ತಪ್ಪು ಲೆಕ್ಕಾಚಾರದಿಂದ ಭಾರತದಲ್ಲಿ ಸಂಕಷ್ಟ ಸ್ಥಿತಿ ; ಡಾ. ಅಂಥೋನಿ ಫೌಸಿ
ವಾಷಿಂಗ್ಟನ್, ಮೇ 12: ಕೊರೊನಾ ಅಂತ್ಯ ಕುರಿತ ವಿಷಯದಲ್ಲಿ ತಪ್ಪು ಲೆಕ್ಕಾಚಾರದಿಂದಾಗಿ ಪ್ರಸ್ತುತ ಭಾರತ ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದೆ ಎಂದು ಅಮೆರಿಕಾ ಅಧ್ಯಕ್ಷರ ಮುಖ್ಯ ವೈದ್ಯಕೀಯ ಸಲಹೆಗಾರ, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಆಂಥೋನಿ ಫೌಸಿ ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ಅಂತ್ಯಗೊಂಡಿತು ಎಂಬ ತಪ್ಪು ಅಭಿಪ್ರಾಯದಿಂದ ಎಲ್ಲಾ ಚಟುವಟಿಕೆಗಳಿಗೆ ಅವಕಾಶ ನೀಡಿದ್ದರಿಂದ ಭಾರತದಲ್ಲಿ ಪ್ರಸ್ತುತ ಪರಿಸ್ಥಿತಿ ಎದುರಾಗಿದೆ ಎಂದು ಅವರು ಹೇಳಿದ್ದಾರೆ.
ಮಂಗಳವಾರ ಅವರು ಸೆನೆಟ್ ಆರೋಗ್ಯ, ಶಿಕ್ಷಣ ಮತ್ತು ಕಾರ್ಮಿಕ ಪಿಂಚಣಿ ಸಮಿತಿಗೆ ಕೋವಿಡ್ ಕುರಿತ ವಿಚಾರಣೆಯ ವೇಳೆ ಈ ಅಂಶ ತಿಳಿಸಿದ್ದಾರೆ. ಗಂಭೀರವಾದ ವಿಷಯದಲ್ಲಿ ಪರಿಸ್ಥಿತಿಯನ್ನು ಯಾರು ಲಘುವಾಗಿ ಪರಿಗಣಿಸಬಾರದು. ಭಾರತದಲ್ಲಿ ಎರಡನೇ ಅಲೆಯಿಂದ ಉದ್ಭವವಾಗಿರುವ ಪರಿಸ್ಥಿತಿ ಪ್ರಪಂಚಕ್ಕೆ ಅರ್ಥವಾಗುತ್ತದೆ ಎಂದರು.
ಭವಿಷ್ಯದ ಪರಿಸ್ಥಿತಿ ದೃಷ್ಟಿಯಲ್ಲಿರಿಸಿಕೊಂಡು ಜನರ ಆರೋಗ್ಯ ದೃಷ್ಟಿಯಿಂದ ಮೂಲಸೌಕರ್ಯ ಬಲಪಡಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ. ಜಾಗತಿಕ ಸಾಂಕ್ರಾಮಿಕ ರೋಗಗಳ ವಿರುದ್ಧದ ಹೋರಾಟದಲ್ಲಿ ಯಾವುದೇ ದೇಶವೂ ಏಕಾಂಗಿಯಾಗಿ ಹೋರಾಡುತ್ತಿಲ್ಲ. ಜಗತ್ತಿನ ಎಲ್ಲ ದೇಶಗಳು ಒಗ್ಗೂಡಿ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ವೈರಸ್ ಯಾವ ದೇಶದಲ್ಲಿ ಉಳಿದಿದೆ ಎಂಬುದು ಮುಖ್ಯವಲ್ಲ .. ಅದು ಮತ್ತೆ ಪ್ರಪಂಚದಾದ್ಯಂತ ಹರಡುವ ಅಪಾಯವಿದೆ ಎಂದು ಡಾ. ಡಾ. ಅಂಥೋನಿ ಫೌಸಿ ಎಚ್ಚರಿಸಿದರು.