ಅಂತರರಾಷ್ಟ್ರೀಯ

ರಷ್ಯಾದ ಸ್ಪುಟ್ನಿಕ್- ವಿ ಲಸಿಕೆ ಜುಲೈವೇಳೆಗೆ ಬ್ರೆಜಿಲ್ ನಲ್ಲಿ ಲಭ್ಯ

ರಷ್ಯಾದ ಸ್ಪುಟ್ನಿಕ್- ವಿ ಲಸಿಕೆ ಜುಲೈವೇಳೆಗೆ  ಬ್ರೆಜಿಲ್ ನಲ್ಲಿ   ಲಭ್ಯ

ಮಾಸ್ಕೋ, ಜೂನ್ 5 : ರಷ್ಯಾದ ಸ್ಪುಟ್ನಿಕ್ ವಿ ಕೊರೊನಾ ನಿಗ್ರಹ  ಲಸಿಕೆ ಜುಲೈ ವೇಳೆಗೆ  ಬ್ರೆಜಿಲ್‌ ನಲ್ಲಿ ಲಭ್ಯವಾಗಲಿದೆ ಎಂದು ರಷ್ಯಾದ ನೇರ ಹೂಡಿಕೆ ನಿಧಿಯ (ಆರ್‌ಡಿಐಎಫ್) ಮುಖ್ಯಸ್ಥ ಕಿರಿಲ್ ಡಿಮಿಟ್ರಿವ್ ತಿಳಿಸಿದ್ದಾರೆ. ಈ ಮೊದಲು, ಬ್ರೆಜಿಲಿಯನ್ ಆರೋಗ್ಯ ನಿಯಂತ್ರಣ ಸಂಸ್ಥೆ ಅನ್ವಿಸಾದ ಕಾಲೇಜಿಯೇಟ್ ಕೌನ್ಸಿಲ್ ರಷ್ಯಾದ ಸ್ಪುಟ್ನಿಕ್ ವಿ ಕೊರೊನಾ ನಿಗ್ರಹ  ಲಸಿಕೆಯ ಆಮದು ಮತ್ತು ತುರ್ತು ಬಳಕೆಗೆಅನುಮೋದನೆ  ನೀಡಿದೆ .ಅದರ ಆಮದು ಮತ್ತು ಬಳಕೆಯ ಮೇಲೆ ಹಲವು  ನಿರ್ಬಂಧಗಳನ್ನು ಹಾಕಲಾಗಿದೆ. . "ಸ್ಪುಟ್ನಿಕ್ ವಿ ಜುಲೈ ವೇಳೆಗೆ ಬ್ರೆಜಿಲ್ ಗೆ ಬರಲಿದೆ. ಎಂದು ಡಿಮಿಟ್ರಿವ್ ಹೇಳಿದ್ದಾರೆ. "ಸ್ಪುಟ್ನಿಕ್ ವಿ ಬಳಕೆಗೆ ಅಧಿಕಾರ ಹೊಂದಿರುವ 67 ನೇ ದೇಶವಾಗಿ ಬ್ರೆಜಿಲ್ ಮಾರ್ಪಟ್ಟಿದೆ.ಸರ್ಕಾರಿ ನಿಯಂತ್ರಕರು ನೀಡುವ ಅನುಮೋದನೆಗಳ ಸಂಖ್ಯೆಗೆ ಅನುಗುಣವಾಗಿ ಜಾಗತಿಕವಾಗಿ ಕರೋನ ನಿವಾರಕ ಲಸಿಕೆಗಳ ಪೈಕಿ  ಸ್ಪುಟ್ನಿಕ್ ವಿ ಎರಡನೇ ಸ್ಥಾನದಲ್ಲಿದೆ  ಎಂದು ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ. 




ಸುದ್ದಿ ಓದಿ