳ ವೇತನ ನೀಡಿ ಇನ್ನೂಳಿದ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.
ಹನುಮಸಾಗರ ಸಮಿಪದ ಮದ್ನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶರಣಪ್ಪ ತುಮರಿಕೊಪ್ಪ ಅವರು ತಮ್ಮ ಶಾಲೆಯ ಅಭಿವೃದ್ಧಿಗಾಗಿ ಹಾಗೂ ಶಾಲೆಯ ಸುಣ್ಣ ಬಣ್ಣ ಮತ್ತು ಸ್ಮಾರ್ಟ್ ಕ್ಲಾಸ್ ನಿರ್ಮಾಣಕ್ಕಾಗಿ ಸ್ವಯಂ ಪ್ರೇರಣೆಯಿಂದ ಗ್ರಾಮಸ್ಥರ ಸಮ್ಮುಖದಲ್ಲಿ ತಮ್ಮ ಒಂದು ತಿಂಗಳ ವೇತನವನ್ನು ನೀಡಿರುವುದು ಇಡೀ ಗ್ರಾಮಸ್ಥರ ಪ್ರಶಂಸೆಗೆ ಪಾತ್ರವಾಗಿದ್ದಾರೆ.
ಈ ಸಂದರ್ಭದಲ್ಲಿ ಇಡೀ ಗ್ರಾಮಸ್ಥರು ಒಕ್ಕೂರಲಿನಿಂದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಯಶಸ್ವಿಯಾಗಿ ರಚಿಸಲು ಸಹಕಾರ ನೀಡಿದರು, ಶಾಲಾ ಅಭಿವೃದ್ಧಿಗೆ ಇಡೀ ಗ್ರಾಮಸ್ಥರು ತಾವು ಸಹಾಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಬಿಆರ್ಪಿ ಜೀವನ್ ಸಾಬ್ ವಾಲಿಕಾರ್ ಮಾತನಾಡಿ ಶಾಲೆಯು ಇಡೀ ಗ್ರಾಮದ ಬಹು ಅಮೂಲ್ಯವಾದ ಆಸ್ತಿ , ಜೀವಂತ ದೇವರುಗಳು ಇರುವ ಪೂಜ್ಯನೀಯ ಸ್ಥಳ , ಅಂತ ಶಾಲೆಯ ಅಭಿವೃದ್ಧಿಪಡಿಸುವುದು, ಶಾಲಾ ವಸ್ತುಗಳನ್ನು ಸಂರಕ್ಷಿಸುವುದು ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವಲ್ಲಿ ಶಾಲಾ ಬಿಟ್ಟ ಮಕ್ಕಳನ್ನು ಶಾಲೆಗೆ ಮರಳಿ ಕರೆತಂದು ಸರ್ವರಿಗೂ ಗುಣಮಟ್ಟದ ಶಿಕ್ಷಣ ದೊರಕಿಸುವಲ್ಲಿ ಎಸ್ಡಿಎಂಸಿ ಮತ್ತು ಗ್ರಾಮದ ಗುರುಹಿರಿಯರ ಪಾತ್ರ ಸ್ಮರಣೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿಗಾಗಿ ಒಂದು ತಿಂಗಳ ವೇತನ ನೀಡಿದ ಮುಖ್ಯ ಶಿಕ್ಷಕರಾದ ಶರಣಪ್ಪ ತುಮರಿಕೊಪ್ಪ ಅವರನ್ನು ಗ್ರಾಮಸ್ಥರು ಹಾಗೂ ಅಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ ಮಿನಾಕ್ಷಿ ಉಮೇಶ್ ರಾಠೋಡ್, ಸದಸ್ಯರಾದ ಬಂಗಾರ್ಪ ಶಿವಲಿಂಗಪ್ಪ ಪೂಜಾರ್, ದೇವೇಂದ್ರ್ಪ ಕಾರೆ, ನಿರ್ಮಲ ಚಿದಾನಂದಪ್ಪ ಹೂಗಾರ್, ಗ್ರಾಮದ ಹಿರಿಯರಾದ ಮಾಸಪ್ಪ ಕಬ್ಬರಗಿ, ಶಿವನಗೌಡ ಪೊಲೀಸ್ ಪಾಟೀಲ್, ವಿರುಪಾಕ್ಷಪ್ಪ ಹುನಗುಂದ, ಹನುಮಪ್ಪ ಹರಿಜನ್, ಪಾಲಕ ಪೋಷಕರು ಶಾಲಾ ಶಿಕ್ಷಕರಾದ ರಾಮಣ್ಣ ಮೇಟಿ, ಅಶೋಕ ಕಟ್ಟಿಮನಿ ಲೀಲಾ ಹೂಗಾರ ಮತ್ತು ಮದ್ನಾಳ ಗ್ರಾಮಸ್ಥರು ಉಪಸ್ಥಿತರಿದ್ದರು.