ರೈತ ರಾಷ್ಟ್ರದ ಬೆನ್ನೆಲುಬು, ರೈತ ಬೆಳೆ ಬೆಳೆದರೆ ಮಾತ್ರ ನಾಡೆಲ್ಲ ಅನ್ನವನ್ನು ತಿನ್ನುವುದು: ಶಿವಲಿಂಗ ಸಿದ್ನಾಳ
Handigunda: Inauguration of fertilizer stores
ಹಂದಿಗುಂದ: ರಸಗೊಬ್ಬರ ಮಳಿಗೆಗಳ ಉದ್ಘಾಟನೆ
ಪಾಲಬಾವಿ 17: ರೈತ ನಮ್ಮ ರಾಷ್ಟ್ರದ ಬೆನ್ನೆಲುಬು ರೈತ. ಕಷ್ಟಪಟ್ಟು ಮಳೆ, ಗಾಳಿ, ಚಳಿ ಎನ್ನದೆ ಬೆಳೆಯನ್ನ ಬೆಳೆದರೆ ಮಾತ್ರ ಜನರು ಅನ್ನವನ್ನು ತಿನ್ನುತ್ತಾರೆ. ರೈತರು ಕ್ರಮವಾಗಿ ಕೃಷಿಯನ್ನು ಮಾಡಬೇಕು. ಕೃಷಿಯನ್ನು ಮನಬಂತಂತೆ ಮಾಡುವುದು ತಿಕ್ಕಲುತನ ಕ್ರಮವಾಗಿ ಮಾಡಿದರೆ ಅದು ಒಕ್ಕಲುತನ. ರೈತನು ತನ್ನ ಕೈ ಕೆಸರು ಮಾಡಿಕೊಂಡು ಮತ್ತೊಬ್ಬರು ಬಾಯಿ ಮೊಸರು ಮಾಡುತ್ತಾನೆ ರೈತನ ದೊಡ್ಡಗುಣ. ರೈತರು ಮಣ್ಣು ಹಾಗೂ ನೀರನ್ನು ಪರೀಕ್ಷೆ ಮಾಡಿ ಹವಾಮಾನಕ್ಕೆ ತಕ್ಕಂತೆ ಬೆಳೆಯನ್ನ ಬೆಳೆಯಬೇಕು. ರೈತರು ಬೆಳೆದ ಬೆಳೆಗಳಿಗೆ ನಿವ್ವಳ ಬೆಂಬಲ ಬೆಲೆ ಸಿಗಬೇಕು ಅಂದಾಗ ಮಾತ್ರ ರೈತರು ಆರ್ಥಿಕವಾಗಿ ಬೆಳೆಯಲು ಸಾಧ್ಯವೆಂದು ಮಹಾಲಿಂಗಪುರದ ಕೆಎಲ್‌ಇ ಕಾಲೇಜಿನ ಉಪನ್ಯಾಸಕ, ಪತ್ರಕರ್ತ ಶಿವಲಿಂಗ ಸಿದ್ನಾಳ ಅತಿಥಿ ಉಪನ್ಯಾಸ ನೀಡಿದರು.ಅವರು ಸಮೀಪದ ಹಂದಿಗುಂದ ಗ್ರಾಮದ ಶ್ರೀ ಮಲ್ಲಿಕಾರ್ಜುನ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಇದರ ಆಶ್ರಯದಲ್ಲಿ ಇತ್ತೀಚಿಗೆ ನೂತನ ರಸಗೊಬ್ಬರ ಮಳಿಗೆಗಳ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.ಗುರುಮಠದ ಗುರುಲಿಂಗಯ್ಯ ಸ್ವಾಮಿಜಿ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಬ್ಯಾಂಕ್ ನೀರೀಕ್ಷಕ ಭರತ ಬಾಬಣ್ಣವರ ಸಸಿಗೆ ನೀರು ಎರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಗೋದಾವರಿ ಹೋಲ್ ಸೇಲ್ ಮಾರಾಟಗಾರ ಸಿ.ವ್ಹಿ.ಶಹಾಪುರ ನೂತನ ಮಳೆಗೆಗಳನ್ನು ಉದ್ಘಾಟಿಸಿದರು. ಪಿಕೆಪಿಎಸ್ ಸಂಘದ ಅಧ್ಯಕ್ಷ ಶಿಕ್ಷಣ ಪ್ರೇಮಿ ಮಲ್ಲಿಕಾರ್ಜುನ ಖಾನಗೌಡರ, ಯುವಧೂರಿನ ಸಿದ್ದನಗೌಡ ಪಾಟೀಲ ಮಾತನಾಡಿದರು. ಸಂಘದ ಅಧ್ಯಕ್ಷ ಶಿವಪ್ಪ ಮಿರ್ಜಿ ಅಧ್ಯಕ್ಷತೆವಹಿಸುವರು.