ಅಂತರರಾಷ್ಟ್ರೀಯ

ಚೀನೀ ಮುಖ್ಯಭಾಗದಲ್ಲಿ 7 ಹೊಸ ಕೊರೋನ ಪ್ರಕರಣ ಪತ್ತೆ

ಚೀನೀ ಮುಖ್ಯಭಾಗದಲ್ಲಿ  7 ಹೊಸ ಕೊರೋನ ಪ್ರಕರಣ ಪತ್ತೆ

ಬೀಜಿಂಗ್, ಜೂನ್ 6 : ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಸ್ಥಳೀಯವಾಗಿ 7  ಹೊಸ ಕೊರೊನ ಪ್ರಕರಣಗಳು ವರದಿಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಭಾನುವಾರ ತಿಳಿಸಿದೆ. ಅದೇ ದಿನ ಮುಖ್ಯ ಭೂಭಾಗದಲ್ಲಿ 23 ಹೊಸ ಆಮದು ಪ್ರಕರಣಗಳು ಪತ್ತೆಯಾಗಿವೆ.  ಅವುಗಳಲ್ಲಿ, ಶಾಂಘೈನಲ್ಲಿ7,  ಸಿಚುವಾನ್‌ನಲ್ಲಿ 6,  ಗುವಾಂಗ್‌ಡಾಂಗ್ ಮತ್ತು ಯುನ್ನಾನ್‌ನಲ್ಲಿ ತಲಾ 2,  ಮತ್ತು ಬೀಜಿಂಗ್, ಟಿಯಾಂಜಿನ್, ಜಿಯಾಂಗ್ , ಫುಜಿಯಾನ್ ಮತ್ತು ಶಾಂಕ್ಸಿಗಳಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ. ಮುಖ್ಯ ಭೂಭಾಗದ ಹೊರಗೆ ಎರಡು ಹೊಸ ಶಂಕಿತ ಪ್ರಕರಣಗಳು ಶಾಂಘೈನಲ್ಲಿ ವರದಿಯಾಗಿವೆ. ಆದರೆ ರೋಗಕ್ಕೆ ಸಂಬಂಧಿಸಿದ ಯಾವುದೇ ಹೊಸ ಸಾವಿನ ಪ್ರಕರಣ  ವರದಿಯಾಗಿಲ್ಲ.


ಸುದ್ದಿ ಓದಿ