ಹಳ್ಳೂರ ಗ್ರಾಮದೇವತೆ ಮಹಾಲಕ್ಷ್ಮೀ ದೇವಿ ಜಾತ್ರೆ
ದೇವರ ದರ್ಶನ ಪಡೆದ ಎಸ್ಪಿ ಡಾ ಸಂಜೀವಕುಮಾರ ಪಾಟೀಲ: ಸತ್ಕಾರ
ಮೂಡಲಗಿ 24: ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಒಂಬತ್ತು ದಿನಗಳ ಕಾಲ ನಡೆಯುವ ಮೂರು ಗ್ರಾಮಗಳ ಗ್ರಾಮದೇವತೆ ಮಹಾಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವದ ಎರಡನೇ ದಿನದಂದು ಬೆಳಗಾವಿ ಎಸ್ಪಿ ಡಾ ಸಂಜೀವಕುಮಾರ ಪಾಟೀಲ ಅವರು ದೇವರ ದರ್ಶನ ಪಡೆದರು.
ಜಾತ್ರಾ ಕಮೀಟಿಯಿಂದ ಸತ್ಕಾರ ಸ್ವೀಕರಿಸಿದ ಡಾ ಸಂಜೀವಕುಮಾರ ಪಾಟೀಲ ಅವರು ಮಾತನಾಡಿ, ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಮೂರೂರು ಗ್ರಾಮದ ಆರಾದ್ಯ ದೇವರಾದ ದ್ಯಾಮವ್ವ ದೇವಿ ಹಾಗೂ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗುತ್ತಿರುವುದು ಕಂಡು ಬರುತ್ತಿದೆ. ಎಲ್ಲರೂ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿ ದೇವಿಯ ಕೃಪೆಗೆ ಪಾತ್ರರಾಗಬೇಕು, ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲೆಂದು ಶುಭ ಹಾರೈಸಿದ ಅವರು ಮುನ್ನೆಚ್ಚರಿಕೆಗಾಗಿ ಮೂಡಲಗಿ ಸಿಪಿಐ ಶ್ರೀಶೈಲ್ ಬ್ಯಾಕೂಡ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಇಲಾಖೆಯಿಂದ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದರು.
ಗ್ರಾ. ಪಂ ಅಧ್ಯಕ್ಷ ಲಕ್ಷ್ಮಣ ಕತ್ತಿ, ಜಿ.ಪಂ ಮಾಜಿ ಸದಸ್ಯ ಭೀಮಶಿ ಮಗದುಮ, ಹಣಮಂತ ತೇರದಾಳ, ಮುರಿಗೆಪ್ಪ ಮಾಲಗಾರ. ಸುರೇಶ ಕತ್ತಿ, ಗುರು ಹಿಪ್ಪರಗಿ, ಭೀಮಪ್ಪ ರೋಡ್ಡನ್ನವರ, ಸಿಪಿಐ ಶ್ರೀಶೈಲ ಬ್ಯಾಕೂಡ. ಪಿಎಸ್ಐ ಗಳಾದ ಸೋಮೇಶ ಗೆಜ್ಜೆ, ಗೋವಿಂದಗೌಡ ಪಾಟೀಲ ಹಾಗೂ ಜಾತ್ರಾ ಕಮೀಟಿ ಪದಾಧಿಕಾರಿಗಳು ಇದ್ದರು.