ಬ್ರೆಜಿಲ್ ನಲ್ಲಿ ಕರೋನ ಸೋಂಕಿಗೆ ಈವರೆಗೆ 4.5 ಲಕ್ಷ ಜನ ಬಲಿ
ರಿಯೊ ಡಿ ಜನೈರೊ, ಮೇ 26 : ಬ್ರೆಜಿಲ್‌ನ ಕರೋನ ಸೋಂಕಿಗೆ ಈವರೆಗೆ ಮೃತಪಟ್ಟವರ ಸಂಖ್ಯೆ 4.5 ಲಕ್ಕಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಅಮೆರಿಕ ನಂತರ ಸಾವಿನ ಸಂಖ್ಯೆಯಲ್ಲಿ ಬ್ರೆಜಿಲ್ ಗೆ ಎರಡನೆ ಸ್ಥಾನ ದೊರಕಿದೆ. ಮಂಗಳವಾರ ಕರೋನ ಸೋಂಕಿಗೆ 2,173 ಜನರು ಸಾವನ್ನಪ್ಪಿದ್ದು ಪರಿಣಾಮೀವರೆಗೆ ಮೃತರ ಸಂಖ್ಯೆ 452,031 ಕ್ಕೆ ತಲುಪಿದೆ. ಒಟ್ಟಾರೆ ಸೋಂಕಿತರ 16,194,209 ತಲುಪಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 73,453 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿ ಈವರೆಗೆ 14.6 ದಶಲಕ್ಷಕ್ಕೂ ಹೆಚ್ಚು ಜನರು ಮಾರಕ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆಂದೂ ಆರೋಗ್ಯ ಸಚಿವಾಯಲದ ವರದಿ ಹೇಳಿದೆ.