ಬ್ರಿಟನ್ನಿನಲ್ಲಿ 2,685 ಹೊಸ ಕರೋನ ಪ್ರಕರಣ ದಾಖಲು
ಲಂಡನ್, ಏಪ್ರಿಲ್ 28 : ಬ್ರಿಟನ್‌ನಲ್ಲಿ ಹೊಸದಾಗಿ 2,685 ಜನರು ಕರೋನ ಸೋಂಕಿಗೆ ಒಳಗಾಗಿದ್ದಾರೆ . ಸದ್ಯ ದೇಶದಲ್ಲಿ ಕರೋನ ಪ್ರಕರಣಗಳ ಸಂಖ್ಯೆ 4,409,631 ಕ್ಕೆ ತಲುಪಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. ದೇಶದಲ್ಲಿ ಹೊಸದಾಗಿ 17 ಕರೋನ ಸೋಂಕು ಸಂಬಂಧಿತ ಸಾವಿನ ಪ್ರಕರಣ ವರದಿಯಾಗಿದ್ದು, ಬ್ರಿಟನ್ನಿನಲ್ಲಿ ಒಟ್ಟು ಕರೋನವೈರಸ್ ಸಂಬಂಧಿತ ಸಾವುಗಳ ಸಂಖ್ಯೆ ಈಗ 127,451 ಕ್ಕೆ ಏರಿಕೆಯಾಗಿದೆ. ಈ ನಡುವೆ ಇತ್ತೀಚಿನ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಈವರೆಗೆ 33.8 ದಶಲಕ್ಷಕ್ಕೂ ಹೆಚ್ಚು ಜನರಿಗೆ ಕರೋನ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ.