ಉಕ್ರೇನ್ ನಲ್ಲಿ ಮುಂದಿನ ವಾರ ಕೊರೋನ ಲಸಿಕಾ ಅಭಿಯಾನ..!
ಕೀವ್, ಫೆಬ್ರವರಿ 12 :ಉಕ್ರೇನ್ ಮುಂದಿನ ವಾರ ಕರೋನ ಸೋಂಕಿಗೆ ಲಸಿಕಾ ಅಭಿಯಾನ ನಡೆಸುವ ನಿರೀಕ್ಷೆಯಿದೆ ಎಂದು ಮುಖ್ಯ ನೈರ್ಮಲ್ಯ ವೈದ್ಯ ವಿಕ್ಟರ್ ಲಿಯಾಶ್ಕೊ ಗುರುವಾರ ಹೇಳಿದ್ದಾರೆ. ಲಸಿಕೆಗಳು ಶೀಘ್ರದಲ್ಲೇ ಬರಲಿದ್ದು ರೋಗನಿರೋಧಕ ಅಭಿಯಾನ ಪ್ರಾರಂಭಿಸುತ್ತಿದ್ದೇವೆ. ನಾವು ಫಿಜರ್ ಲಸಿಕೆಯನ್ನು ನಿರೀಕ್ಷಿಸುತ್ತಿದ್ದೇವೆ, ಸಾರ್ವಜನಿಕ ನಿಧಿಯಿಂದ ಖರೀದಿಸಿದ ಅಸ್ಟ್ರಾಜೆನೆಕಾ ಲಸಿಕೆ ಮೊದಲನೆಯದು. ಈ ಸಮಯದಲ್ಲಿ, ಮುಂದಿನ ವಾರ ಎರಡೂ ಲಸಿಕೆ ವಿತರಿಸುವ ತಯಾರಿಲ್ಲಿದ್ದೇವೆ ಎಂದೂ ದು ಲಿಯಾಶ್ಕೊ ಗುರುವಾರ ಸುದ್ದಿಗಾರರಿಗೆ ಹೇಳಿದರು. ಕರೋನ ಸೋಂಕಿನ ವಿರುದ್ಧ ಯಾವುದೇ ಲಸಿಕೆ ಇನ್ನೂ ಕಾನೂನುಬದ್ಧವಾಗಿ ಉಕ್ರೇನ್‌ಗೆ ಬಂದಿಲ್ಲ , ಆರೋಗ್ಯ ಸಚಿವಾಲಯದ ಹಿಂದಿನ ಹೇಳಿಕೆಗಳ ಪ್ರಕಾರ, ಫೆಬ್ರವರಿ ಅಂತ್ಯದಲ್ಲಿ ಕೋವಾಕ್ಸ್ ಕಾರ್ಯವಿಧಾನದ ಭಾಗವಾಗಿ ಉಕ್ರೇನ್ 117,000 ಡೋಸ್ ಫಿಜರ್ ಲಸಿಕೆ ಜೊತೆಗೆ ಮೊದಲ ತ್ರೈಮಾಸಿಕದಲ್ಲಿ 3.7 ಮಿಲಿಯನ್ ಡೋಸ್ ಅಸ್ಟ್ರಾಜೆನೆಕಾ ಲಸಿಕೆ ಪಡೆಯಲಿದೆ ಎಂದೂ ಹೇಳಲಾಗಿದೆ.