ಕೋವಿಡ್ , ಮಾ 10 ರವರೆಗೂ ಆರೋಗ್ಯ ತುರ್ತು ಪರಿಸ್ಥಿತಿ ವಿಸ್ತರಿಸಿದ: ಮೊರೊಕ್ಕೋ
ಕೈರೋ, ಫೆಬ್ರವರಿ 5 : ಕೊರೋನ ಹರಡುವುದನ್ನು ನಿಯಂತ್ರಿಸಲು ಮೊರೊಕ್ಕೋ ಸರ್ಕಾರ ಮುಂದಿನ ತಿಂಗಳ 10 ರವರೆಗೂ ದೇಶಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ವಿಸ್ತರಿಸಲು ನಿರ್ಧರಿಸಿದೆ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ. ಸಾಂಕ್ರಾಮಿಕ ರೋಗ ನಿಗ್ರಹಿಸುವ ಕ್ರಮದ ಭಾಗವಾಗಿ ರಾಷ್ಟಾದಾದ್ಯಂತ ತುರ್ತು ಪರಿಸ್ಥಿತಿ ಅವಧಿಯನ್ನು ವಿಸ್ತರಿಸುವ ಕರಡು ತೀರ್ಮಾನ ಅಂಗೀಕರಿಸಲಾಗಿದೆ. ಈ ವಾರದ ಆರಂಭದಲ್ಲಿ, ದೇಶವು ಕೋವಿಡ್ -19 ಗೆ ಸಂಬಂಧಿಸಿದ, ಕರ್ಫ್ಯೂ ಸೇರಿದಂತೆ ಎಲ್ಲಾ ನಿರ್ಬಂಧಗಳನ್ನು ಎರಡು ವಾರಗಳವರೆಗೆ ವಿಸ್ತರಿಸಿದೆ. ಹಲವುನೆರೆಯ ರಾಷ್ಟ್ರಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಬಹುದೆಂಬ ಆತಂಕದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಆರೋಗ್ಯ ಅಧಿಕಾರಿಗಳ ಪ್ರಕಾರ, ಮೊರೊಕ್ಕೊ 2020 ರ ಆರಂಭದಲ್ಲಿ ಏಕಾಏಕಿ 473,000 ಕ್ಕೂ ಹೆಚ್ಚು ಸೋಂಕು ಪ್ರಕರಣಗಳನ್ನು ದೃಢಪಡಿಸಿತ್ತು.