ಬಾಗಲಕೋಟೆ

ಹನುಮ ಜಯಂತಿ ಆಚರಣೆ

ಹನುಮ ಜಯಂತಿ ಆಚರಣೆ

ಬಾಗಲಕೋಟೆ 02: ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸೈದಾಪೂರ- ಸಮೀರವಾಡಿ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಸಾಮೂಹಿಕ ಗದಾ ಪೂಜಾ ಮಾಡಿ, ರಾಷ್ಟ್ರ ಮತ್ತು ಧರ್ಮದ ಕಾರ್ಯವನ್ನು ನಿರಂತರ ಮಾಡುತ್ತೇವೆ, ಹಾಗೂ ಹಿಂದೂ ರಾಷ್ಟ್ರ ಸ್ಥಾಪನೆ ಆಗುವವರೆಗೂ ನಾವು ವೀರಮಿಸುದಿಲ್ಲ ಅಂತ ಪ್ರತಿಜ್ಞೆ ಮಾಡಲಾಯಿತು. 

ಜೈ ಶ್ರೀರಾಮ ಭಕ್ತಿ, ಶಕ್ತಿ ಮತ್ತು ಅಪ್ರತಿಮ ಸೇವಾ ಮನೋಭಾವದ ಪ್ರತೀಕವಾಗಿರುವ ರಾಮಭಕ್ತ ಆಂಜನೇಯ ಸ್ವಾಮಿಯ ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ. ಸ್ವಕ್ಷೇತ್ರ ಶಿಕಾರಿಪುರದ ಆರಾಧ್ಯದೈವ ಶ್ರೀ ಹುಚ್ಚುರಾಯ ಸ್ವಾಮಿಯ ಶ್ರೀರಕ್ಷೆ ನಾಡಿನ ಮೇಲೆ, ಭಕ್ತಜನತೆಯ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸಲಾಯಿತು. ಹನುಮಂತೇಶ್ವರ ಹೆಸರಿನಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಎಲ್ಲ ಭಕ್ತಾದಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.  

ಗ್ರಾಮದ ಗುರು ಹಿರಿಯರು ಮುಖಂಡರು ಮತ್ತು ಜೈ ಹನುಮಾನ್ ಭಕ್ತ ಮಂಡಳಿಯವರು ಉಪಸ್ಥಿತರಿದ್ದರು.              


ಸುದ್ದಿ ಓದಿ