ಬಾಕ್ಸ್ ಲೈನ್ ==="ರೈತ ಎಂದರೆ ಮುಕುಟಿ ಇಲ್ಲದ ರಾಜ, ಛತ್ರಿ ಚಾಮರ ಇಲ್ಲದ ಚಕ್ರವರ್ತಿ, ಸಿಂಹಾಸನ ವಿಲ್ಲದ ಸಾಮ್ರಾಟ, ಅರಮನೆ ಇಲ್ಲದ ಅರಸ. ದುಡಿಮೆ ದೇವರು ಹೊಲಗದ್ದೆಯೇ ತವರು, ಪರಿಶ್ರಮವೇ ದೇವರು, ಹೊಲಗದ್ದೆಗಳಲ್ಲಿ ಬಿತ್ತುವುದೇ ರೈತನಿಗೆ ಹಬ್ಬ ಬೆಳೆಯನ್ನ ಬೆಳೆವುದೇ ಬೆಳೆಯುವುದೇ ಒಂದು ತಪಸ್ಸು. ರಾಶಿ ಮಾಡುವುದೇ ಆತನಿಗೆ ಒಂದು ಹಬ್ಬವಿದ್ದಂತೆ, ನಮಗೆ ರಕ್ಷಣೆ ನೀಡುವುದು ಗುಡಿಯಲ್ಲಿರುವ ದೇವರಲ್ಲ ಅವನು ಗಡಿಯಲ್ಲಿದ್ದಾನೆ. ಅವನೇ ನಮ್ಮ ಸೈನಿಕ. ನಮಗೆ ಮಾರ್ಗದರ್ಶನ ನೀಡುವನು ಗ್ರಹಗತಿಯಲಿಲ್ಲಿ ಅವನು ತರಗತಿಯಲ್ಲಿದ್ದಾನೆ ಅವನೇ ನಮ್ಮ ಶಿಕ್ಷಕ. ನಮಗೆ ಭಕ್ಷಣೆ ನೀಡುವುದು ದೇವರ ಹುಂಡಿಯಲ್ಲ ರೈತನ ಬೆಳೆದ ಗದ್ದೆಯಲ್ಲಿ, ಅವನೇ ನಮ್ಮ ಕೃಷಿಕ"===ನ ಉಪನ್ಯಾಸಕ ಶಿವಲಿಂಗ ಶಿದ್ನಾಳ,(ಕೆಎಲ್‌ಇ ಕಾಲೇಜು, ಮಹಾಲಿಂಗಪುರ)ವೇದಿಕೆ ಮೇಲೆ ಪ್ರಗತಿಪರ ರೈತರು ಬನಪ್ಪ ತೇಲಿ, ಪರಗೌಡ ಪಾಟೀಲ, ಗ್ರಾಪಂ ಉಪಾಧ್ಯಕ್ಷ ಸಂಗಪ್ಪ ಮಿರ್ಜಿ, ಪಿಕೆಪಿಎಸ್ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡರ, ಶಿದ್ದನಗೌಡ ಪಾಟೀಲ, ಕೃಷಿ ಗೋದಾವರಿ ಹೋಲ್ ಸೇಲ್ ಮಾರಾಟಗಾರ ಸಿ.ವ್ಹಿ.ಶಹಾಪುರ, ಬ್ಯಾಂಕ್ ನೀರೀಕ್ಷಕ ಭರತ ಬಾಬಣ್ಣವರ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಶ್ರೀ ಶೈಲ ಗೊಲಬಾವಿ, ಪರ್ಪ ಬುದ್ನಿ, ಗಿರಮಲ್ಲಪ್ಪ ಚಿನಗುಂಡಿ, ಧರೆಪ್ಪ ಚಿನಗುಂಡಿ, ಪರ್ಪ ಚಿಂಚಲಿ, ರಮೇಶ ತೇಲಿ, ಮಲ್ಲಪ್ಪ ಇಟನಾಳ, ಮಲ್ಲಪ್ಪ ಮಿರ್ಜಿ, ಪರಮಾನಂದ ಉಳ್ಳಾಗಡ್ಡಿ, ಪ್ರಭು ಚಿನಗುಂಡಿ, ಹನುಮಂತ ಗಸ್ತಿ, ಗಿರಮಲ್ಲಪ್ಪ ಸುಳ್ಳನ್ನವರ, ಸುಧೀರ ಜಿಲ್ಲಾಶೆಟ್ಟಿ, ಶ್ರೀಶೈಲ ಮಿರ್ಜಿ, ದುಂಡಪ್ಪ ತೇರದಾಳ ಇತರರು ಇದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಪರ್ಪ ಸುಳ್ಳನ್ನವರ ಸ್ವಾಗತಿಸಿದರು ರಮೇಶ ಪಾಟೀಲ ನಿರೂಪಿಸಿ, ವಂದಿಸಿದರು.ಫೋಟೋ ಶೀರ್ಷಿಕೆ:-17ಪಿಎಲ್‌ಬಿ.03ಹಂದಿಗುಂದ ಗ್ರಾಮದ ಶ್ರೀ ಮಲ್ಲಿಕಾರ್ಜುನ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಆಶ್ರಯದಲ್ಲಿ ನೂತನ ರಸಗೊಬ್ಬರ ಮಳಿಗೆಗಳನ್ನು ಗೋದಾವರಿ ಹೋಲ್ ಸೇಲ್ ಮಾರಾಟಗಾರ ಸಿ.ವ್ಹಿ.ಶಹಾಪುರಉದ್ಘಾಟಿಸಿ ಚಾಲನೆ ನೀಡುತ್ತಿರುವುದು.ಫೋಟೋ ಶೀರ್ಷಿಕೆ:-17ಪಿಎಲ್‌ಬಿ.03(ಚಿ)ಹಂದಿಗುಂದ ಗ್ರಾಮದ ಶ್ರೀ ಮಲ್ಲಿಕಾರ್ಜುನ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಆಶ್ರಯದಲ್ಲಿ ನೂತನ ರಸಗೊಬ್ಬರ ಮಳಿಗೆಗ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಮುಗಳಖೋಡ ಶಾಖೆಯ ನೀರೀಕ್ಷಕ ಭರತ ಬಾಬಣ್ಣವರ ಸಸಿಗೆ ನೀರು ಎರೆದು ಚಾಲನೆ ನೀಡುತ್ತಿರುವುದು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 