ಮಾರ್ಚ್ 5 ರಿಂದ ನ್ಯೂಯಾರ್ಕ್ ನಲ್ಲಿ ಚಿತ್ರಮಂದಿರಗಳು ಪುನರಾರಂಭ
ನ್ಯೂಯಾರ್ಕ್, ಫೆಬ್ರವರಿ 23: ಅಮೆರಿಕದಲ್ಲಿ ಕೊರೋನ ಮರಣ ಮೃದಂಗ ಬಾರಿಸಿ ಲಕ್ಷಾಂತರ ಜನರನ್ನು ಅಪೋಶನ ಮಾಡಿದ್ದ ನ್ಯೂಯಾರ್ಕ್ ನಗರದಲ್ಲಿ ಚಿತ್ರಮಂದಿರಗಳು ಮುಂದಿನ ತಿಂಗಳ 5 ರಿಂದ ಮತ್ತೆ ತೆರೆದುಕೊಳ್ಳಲಿವೆ. ತಮ್ಮ ಸಾಮರ್ಥ್ಯದ ಶೇಕಡಾ 25 ರಷ್ಟು ಜನರು ಮಾತ್ರ ಹಾಜರಿಬೇಕು ಎಂದು ತಾಕಿತು ಮಾಡಲಾಗಿದೆ ಚಿತ್ರಮಂದಿರದಲ್ಲಿ ಗರಿಷ್ಠ 50 ಜನರಿರಬೇಕು ಎಂದೂ ನ್ಯೂಯಾರ್ಕ್ ರಾಜ್ಯ ಗವರ್ನರ್ ಆಂಡ್ರ್ಯೂ ಕ್ಯುಮೊ ಪ್ರಕಟಣೆಯಲ್ಲಿ ಪ್ರಕಟಿಸಿದ್ದಾರೆ. ಕಳೆದ ವರ್ಷದ ಕರೋನ ಸೋಂಕಿನ ಕಾರಣ ನ್ಯೂಯಾರ್ಕ್ ನಗರದ ಚಿತ್ರಮಂದಿರಗಳು ಮುಚ್ಚಿದ್ದವು. ಮಾರ್ಚ್ 5 ರ ಬಳಿಕ ಶೇಡಕ 25 ಪ್ರತಿಶತದಷ್ಟು ಸಾಮರ್ಥ್ಯದಲ್ಲಿ ಚಿತ್ರಮಂದಿರ ಮತ್ತೆ ತೆರೆಯಬಹುದು, ಎಂದು ಕ್ಯುಮೊ ಸೋಮವಾರ ಟ್ವಿಟರ್ ಮೂಲಕ ತಿಳಿಸಿದ್ದಾರೆ. ನಿಯೋಜಿತ ಆಸನ, ಸಾಮಾಜಿಕ ಅಂತರ ಇತರೆ ಆರೋಗ್ಯ ನಿಯಮ ಪಾಲನಾ ಮುನ್ನೆಚ್ಚರಿಕೆ ಕ್ರಮ ಜಾರಿಯಲ್ಲಿರುತ್ತವೆ ಎಂದೂ ಹೇಳಿದ್ದಾರೆ. ಅಮೆರಿಕದಲ್ಲಿ ಈವರೆಗೆ ಮಾರಕ ಸೋಂಕಿಗೆ ಸರಿ ಸುಮಾರು 5 ಲಕ್ಷ ಜನರು ಬಲಿಯಾಗಿದ್ದಾರೆ.