ಯುರೋಪ್ ನಲ್ಲಿ ಅಸ್ಟ್ರಾಜೆನಿಕಾಗಿಂತ ಫೈಜರ್ ಲಸಿಕೆಯಿಂದಲೇ ಹೆಚ್ಚಿನ ಸಾವು
ಲಂಡನ್, ಮೇ 27 :ಜಗತ್ತಿನಲ್ಲಿ ಕರೋನ ಲಸಿಕೆ ಬಳಕೆ ಮತ್ತು ಅವುಗಳ ಸುರಕ್ಷತೆ ಬಗ್ಗೆ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದೆ. ಹೀಗಾಗಿ ಯಾವ ಲಸಿಕೆ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಬೇರೆ ಬೇರೆ ದೇಶಗಳಲ್ಲೂ ಜನಸಾಮಾನ್ಯರಿಗೆ ಗೊಂದಲ ಮತ್ತು ಆತಂಕ ಕಾಡುತ್ತಿದೆ. ಯುರೋಪಿಯನ್ ಆರು ದೇಶಗಳ ದೇಶಗಳಲ್ಲಿ ಫೈಜರ್ ಲಸಿಕೆಗಿಂರ ಆಸ್ಟ್ರಜೆನಿಕಾ ಬಹಳ ಪರಿಣಾಮ ಕಾರಿ ಎಂದು ಸ್ಪುಟ್ನಿಕ್ ಕಂಪನಿ ವರದಿ ಹೇಳಿದೆ. ಅಸ್ಟ್ರಾಜೆನೆಕಾ ಗಿಂತ ಪೈಜರ್ ಲಸಿಕೆಯಿಂದ ಹೆಚ್ಚಿನ ಸಾವುಗಳು ಈ ದೇಶದಲ್ಲಿ ವರದಿಯಾಗಿರುವುದಾಗಿ ಕಂಪನಿ ವರದಿ ಹೇಳಿದೆ. ಸರ್ಕಾರಗಳು ಮತ್ತು ಸಂಬಂಧಿತ ವೈದ್ಯಕೀಯ ಸಂಸ್ಥೆಗಳು ಸಲ್ಲಿಸಿದ ಅಂಕಿಅಂಶಗಳ ಪ್ರಕಾರ, ಫ್ರಾನ್ಸ್ ಫಿಜರ್‌ಗೆ ಪ್ರತಿ ಮಿಲಿಯನ್ ಡೋಸ್‌ಗೆ 45.3 ಮಾರಣಾಂತಿಕ ಪ್ರಕರಣಗಳನ್ನು ದಾಖಲಿಸಿದೆ ಮತ್ತು ಅಸ್ಟ್ರಾಜೆನೆಕಾಗೆ 17.9 ರಷ್ಟಿದೆ. ಇತರೆ ದೇಶಗಳಲ್ಲೂ ಪೈಜರ್ ಬಳಕೆಯಿಂದ ಹೆಚ್ಚಿನ ಸಾವಿನ ಪ್ರಕರಣ ವರದಿಯಾಗಿದೆ. ನಾರ್ವೆ , ಆಸ್ಟ್ರಿಯಾ ಇಟಲಿಯಲ್ಲಿ ಪೈಜರ್ ಬಳಕೆಯಿಂದ ಹೆಚ್ಚು ಸಾವಿನ ಘಟನೆಗಳು ವರದಿಯಾಗಿದೆ ಎಂದು ಹೇಳಲಾಗಿದೆ.ಲಸಿಕೆಯಿಂದ ಗಂಭೀರ ಅಡ್ಡಪರಿಣಾಮಗಳ ಅಪಾಯ ತಪ್ಪಲಿದೆ ಎಂದು ಯುಕೆ ಡ್ರಗ್ ರೆಗ್ಯುಲೇಟರ್ ಮತ್ತು ವಿಜ್ಞಾನಿಗಳು ಪದೇ ಪದೇ ಹೇಳುತ್ತಿದ್ದಾರೆ .