ಅಂತರರಾಷ್ಟ್ರೀಯ

ಸಾಂಕ್ರಾಮಿಕ ರೋಗದ ವಿರುದ್ಧ ಸಹಕಾರ ಬಲಪಡಿಸಲು ಜಿ 7 ಸಮ್ಮತಿ

ಸಾಂಕ್ರಾಮಿಕ ರೋಗದ ವಿರುದ್ಧ ಸಹಕಾರ ಬಲಪಡಿಸಲು ಜಿ 7 ಸಮ್ಮತಿ

ಲಂಡನ್, ಜೂನ್ 5 :ಕೊರೋನ ನಿಗ್ರಹ  ಮತ್ತು ಭವಿಷ್ಯದ ಸಾಂಕ್ರಾಮಿಕ ರೋಗ ನಿಗ್ರಹಿಸಲು   ಲಸಿಕೆ ಮತ್ತು ಚಿಕಿತ್ಸಾ  ಪ್ರಯೋಗದ ಪರಸ್ಪರ  ಸಹಕಾರ ವೇಗಗೊಳಿಸಲು , ಏಳು ಶ್ರೀಮಂತ ರಾಷ್ಟ್ರಗಳು,  ಗ್ರೂಪ್ ಆಫ್ ಸೆವೆನ್ (ಜಿ 7) ಶುಕ್ರವಾರ ಸಮ್ಮತಿಸಿವೆ. ಎರಡು ದಿನಗಳ ಬಣಗಳ ಸಭೆಯ ಈ ರಾಷ್ಟ್ರಗಳ ಆರೋಗ್ಯ ಮಂತ್ರಿಗಳು ಇದಕ್ಕೆ ಸಮ್ಮತಿಸಿದರು ಎಂದು ಎಂದೂ ವರದಿಯಾಗಿದೆ  ಅಧಿಕೃತ ಹೇಳಿಕೆಯ ಪ್ರಕಾರ, "ಅಂತಾರಾರಾಷ್ಟ್ರೀಯ ಕ್ಲಿನಿಕಲ್ ಪ್ರಯೋಗಗಳಿಂದ ಉತ್ತಮ-ಗುಣಮಟ್ಟ ಕಾಪಾಡಲು ಹಾಗೂ  ಅನಗತ್ಯ ನಕಲು ಮಾಡುವುದನ್ನು ತಪ್ಪಿಸಲು ಚಿಕಿತ್ಸಕ ಮತ್ತು ಲಸಿಕೆಗಳ ಕ್ಲಿನಿಕಲ್ ಟ್ರಯಲ್ಸ್ ಚಾರ್ಟರ್ ಅನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು.

 "ಇದು (ಒಪ್ಪಂದ) ಕ್ಲಿನಿಕಲ್ ಪ್ರಯೋಗಗಳನ್ನು ಸುಧಾರಿಸುವ ಮೂಲಕ, ಸುರಕ್ಷಿತ ಲಸಿಕೆಗಳಿಗೆ ತ್ವರಿತವಾಗಿ ಮತ್ತು ವ್ಯಾಪಕವಾದ ಪ್ರವೇಶ, ದತ್ತಾಂಶದ ಉತ್ತಮ ಬಳಕೆ, ಹೆಚ್ಚು ನಿಖರ ಆರೋಗ್ಯ ಕಣ್ಗಾವಲು ಸಾಧನಗಳು ಮತ್ತು ದೇಶಗಳ ನಡುವಿನ ಹೆಚ್ಚಿನ ಸಹಯೋಗದ ಮೂಲಕ ಜನರನ್ನು  ಸುರಕ್ಷಿತವಾಗಿಡುವ  ಕ್ರಮಗಳ ಸರಣಿ ಒಳಗೊಂಡಿದೆ  ಎಂದು ಯುಕೆ ಆರೋಗ್ಯ ಸಚಿವ ಹೇಳಿದರೆಂದು ಉಲ್ಲೇಖಿಸಲಾಗಿದೆ.ಇದರ ಜೊತೆಗೆ  ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್,ಇಂಗ್ಲೆಂಡ್ ಅಮೆರಿಕ ಕೂಡಿದ ಜಿ 7 ಸಹ ಪರೀಕ್ಷೆ ಮತ್ತು ವ್ಯಾಕ್ಸಿನೇಷನ್ ಪ್ರಮಾಣಪತ್ರಗಳ  ಗುರುತಿಸುವಿಕೆಗಾಗಿ ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡಿವೆ. 




ಸುದ್ದಿ ಓದಿ